ಎಸ್ ವೈ ಎಸ್ ಮಂಚಿಲ ಬ್ರಾಂಚ್ ಮಹಾಸಭೆ ಹಾಗು ನೂತನ ಸಮಿತಿ ರಚನಾ ಕಾರ್ಯಕ್ರಮ ಉಳ್ಳಾಲ ಮಂಚಿಲದಲ್ಲಿ ನಡೆಯಿತು.
ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ, ವರದಿ ಹಾಗು ಲೆಕ್ಕಪತ್ರ ಮಂಡಿಸಿದರು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ ಉಳ್ಳಾಲ ಸೆಂಟರ್ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ ಹಾಗು ಸೆಂಟರ್ ಕೋಶಾಧಿಕಾರಿ ಇಸಾಕ್ ಪೇಟೆ ರವರ ನೇತ್ರತ್ವದಲ್ಲಿ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಅಶ್ರಫ್ ಸಅದಿ, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್, ಕೋಶಾಧಿಕಾರಿಯಾಗಿ ಅಶ್ರಫ್ ಮಜಲ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಇಬ್ರಾಹಿಂ ಸಈದ್, ಶಿಕ್ಷಣ ಹಾಗು ದಅವಾ ವಿಭಾಗದ ಕಾರ್ಯದರ್ಶಿಯಾಗಿ ದಾವೂದ್ ಹಾಗು ನಝೀರ್ ಅಲಿ, ಸಾಂತ್ವನ ಹಾಗು ಇಸಾಬಃ ವಿಭಾಗದ ಕಾರ್ಯದರ್ಶಿಯಾಗಿ ಜಾವಿದ್ ಹಾಗು ಅಬೂಸ್ವಾಲಿಹ್ ಮತ್ತು ಒಟ್ಟು 16 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆರಿಸಲಾಯಿತು. ಸೆಂಟರ್ ಕೌನ್ಸಿಲರುಗಳಾಗಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಸಹಿತ ರಹೀಂ ಮಂಚಿಲ, ಲತೀಫ್ ಮಂಚಿಲ, ಬಶೀರ್ ಪಿ ಎಂ ಮಂಚಿಲ ಒಟ್ಟು ಆರು ಮಂದಿಯನ್ನು ಆರಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಮಂಚಿಲ ಎಸ್ ವೈ ಎಸ್ ನೇತಾರರು ಕಾರ್ಯಕರ್ತರು ಭಾಗವಹಿಸಿದರು.





Comments