Skip to main content

Posts

Showing posts from 2022

ತಾಜುಲ್ ಫುಖಹಾ ಫಿಕ್ಹ್ ಕ್ಲಾಸ್

ಉಳ್ಳಾಲ : ಎಸ್ ವೈ ಎಸ್ ಪಟ್ಲ ಬ್ರಾಂಚ್  ವತಿಯಿಂದ ಮಾಸಂಪ್ರತಿ ನಡೆಸುವ ತಾಜುಲ್  ಫುಖಹಾ ಫಿಕ್ಹ್ ಕ್ಲಾಸ್ ಎಸ್ಸೆಸ್ಸೆಫ್ ಪಟ್ಲ ಶಾಖಾ ಆಫೀಸ್ ಹಾಲಲ್ಲಿ ಜರುಗಿತು. ಬ್ರಾಂಚ್ ಉಸ್ತುವಾರಿ ನವಾಝ್ ಸಖಾಫಿ ಉಳ್ಳಾಲ ತರಗತಿ ನಡೆಸಿದರು. ಬಳಿಕ ಪವಿತ್ರ ಉಮ್ರಾ ಯಾತ್ರೆಗೆ ಹೊರಡುವ  SYS ಪಟ್ಲ ಬ್ರಾಂಚಿನ ಅಧ್ಯಕ್ಷರು ಹಾಗೂ ದರ್ಗಾ ಸಮಿತಿ ಸದಸ್ಯರು ಆದ  ಮೊಯ್ದಿನಾಕ ಇವರಿಗೆ  ಎಸ್ ವೈ ಎಸ್ ಪಟ್ಲ ಬ್ರಾಂಚ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಎಸ್ಸೆಸ್ಸೆಫ್ ಪಟ್ಲ ಶಾಖೆ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಪ್ರಸ್ತುತ ತರಗತಿಯಲ್ಲಿ ಎಸ್ ವೈ ಎಸ್, ಎಸ್ಸೆಸ್ಸೆಫ್ ನಾಯಕರು, ಸದಸ್ಯರು ಉಪಸ್ಥಿತರಿದ್ದರು. ತರಗತಿಯ ಪುಟ್ಟ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಮೌಲಿದ್ ಮಜ್ಲಿಸಿಗೆ ಚಾಲನೆ

ಮೌಲಿದ್ ಮಜ್ಲಿಸಿಗೆ ಚಾಲನೆ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಹಮ್ಮಿಕೊಂಡ ಮನೆ ಮನೆಗಳಲ್ಲಿ ಮೌಲಿದ್ ಮಜ್ಲಿಸ್ ಕಾರ್ಯಕ್ರಮದ ಪ್ರಥಮ ಮಜ್ಲಿಸ್ ಹಮೀದಾಕ ಹಳೆಕೋಟೆಯವರ ನಿವಾಸದಲ್ಲಿ ನಿನ್ನೆ ಮಗ್ರಿಬ್ ಬಳಿಕ ನಡೆಯಿತು. ಬ್ರಾಂಚ್ ಸದಸ್ಯರಾದ ಆರ್.ಕೆ ಮದನಿ ಅಕ್ಕರೆಕೆರೆಯವರ ನೇತ್ರತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಯಿತು. ಇಂದು ಬೆಳಿಗ್ಗೆ ಮುಹಮ್ಮದ್ ಅಕ್ಕರೆಕೆರೆಯವರ ನಿವಾಸದಲ್ಲಿ ದಅವಾ ಕಾರ್ಯದರ್ಶಿ ಅಶ್ರಫ್ ಝುಹ್ರಿಯವರ ನೇತ್ರತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಯಿತು. ಮಜ್ಲಿಸಿನಲ್ಲಿ ಬ್ರಾಂಚ್ ನಾಯಕರು, ಸದಸ್ಯರು ಹಾಗು ಮನೆ ಮಂದಿ ಹಾಜರಿದ್ದರು.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಪಝಶ್ಶೀ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಪಝಶ್ಶೀ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮ ಉಳ್ಳಾಲ ಆಝಾದ್ ನಗರದ ಇಸ್ಲಾಮಿಕ್ ನೋಲೇಜ್ ಸೆಂಟರಿನಲ್ಲಿ ನಡೆಯಿತು. ಎಸ್ ವೈ ಎಸ್ ದ.ಕ ಜಿಲ್ಲಾ ನಾಯಕರಾದ ಸಯ್ಯಿದ್ ಜಲಾಲ್ ತಂಗಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೆಂಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಪಝಶ್ಶೀ ಉಸ್ತಾದರ ಕುರಿತು ಮಾತನಾಡಿ, ದುಆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ರಾಜ್ಯ ನಾಯಕರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಹಾಗು ಸೆಂಟರ್ ನಾಯಕರುಗಳು, ಸದಸ್ಯರು ಹಾಜರಿದ್ದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಕ್ ಸ್ವಾಗತಿಸಿದರು.

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಚಿಕಿತ್ಸಾ ನೆರವು

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ 10,800 ರೂಪಾಯಿಗಳನ್ನು ಚಿಕಿತ್ಸಾ ಸಹಾಯವಾಗಿ ಮೂವರು ರೋಗಿಗಳಿಗೆ ಹಂಚಲಾಯಿತು. ಸಹಾಯ ಸಹಕಾರ ನೀಡಿದ ಎಲ್ಲರಿಗೂ ಅಲ್ಲಾಹನು ಇಹಪರದಲ್ಲಿ ತಕ್ಕ ಪ್ರತಿಫಲ ನೀಡಲಿ, ಜೀವನ, ಮಕ್ಕಳು, ಕುಟುಂಬ, ವ್ಯಾಪಾರ ವಹಿವಾಟು, ಕೆಲಸ ಕಾರ್ಯಗಳಲ್ಲಿ ಸಮ್ರದ್ಧಿ, ಐಶ್ವರ್ಯ, ಅಭಿವೃದ್ಧಿ ನೀಡಲಿ, ಎಲ್ಲಾ ತರದ ಆಪತ್ತು, ವಿಪತ್ತು, ರೋಗ ರುಜಿನ, ಕಷ್ಟ ಕಾರ್ಪಣ್ಯಗಳಿಂದ ಅಲ್ಲಾಹನು ಸಂರಕ್ಷಿಸಲಿ. ರೋಗಿಗಳಿಗೆ ಬಲು ಬೇಗನೇ ಶಿಫಾ ನೀಡಿ ಸಂಪೂರ್ಣ ಆರೋಗ್ಯವನ್ನು ಅಲ್ಲಾಹನು ಮರಳಿ ನೀಡಲಿ. ಆಮೀನ್.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಉಳ್ಳಾಲ ವ್ಯಾಪ್ತಿಯ ವೈದ್ಯರುಗಳಿಗೆ ಗೌರವಾರ್ಪಣೆ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಜುಲೈ 01 ರಂದು ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಉಳ್ಳಾಲ ವ್ಯಾಪ್ತಿಯಲ್ಲಿ ಬರುವ ವೈದ್ಯರುಗಳ ಸೇವೆಯನ್ನು ಗುರುತಿಸಿ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲಾಯಿತು. ರೋಗಿಗಳ ಆರೋಗ್ಯವನ್ನು ಪುನಃ ಸ್ಥಾಪಿಸಲು ಮತ್ತು ಕಳೆದು ಹೋದ ನಗು ಮುಖವನ್ನು ಮರಳಿ ತರಲು ಅಪಾರವಾಗಿ ಶ್ರಮ ವಹಿಸಿದ,  ಜೀವದ ಹಂಗು ತೊರೆದು ರೋಗಿಗಳಿಗೆ ಚಿಕಿತ್ಸೆ ನೀಡಿದ ಹಲವು ವೈದ್ಯರುಗಳು ಉಳ್ಳಾಲ ವ್ಯಾಪ್ತಿಯಲ್ಲಿ ಇದ್ದಾರೆ. ಇವರುಗಳಲ್ಲಿ ಪ್ರತ್ಯೇಕವಾಗಿ 4 ವೈದ್ಯರುಗಳನ್ನು ವಿಶೇಷವಾಗಿ ಪರಿಗಣಿಸಿ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು.  ಜನತೆಯ ಆರೋಗ್ಯ ರಕ್ಷಣೆಗೆ ಸ್ವಯಂ ಮರೆತು ಹಗಲಿರುಳು ದುಡಿದ ಡಾ ಭಾಸ್ಕರ್ ಒಳಪೇಟೆ ತೊಕ್ಕೋಟು, ಡಾ ಸಾಜನ್ ಆಝಾದ್ ನಗರ ಮಾಸ್ತಿಕಟ್ಟೆ, ಡಾ ಉಪಾಧ್ಯಾಯ ಭಗವತಿ ಕ್ಷೇತ್ರ ಉಳ್ಳಾಲ, ಡಾ ಮಲಿಕ್ ಇನ್ ಲ್ಯಾಂಡ್ ಬಿಲ್ಡಿಂಗ್ ಉಳ್ಳಾಲ ಪೇಟೆ ಇವರುಗಳನ್ನು ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಶುಭಾಶಯ ತಿಳಿಸಿ ಸ್ಮರಣಿಕೆ ನೀಡಿ ಅಭಿನಂದಿಸಿ ಗೌರವಿಸಲಾಯಿತು ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ, ರಾಜ್ಯ ಎಸ್ ವೈ ಎಸ್ ಪಬ್ಲಿಕ್ ರಿಲೇಶನ್ಸ್ ಕಾರ್ಯದರ್ಶಿ ಬಿ.ಜಿ. ಹನೀಫ್ ಹಾಜಿ, ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್ ,  ಇಸಾಬಃ ಅಮೀರ್ ಶರೀಫ್ ಮಂಚಿಲ,...

ಜುಲೈ 10 ಆದಿತ್ಯವಾರ ಈದುಲ್ ಅದ್'ಹಾ. ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಕೂರತ್ ತಂಗಲ್ ಘೋಷಣೆ.

ಇಂದು ( ಗುರುವಾರ ಅಸ್ತ ಶುಕ್ರವಾರ )  ರಾತ್ರಿ  ದ್ಸುಲ್ ಹಿಜ್ಜಃ   ತಿಂಗಳ  ಚಂದ್ರ  ದರ್ಶನವಾದ ಖಚಿತ ಮಾಹಿತಿಯ  ಹಿನ್ನೆಲೆಯಲ್ಲಿ  ಜುಲೈ 01  ಶುಕ್ರವಾರ  ದ್ಸುಲ್ ಹಿಜ್ಜ  ತಿಂಗಳ ಚಾಂದ್ ಒಂದು ಆಗಿದೆ,  ಅದರಂತೆ  ಜುಲೈ 09  ಶನಿವಾರ   ಅರಫಾ  ದಿನ  ಮತ್ತು ಜುಲೈ 10,  ಆದಿತ್ಯವಾರ  ಈದುಲ್ ಅದ್'ಹಾ  ( ಬೆಲಿಯೆ ಪೆರ್ನಾಲ್ )  ಆಚರಿಸಲಾಗುತ್ತದೆ  ಎಂದು  ಗೌರವಾನ್ವಿತ  ದ.ಕ  ಜಿಲ್ಲೆಯ ಉಳ್ಳಾಲ ಹಾಗು ನೂರಾರು ಮೊಹಲ್ಲಾಗಳ ಸಂಯುಕ್ತ  ಜಮಾಅತ್  ಖಾಝಿ  ಖುರ್ರತುಸ್ಸಾದಾತ್  ಅಸ್ಸಯ್ಯಿದ್  ಫಝಲ್  ಕೋಯಮ್ಮ  ಮದನಿ  ಅಲ್  ಬುಖಾರಿ  ಕೂರತ್  ತಂಗಳ್  ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The  Honourable  Khazi of Ullala  Qurrathussadath  Seyyid  Fazal  Koyamma  Thangal  Al Bukhari  has  announced  that  July 01-2022  is  first  of  Dul hijja  and The Day of Arafa July 09,  Eid ul ad'ha  will be  celebrated  ...

ತೀವ್ರವಾದ ಮಳೆಗಾಳಿ, ಜಾಗ್ರತೆ ಪಾಲಿಸಿ.

ರಾಜ್ಯದಾದ್ಯಂತ ಹಲವು ಜಿಲ್ಲೆಗಳಲ್ಲಿ ಮಳೆಗಾಳಿಯ ಆರ್ಭಟ ತೀವ್ರವಾಗಿದ್ದು, ಅಪಾಯದ ಮುನ್ಸೂಚನೆ ಇರುವ ಮನೆ, ತಗ್ಗು  ಪ್ರದೇಶದ  ಮತ್ತು  ಕಡಲು  ಕಿನಾರೆ  ನಿವಾಸಿಗಳು  ಆದಷ್ಟು ಜಾಗ್ರತೆ ವಹಿಸಬೇಕು  ಎಂದು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸೂಚಿಸುತ್ತಿದೆ. ಅಲ್ಲಾಹನು ನಮ್ಮನ್ನು, ನಮ್ಮ ಕುಟುಂಬ, ಬಂಧು ಮಿತ್ರಾದಿಗಳನ್ನು ಎಲ್ಲಾ ಆಪತ್ತು, ಮುಸೀಬತುಗಳಿಂದ ರಕ್ಷೆ ನೀಡಲಿ. ಆಮೀನ್. ಎಸ್ ವೈ ಎಸ್ ಉಳ್ಳಾಲ ಸೆಂಟರ್

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಾಗು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಮಂಜನಾಡಿ ಅಲ್ ಮದೀನಕ್ಕೆ ಸಂದಲ್ ಮೆರವಣಿಗೆ

ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ (ನ.ಮ) 3 ನೇ ಉರೂಸ್ ಮುಬಾರಕ್ ಪ್ರಯುಕ್ತ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಾಗು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಮಂಜನಾಡಿ ಅಲ್ ಮದೀನಕ್ಕೆ ಅಕ್ಕಿ, ಸಕ್ಕರೆ, ತೆಂಗಿನ ಕಾಯಿ, ತರಕಾರಿಗಳು ಹಾಗು ಇನ್ನಿತರ ಸಂದಲ್ ಮೂಲಕ  ಎರಡು ಟೆಂಪೋಗಳಲ್ಲಿ ಸಾಗಿಸಲಾಯಿತು. ಈ ಸಂದರ್ಭದಲ್ಲಿ ಉಳ್ಳಾಲ ಎಸ್ ವೈ ಎಸ್ ಹಾಗು ಎಸ್ಸೆಸ್ಸೆಫ್ ನಾಯಕರುಗಳು ಉಪಸ್ಥಿತರಿದ್ದರು.

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸಸಿ ವಿತರಣಾ ಕಾರ್ಯಕ್ರಮ

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸಸಿ ವಿತರಣಾ ಕಾರ್ಯಕ್ರಮ ಸುನ್ನೀ ಯುವಜನ ಸಂಘ ಅಳೇಕಲ ಬ್ರಾಂಚ್ ಉಳ್ಳಾಲ ಇದರ ಪ್ರಯುಕ್ತ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸಸಿ ವಿತರಣಾ ಕಾರ್ಯಕ್ರಮವು ಅಳೇಕಲ ಜುಮಾ ಮಸೀದಿಯ ವಠಾರದಲ್ಲಿ ಯು ಎಸ್ ಹಂಝ ಹಾಜಿ ಯವರ ಅಧ್ಯಕ್ಷತೆಯಲ್ಲಿ ಜರುಗಿತು. ಇಬ್ರಾಹೀಮ್ ಸಖಾಫಿ ಸೇರ್ಕಳ ಉಸ್ತಾದರು ದುಆ ಮೂಲಕ ಚಾಲನೆ ನೀಡಿದರು. ಸ್ಥಳೀಯ ಕೌನ್ಸಿಲರುಗಳಾದ ಯು ಎ ಇಸ್ಮಾಯಿಲ್, ಅಸ್ಗರ್ ಅಲಿ, ಬ್ರಾಂಚ್ ಅಧ್ಯಕ್ಷರಾದ ಮುಹಮ್ಮದ್ ರಿಯಾಝ್, ಕೋಶಾಧಿಕಾರಿ ಅಬ್ದುಲ್ ಲತೀಫ್, SYS ಅಳೇಕಲ ಬ್ರಾಂಚ್ ಉಸ್ತುವಾರಿಯಾದ ಮನ್ಸೂರ್ ಹಳೇಕೋಟೆ, ಖ್ಯಾತ ಪತ್ರಕರ್ತರಾದ B S ಇಸ್ಮಾಯೀಲ್ ಹಾಗೂ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಂಬೂಟನ್, ಪುನರ್ ಪುಲಿ, ನೇರಳೆ, ಸಪೋಟ, ಮಾವಿನಗಿಡ ಮುಂತಾದ ವಿವಿಧ ತಳಿಯ ಸಸಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಅನ್ಸಾರ್ ಅಳೇಕಲ ಸ್ವಾಗತಿಸಿ, ಧನ್ಯವಾದ ಗೈದರು. 3 ಸ್ವಲಾತ್ ನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.

ಎಸ್ ವೈ ಎಸ್ ಪಟ್ಲ ಬ್ರಾಂಚ್ ವತಿಯಿಂದ ಈದ್ ಕಿಟ್ ವಿತರಣೆ

ಎಸ್ ವೈ ಎಸ್ ಪಟ್ಲ ಬ್ರಾಂಚ್ ವತಿಯಿಂದ ಇಂದು (29/4/2022)  ಜುಮಾ ನಮಾಝಿನ ನಂತರ ಪಟ್ಲ ಜುಮಾ ಮಸೀದಿ ಬಳಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಟ್ಲ ಮೊಹಲ್ಲಾದ 20 ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಲ ಮಸೀದಿಯ ಮುದರ್ರಿಸ್ ಸುಲೈಮಾನ್ ಉಸ್ತಾದ್, ಮಸೀದಿಯ ಅಧ್ಯಕ್ಷರಾದ ಜಮಾಲ್ ಹಾಗು ಎಸ್ ವೈ ಎಸ್ ಪಟ್ಲ ಬ್ರಾಂಚ್ ನಾಯಕರುಗಳು, ಸದಸ್ಯರುಗಳು ಉಪಸ್ಥಿತರಿದ್ದರು.

ಬಡ ಕುಟುಂಬಗಳಿಗೆ ಸಾಂತ್ವನದ ಸ್ಪರ್ಶ.ರಂಝಾನ್ ಕಿಟ್ ವಿತರಣೆ.

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಬಡ ಕುಟುಂಬಗಳಿಗೆ ವರ್ಷಂಪ್ರತಿ ವಿತರಿಸಿಕೊಂಡು ಬರುತ್ತಿದ್ದ ರಂಝಾನ್ ಕಿಟ್ ಈ ವರ್ಷವೂ ರಂಝಾನ್ ತಿಂಗಳಲ್ಲಿ ವಿತರಿಸಲಾಯಿತು. ಉಳ್ಳಾಲ ಅಕ್ಕರೆಕೆರೆಯ ಝುಹ್ರಿ ಪ್ಯಾಲೇಸಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ 23 ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು. ಬ್ರಾಂಚ್ ಅಧ್ಯಕ್ಷರಾದ ಅಬೂಬಕರ್ ಸಿದ್ದೀಕ್ ಅಕ್ಕರೆಕೆರೆ, ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಬ್ರಾಂಚ್ ನಾಯಕರಾದ  ಕುತ್ತಾರ್ ಮುಹಮ್ಮದ್ ಹಳೆಕೋಟೆ, ಸೆಂಟರ್ ಸಾಂತ್ವನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಅಕ್ಕರೆಕೆರೆ, ಬ್ರಾಂಚ್ ದಅವಾ ಕಾರ್ಯದರ್ಶಿ ಅಶ್ರಫ್ ಝುಹ್ರಿ ಅಕ್ಕರೆಕೆರೆ, ಆರ್ ಕೆ ಮದನಿ ಅಮ್ಮೆಂಬಳ, ಹಸನ್ ಹಾಜಿ ಅಕ್ಕರೆಕೆರೆ, ಖಲೀಲ್ ಹಳೆಕೋಟೆ ಹಾಗು ಟೈಲರ್ ಬದ್ರುದ್ದೀನ್ ಉಪಸ್ಥಿತರಿದ್ದರು. ಕಿಟ್ ವಿತರಣೆಯ ವೀಡಿಯೋ. ಕೆಳಗಿನ ಲಿಂಕ್ ಒತ್ತಿರಿ. https://youtu.be/AfIL9vOoJpw