ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಉಳ್ಳಾಲ ವ್ಯಾಪ್ತಿಯ ವೈದ್ಯರುಗಳಿಗೆ ಗೌರವಾರ್ಪಣೆ
ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಜುಲೈ 01 ರಂದು ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಉಳ್ಳಾಲ ವ್ಯಾಪ್ತಿಯಲ್ಲಿ ಬರುವ ವೈದ್ಯರುಗಳ ಸೇವೆಯನ್ನು ಗುರುತಿಸಿ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲಾಯಿತು. ರೋಗಿಗಳ ಆರೋಗ್ಯವನ್ನು ಪುನಃ ಸ್ಥಾಪಿಸಲು ಮತ್ತು ಕಳೆದು ಹೋದ ನಗು ಮುಖವನ್ನು ಮರಳಿ ತರಲು ಅಪಾರವಾಗಿ ಶ್ರಮ ವಹಿಸಿದ, ಜೀವದ ಹಂಗು ತೊರೆದು ರೋಗಿಗಳಿಗೆ ಚಿಕಿತ್ಸೆ ನೀಡಿದ ಹಲವು ವೈದ್ಯರುಗಳು ಉಳ್ಳಾಲ ವ್ಯಾಪ್ತಿಯಲ್ಲಿ ಇದ್ದಾರೆ. ಇವರುಗಳಲ್ಲಿ ಪ್ರತ್ಯೇಕವಾಗಿ 4 ವೈದ್ಯರುಗಳನ್ನು ವಿಶೇಷವಾಗಿ ಪರಿಗಣಿಸಿ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು. ಜನತೆಯ ಆರೋಗ್ಯ ರಕ್ಷಣೆಗೆ ಸ್ವಯಂ ಮರೆತು ಹಗಲಿರುಳು ದುಡಿದ ಡಾ ಭಾಸ್ಕರ್ ಒಳಪೇಟೆ ತೊಕ್ಕೋಟು, ಡಾ ಸಾಜನ್ ಆಝಾದ್ ನಗರ ಮಾಸ್ತಿಕಟ್ಟೆ, ಡಾ ಉಪಾಧ್ಯಾಯ ಭಗವತಿ ಕ್ಷೇತ್ರ ಉಳ್ಳಾಲ, ಡಾ ಮಲಿಕ್ ಇನ್ ಲ್ಯಾಂಡ್ ಬಿಲ್ಡಿಂಗ್ ಉಳ್ಳಾಲ ಪೇಟೆ ಇವರುಗಳನ್ನು ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಶುಭಾಶಯ ತಿಳಿಸಿ ಸ್ಮರಣಿಕೆ ನೀಡಿ ಅಭಿನಂದಿಸಿ ಗೌರವಿಸಲಾಯಿತು ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ, ರಾಜ್ಯ ಎಸ್ ವೈ ಎಸ್ ಪಬ್ಲಿಕ್ ರಿಲೇಶನ್ಸ್ ಕಾರ್ಯದರ್ಶಿ ಬಿ.ಜಿ. ಹನೀಫ್ ಹಾಜಿ, ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್ , ಇಸಾಬಃ ಅಮೀರ್ ಶರೀಫ್ ಮಂಚಿಲ,...