Skip to main content

Posts

Showing posts from May, 2020

ನಗದು ವಿತರಣೆ ಹಾಗು ರೋಗಿಗಳ ಚಿಕಿತ್ಸೆಗೆ ನೆರವು

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಬಡ ಕುಟುಂಬಗಳಿಗೆ ದ್ವಿತೀಯ ಹಂತದ ನಗದು ವಿತರಣೆ. ಕಿಡ್ನಿ ಹಾಗು ಬ್ರೈನ್ ಟ್ಯೂಮರ್ ರೋಗದಿಂದ ಬಳಲುತ್ತಿದ್ದ ಎರಡು ರೋಗಿಗಳ ಚಿಕಿತ್ಸೆಗೆ ಧನ ಸಹಾಯ. "ಕೋವಿಡ್ 19" ಎಂಬ ಜಾಗತಿಕ ಕಿಲ್ಲರ್ ವೈರಾಣು ಹರಡುವುದನ್ನು ತಡೆಗಟ್ಟಲು ಘೋಷಿಸಲಾದ ರಾಷ್ಟ್ರೀಯ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಜನರಿಗೆ ಜಾತಿ, ಧರ್ಮ ವ್ಯತ್ಯಾಸವಿಲ್ಲದೆ 250 ಕ್ಕೂ ಮಿಕ್ಕ ಕುಟುಂಬಗಳಿಗೆ ರೇಷನ್ ಕಿಟ್ ತಲುಪಿಸುವ ಮೂಲಕ ಮಾದರೀ ಸೇವೆ ನೀಡಿದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮೊದಲ ಹಂತದಲ್ಲಿ ಉಳ್ಳಾಲ ವ್ಯಾಪ್ತಿಯ 53 ಅರ್ಹ ಕುಟುಂಬಕ್ಕೆ ನಗದು ಸಹಾಯ ವಿತರಿಸಿತ್ತು. ಇದೀಗ ದ್ವಿತೀಯ ಹಂತದಲ್ಲಿ 30 ಅರ್ಹ ಬಡ ಕುಟುಂಬಕ್ಕೆ ನಗದು ಹಸ್ತಾಂತರ ಹಾಗು ಕಿಡ್ನಿ ಹಾಗು ಬ್ರೈನ್ ಟ್ಯೂಮರ್ ರೋಗದಿಂದ ಬಳಲುತ್ತಿದ್ದ ಎರಡು ರೋಗಿಗಳ ಚಿಕಿತ್ಸೆಗೆ ಧನ ಸಹಾಯ ವಿತರಿಸಲಾಯಿತು. ಉಮರಾ ನಾಯಕರಾದ ಮಿಹ್ರಾಜ್ ಉಮರ್ ಹಾಜಿ ಅತಿಥಿಯಾಗಿ ಭಾಗವಹಿಸಿದ್ದರು.    ಎಸ್ ವೈ ಎಸ್ ರಾಜ್ಯ ಸದಸ್ಯರೂ, SYS ಉಳ್ಳಾಲ ಸೆಂಟರ್ ನಾಯಕರೂ ಆದ ಬಿಜಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಸೆಂಟರ್ ಗೌರವಾಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಲ್, ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಸೆಂಟರ್ ಕಾರ್ಯಕ್ರಮ ನಿರ್ವಹಣಾ ಕಾರ್ಯದರ್ಶಿ ಇಲ್ಯಾಸ್ ...

KINZ ಫೌಂಡೇಶನ್ ಇದರ ಚೇರ್ಮೆನ್ ಅಲ್ತಾಫ್ ಹುಸೈನ್ ರವರ ಸಮುದಾಯ ಸೇವೆ ಅಭಿನಂದನಾರ್ಹ

KINZ ಫೌಂಡೇಶನ್ ಇದರ ಚೇರ್ಮೆನ್ ಅಲ್ತಾಫ್ ಹುಸೈನ್ ರವರ ಸಮುದಾಯ ಸೇವೆ ಅಭಿನಂದನಾರ್ಹ ಉಳ್ಳಾಲ ವ್ಯಾಪ್ತಿಯ ಮತ್ತು ಸುತ್ತಮುತ್ತಲ ಊರಿನ ಬಡ ಮತ್ತು ಮಧ್ಯಮ ವರ್ಗದ ಪ್ರತೀ ಮನೆಗಳಿಗೆ ರೇಷನ್ ಸಾಮಗ್ರಿಗಳನ್ನು ತಲುಪಿಸಿದ ಕಿಂಝ್ ಫೌಂಡೇಶನ್ ಇದರ ಚೇರ್ಮೆನ್ ಅಲ್ತಾಫ್ ಹುಸೈನ್ ರವರು ಸಮುದಾಯಕ್ಕೆ ನೀಡಿದ ಸಾಂತ್ವನ ಸೇವೆ ಶ್ಲಾಘನೀಯ ಮತ್ತು ಅಭಿನಂದನಾರ್ಹವಾದುದು. ರಾಜ್ಯ ಮತ್ತು ಕೇಂದ್ರ ಸರಕಾರಗಳು ಇಂತಹ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಡೆಸುವ ಅಲ್ತಾಫ್ ಹುಸೈನ್ ರವರಂತಹ ವ್ಯಕ್ತಿತ್ವಗಳನ್ನು ಗುರುತಿಸಿ ಸೂಕ್ತ ಪ್ರಶಸ್ತಿಗಳು ನೀಡಿ ಗೌರವಿಸುವಂತಹ ಕೆಲಸಗಳು ಮಾಡಬೇಕು ಎಂದು ಎಸ್ ವೈ ಎಸ್ ಕರ್ನಾಟಕ ರಾಜ್ಯ ಸದಸ್ಯರಾದ ಬಿ ಜಿ ಹನೀಫ್ ಹಾಜಿ ಉಳ್ಳಾಲ ಆಗ್ರಹಿಸಿದರು. ಅಲ್ತಾಫ್ ಹುಸೈನ್ ರವರ ಈ ಸೇವೆ ಸರ್ವರಿಗೂ ಮಾದರಿಯಾಗಲಿ. ಈ ಸೇವೆಗೆ ಸಹಕಾರ ನೀಡಿದ ಅವರ ಕುಟುಂಬಸ್ಥರು ಮತ್ತು ಅಲ್ಫಾ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರಿಗೂ ಹ್ರದಯ ಸ್ಪರ್ಶಿ ಅಭಿನಂದನೆಗಳು.  ಅಭಿನಂದನೆ ಮತ್ತು ಶುಭ ಹಾರೈಕೆಗಳೊಂದಿಗೆ.. SYS ಉಳ್ಳಾಲ ಸೆಂಟರ್

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ 53 ಬಡ ಕುಟುಂಬಗಳಿಗೆ ಮೊದಲ ಹಂತದ ನಗದು ವಿತರಣೆ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ 53 ಬಡ ಕುಟುಂಬಗಳಿಗೆ ಮೊದಲ ಹಂತದ ನಗದು ವಿತರಣೆ "ಕೋವಿಡ್ 19" ಎಂಬ ಜಾಗತಿಕ ಕಿಲ್ಲರ್ ವೈರಾಣು ಹರಡುವುದನ್ನು ತಡೆಗಟ್ಟಲು ಘೋಷಿಸಲಾದ ರಾಷ್ಟ್ರೀಯ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಜನರಿಗೆ ಜಾತಿ, ಧರ್ಮ ವ್ಯತ್ಯಾಸವಿಲ್ಲದೆ 250 ಕ್ಕೂ ಮಿಕ್ಕ ಕುಟುಂಬಗಳಿಗೆ ರೇಷನ್ ಕಿಟ್ ತಲುಪಿಸುವ ಮೂಲಕ ಮಾದರೀ ಸೇವೆ ನೀಡಿದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಇದೀಗ ಉಳ್ಳಾಲ ವ್ಯಾಪ್ತಿಯ 53 ಅರ್ಹ ಕುಟುಂಬಕ್ಕೆ ಮೊದಲ ಹಂತದ ನಗದು ಸಹಾಯ ವಿತರಿಸಿತು.    ಎಸ್ ವೈ ಎಸ್ ರಾಜ್ಯ ಸದಸ್ಯರೂ, SYS ಉಳ್ಳಾಲ ಸೆಂಟರ್ ನಾಯಕರೂ ಆದ ಬಿಜಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಸೆಂಟರ್ ಕಾರ್ಯಕ್ರಮ ನಿರ್ವಹಣಾ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಧನ ಸಹಾಯ ವಿತರಣಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಗದು ವಿತರಣೆಗೆ ತನು, ಮನ, ಧನಗಳಿಂದ ಸಹಕರಿಸಿದ ಸರ್ವರಿಗೂ ಅಲ್ಲಾಹನು ದ್ವಿಲೋಕದಲ್ಲಿ ಯಶಸ್ಸನ್ನು ನೀಡಲಿ. ಆಮೀನ್ ✍  ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ