ಎಸ್ ವೈ ಎಸ್ ಮದನಿ ನಗರ ಬ್ರಾಂಚಿಗೆ ನೂತನ ಸಾರಥ್ಯ
ನೂತನಾಧ್ಯಕ್ಷರಾಗಿ ಇಸ್ಮಾಯಿಲ್ ಮದನಿ ಆಯ್ಕೆ
ಎಸ್ ವೈ ಎಸ್ ಮದನಿ ನಗರ ಬ್ರಾಂಚ್ ಮಹಾಸಭೆ ಹಾಗು ನೂತನ ಸಮಿತಿ ರಚನಾ ಕಾರ್ಯಕ್ರಮ ಮದನಿ ನಗರದ ಸಯ್ಯಿದ್ ಮದನಿ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ ಎಸ್ ವೈ ಎಸ್ ದ.ಕ ಜಿಲ್ಲಾ ಕೋಶಾಧಿಕಾರಿ ಹನೀಫ್ ಹಾಜಿ ಉಳ್ಳಾಲ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಲ್, ಸೆಂಟರ್ ಕೋಶಾಧಿಕಾರಿ ಇಸಾಕ್ ಪೇಟೆ ರವರ ನೇತ್ರತ್ವದಲ್ಲಿ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಇಸ್ಮಾಯಿಲ್ ಮದನಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಎಪಿ, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಎಸ್ ಎ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಮುಸ್ತಫ, ಶಿಕ್ಷಣ ಹಾಗು ದಅವಾ ವಿಭಾಗದ ಕಾರ್ಯದರ್ಶಿಯಾಗಿ ಸಮದ್ ಉಳ್ಳಾಲ, ಸಾಂತ್ವನ ಹಾಗು ಇಸಾಬಃ ವಿಭಾಗದ ಕಾರ್ಯದರ್ಶಿಯಾಗಿ ಅಹ್ಮದ್ ಪುತುಬಾವರವರನ್ನು ಆರಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಮದನಿ ನಗರ ಎಸ್ ವೈ ಎಸ್ ನೇತಾರರು ಕಾರ್ಯಕರ್ತರು ಭಾಗವಹಿಸಿದರು.



Comments