ಧಾರ್ಮಿಕ ಜ್ಞಾನ ರಂಗದ ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಿ, ದರ್ಸ್ ರಂಗದ ಪ್ರಾಥಮಿಕ ವಿದ್ಯೆ ನೀಡಿದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ, ದರ್ಸ್ ಕಲಿಕಾ ಕ್ಷೇತ್ರದಲ್ಲಿ ಸುದೀರ್ಘ ಕಾಲ ಕೈ ಹಿಡಿದು ಮುನ್ನಡೆಸಿದ ಶೈಖುನಾ ಅಬೂ ಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ, ಇಲ್ಮ್ ಸೇವೆಯೊಂದಿಗೆ ಬದುಕು ಕಲಿಸಿದ ಆಧ್ಯಾತ್ಮಿಕ ಪಿತ, ಅನುಕರಣೀಯ ಗುರುವರ್ಯರಾದ ಸುಲ್ತಾನುಲ್ ಉಲಮಾ ಶೈಖುನಾ ಎಪಿ ಉಸ್ತಾದ್, ತಾಜುಶ್ಶರೀಅಃ ಅಲೀ ಕುಞ್ಞಿ ಉಸ್ತಾದ್, ಮುಹದ್ದಿಸೇ ಕಬೀರ್ ಅಲ್ಲಾಮಾ ಝಿಯಾವುಲ್ ಮುಸ್ತಫ ಅಲ್ ಖಾದ್ರಿ ಯು.ಪಿ ಸಹಿತ ನನ್ನೆಲ್ಲಾ ಅಧ್ಯಾಪಕರನ್ನು ಮನಸ್ಸಿನಲ್ಲಿ ಯಾವಾಗಲೂ ನೆನಪಿನಲ್ಲಿಟ್ಟಿದ್ದೇನೆ. ಅಲ್ಲಾಹುವೇ ಅವರಲ್ಲಿ ಬದುಕಿರುವವರಿಗೆ ಆರೋಗ್ಯ ಪೂರ್ಣ ದೀರ್ಘಾಯುಷ್ಯ ಮತ್ತು ಮರಣ ಹೊಂದಿದವರಿಗೆ ಉನ್ನತ ಪದವಿಯನ್ನು ಕರುಣಿಸು ಆಮೀನ್... ಸರ್ವರಿಗೂ ಅಧ್ಯಾಪಕ ದಿನದ ಸಂತೋಷಗಳು
ಇದು SYS ಉಳ್ಳಾಲ ಸೆಂಟರಿನ ಅಧಿಕ್ರತ ಬ್ಲಾಗ್ ಆಗಿದೆ.ಇದರಲ್ಲಿ SYS ಉಳ್ಳಾಲ ಸೆಂಟರ್ ಮತ್ತು ಇದರ ಅಧೀನ ಬ್ರಾಂಚುಗಳ ಕಾರ್ಯಕ್ರಮಗಳು, ವರದಿಗಳು ಹಾಗೂ ಫೋಟೋಸ್ ಗಳು ಲಭ್ಯವಾಗಲಿದೆ