Skip to main content

Posts

Showing posts from June, 2020

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸದಸ್ಯರ ಸದಸ್ಯತನದ ಐಡಿ ಕಾರ್ಡ್ ಹಸ್ತಾಂತರ

ಎಸ್ ವೈ ಎಸ್  ದ.ಕ ಜಿಲ್ಲಾ ವತಿಯಿಂದ  ನಡೆದ  ಸಭೆಯಲ್ಲಿ  ಎಸ್ ವೈ ಎಸ್ ಜಿಲ್ಲಾಧ್ಯಕ್ಷರಾದ ಅಶ್ಅರಿಯ್ಯಃ ಮುಹಮ್ಮದ್ ಅಲಿ ಸಖಾಫಿಯವರಿಂದ ಎಸ್ ವೈ ಎಸ್  ಉಳ್ಳಾಲ ಸೆಂಟರ್  ಸದಸ್ಯರ  ಸದಸ್ಯತನದ  ಐಡಿ  ಕಾರ್ಡ್  ಸ್ವೀಕರಿಸುತ್ತಿರುವ  ಎಸ್ ವೈ ಎಸ್  ಉಳ್ಳಾಲ  ಸೆಂಟರ್  ಗೌರವಾಧ್ಯಕ್ಷರಾದ  ಸಯ್ಯಿದ್  ಜಲಾಲ್  ತಂಗಲ್. ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ರಾಜ್ಯ ಸದಸ್ಯರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಹಾಗು ಎಸ್ ವೈ ಎಸ್ ಜಿಲ್ಲಾ ನಾಯಕರು ಭಾಗವಹಿಸಿದ್ದರು.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಈ ಲಾಕ್ಡೌನ್ ಮತ್ತು ಪವಿತ್ರ ರಂಝಾನ್ ಸಂದರ್ಭ ಹಮ್ಮಿಕೊಂಡ ಸಾಂತ್ವನ ಚಟುವಟಿಕೆಗಳ ಕುರಿತು ಪುಟ್ಟ ಮಾಹಿತಿ.

ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹಿ ವಬರಕಾತುಹು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಈ ಲಾಕ್ಡೌನ್ ಮತ್ತು ಪವಿತ್ರ ರಂಝಾನ್ ಸಂದರ್ಭ ಹಮ್ಮಿಕೊಂಡ ಸಾಂತ್ವನ ಚಟುವಟಿಕೆಗಳ ಕುರಿತು ಪುಟ್ಟ ಮಾಹಿತಿ. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದಲ್ಲಿ 13 ಬ್ರಾಂಚುಗಳು ಒಳಗೊಂಡಿದ್ದು, ಪ್ರತಿಯೊಂದು ಬ್ರಾಂಚುಗಳು ಕೂಡಾ ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ. ಜಗತ್ತಿಗೆ ಮಾರಕವಾಗಿ ಬಾಧಿಸಿದ ಕೋರೋಣ ವೈರಸ್ ಭಾರತಕ್ಕೆ ಅಬ್ಬರಿಸಿದ ಪರಿಣಾಮ ಕೇಂದ್ರ ಹಾಗು ರಾಜ್ಯ ಸರ್ಕಾರ ಲಾಕ್ ಡೌನ್ ನಿಯಮ ಜಾರಿಗೆ ತಂದಿತು. ಈ ಮೂಲಕ ಜನರು ಸಂಕಷ್ಟಕ್ಕೆ ಒಳಗಾದರು. ಅದರಲ್ಲೂ ಬಡ ಹಾಗು ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟವನ್ನು ಅನುಭವಿಸುವಂತಾಯಿತು. ಇದನ್ನರಿತ ರಾಜ್ಯ ಎಸ್ ವೈ ಎಸ್ ಜನರ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವ್ರತ್ತರಾದರು. ಇದರ ಅಧೀನದಲ್ಲಿ ಕಾರ್ಯಾಚರಿಸುವ ರಾಜ್ಯದ ಎಲ್ಲಾ ಜಿಲ್ಲೆ, ಸೆಂಟರ್ ಹಾಗು ಬ್ರಾಂಚಿಗಳಿಗೆ ಆದೇಶವನ್ನು ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕರೆ ನೀಡಿದರು. ರಾಜ್ಯದ ವಿವಿಧ ಭಾಗಗಳಲ್ಲಿ ಸುನ್ನೀ ಸಂಘಟನೆಗಳು ಕಾರ್ಯಾಚರಣೆಗೆ ಇಳಿದವು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ನಾಯಕರು, ಕಾರ್ಯಕಾರಿ ಸಮಿತಿ ಸದಸ್ಯರನ್ನೊಳಗೊಂಡ ತಂಡ ಜನರ ಸಮಸ್ಯೆಗಳಿಗೆ ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ತುರ್ತು ಆನ್ಲೈನ್ ಸಭೆ ನಡೆಸಿ ಲಾಕ್ ಡೌನ್ ಹಾಗು ರಂಝಾನ್ ಸಂದರ್ಭದಲ್ಲಿ ಜಾತಿ ಮತ ಭೇದ ಮರೆತು ಅರ್ಹ ಕುಟುಂಬಗಳಿಗೆ ರೇಷನ್ ಕಿಟ್ಟುಗಳ ವಿತರಣೆ, ಅರ್ಹ...

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಾಳೆಗೊಂದು ನೆರಳು ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಸಸಿ ನೆಡಲಾಯಿತು. ಎಸ್ ವೈ ಎಸ್ ರಾಜ್ಯ ಸದಸ್ಯರೂ, SYS ಉಳ್ಳಾಲ ಸೆಂಟರ್ ನಾಯಕರೂ ಆದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು. ನೆಡಲ್ಪಟ್ಟ ಗಿಡ ಮುಂದೆ ಮರವಾಗಿ ಮನುಷ್ಯ,ಪ್ರಾಣಿ ಪಕ್ಷಿಗಳು,ಹಕ್ಕಿಗಳು,ಜಂತುಗಳು ಹೀಗೆ ಯಾರೆಲ್ಲಾ ಪ್ರಯೋಜನ ಪಡೆಯುತ್ತಿರುತ್ತಾರೋ ಆವಾಗಲೆಲ್ಲಾ ಗಿಡ ನೆಟ್ಟು ಪೋಷಿಸಿ ಬೆಳೆಸಿದವನಿಗೆ ಪ್ರತಿಫಲ ಲಭಿಸುತ್ತಲೇ ಇರುತ್ತದೆ ಎಂದು ಪ್ರವಾದಿ (ಸ.ಅ) ಹೇಳಿರುವರು. ಗಿಡ ನೆಟ್ಟು ಬೆಳೆಸುವುದನ್ನು ಇಸ್ಲಾಂ ಪ್ರೋತ್ಸಾಹಿಸುತ್ತದೆ ಮಾತ್ರವಲ್ಲ ಅಪಾರ ಪುಣ್ಯ ಲಭಿಸುವ ಒಂದು ಕೆಲಸವಾಗಿದೆ ಎಂದು ಈಮೇಲಿನ ಹದೀಸ್ ಮೂಲಕ ತಿಳಿಯಬಹುದು ಎಂದು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ತಿಳಿಸಿದರು. ಕಾರ್ಯಕ್ರಮದಲ್ಲಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯ ಸತ್ತಾರ್ ಮೇಲಂಗಡಿ, ಸೆಂಟರ್ ಕಾರ್ಯಕ್ರಮ ನಿರ್ವಹಣಾ ಕಾರ್ಯದರ್ಶಿ ಇಲ್ಯಾಸ್ ಕೈಕೋ ಗಿಡ ನೆಡುವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ✍  ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ