ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ಸುಲ್ತಾನುಲ್ ಹಿಂದ್ ಖ್ವಾಜಾ ಮುಈನುದ್ದೀನ್ ಚಿಸ್ತಿ ಅವರ ಉರೂಸ್ ಪ್ರಯುಕ್ತ ಖ್ವಾಜಾ ಗರೀಬ್ ನವಾಝ್ ಡೇ ಅಂಗವಾಗಿ ಬಡ ಬಗ್ಗರಿಗೆ ಆಹಾರ ವಿತರಣಾ ಕಾರ್ಯಕ್ರಮದ ರಾಜ್ಯ ಮಟ್ಟದ ಉದ್ಘಾಟನಾ ಕಾರ್ಯಕ್ರಮ
ಸುಲ್ತಾನುಲ್ ಹಿಂದ್ ಖ್ವಾಜಾ ಮುಈನುದ್ದೀನ್ ಚಿಸ್ತಿ ಅವರ ಉರೂಸ್ ಪ್ರಯುಕ್ತ ಖ್ವಾಜಾ ಗರೀಬ್ ನವಾಝ್ ಡೇ ಅಂಗವಾಗಿ ಬಡ ಬಗ್ಗರಿಗೆ ಆಹಾರ ವಿತರಣಾ ಕಾರ್ಯಕ್ರಮದ ರಾಜ್ಯ ಮಟ್ಟದ ಉದ್ಘಾಟನಾ ಕಾರ್ಯಕ್ರಮವು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ವಠಾರದಲ್ಲಿ ನಡೆಯಿತು. ಎಸ್ ವೈ ಎಸ್ ರಾಜ್ಯಾಧ್ಯಕ್ಷರಾದ ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮಾತನಾಡಿ ಫೆಬ್ರವರಿ 08 ರಂದು ಸುಲ್ತಾನುಲ್ ಹಿಂದ್ ಖ್ವಾಜಾ ಗರೀಬ್ ನವಾಝ್ ರವರ ಉರೂಸ್ ಪ್ರಯುಕ್ತ ಅವರ ಸಂಸ್ಮರಣಾರ್ಥ ರಾಜ್ಯದಾದ್ಯಂತ ಬಡ ಬಗ್ಗರು, ರೋಗಿಗಳು, ಯಾತ್ರಾರ್ಥಿಗಳು, ಅನಾಥಾಶ್ರಮ, ವ್ರದ್ಧಾಶ್ರಮಗಳಿಗೆ ಆಹಾರ ವಿತರಣೆಯು ಎಸ್ ವೈ ಎಸ್ ನಡೆಸುತ್ತಿದೆ ಎಂದು ತಿಳಿಸಿ ರಾಜ್ಯ ಮಟ್ಟದ ಆಹಾರ ವಿತರಣೆಯ ಉದ್ಘಾಟನೆ ನೆರವೇರಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಪಿ.ಎಸ್.ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ಬಳಿಕ ಉಳ್ಳಾಲ ದರ್ಗಾದ ಯಾತ್ರಾರ್ಥಿಗಳು, ಭಕ್ತಾದಿಗಳು, ಭಿಕ್ಷುಕರು ಹಾಗು ಬಿಜೈ ಕಾಪಿಕಾಡಿನ ಮತ್ತು ಪಂಪ್ವೆಲ್ ಸಮೀಪದ ಎರಡು ಏಡ್ಸ್ ಪೀಡಿತ ಮಕ್ಕಳ ಆರೈಕೆ ಆಶ್ರಮಗಳಿಗೆ ಆಹಾರ ವಿತರಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹಂಝ ಮದನಿ ಮಿತ್ತೂರು, ರಾಜ್ಯ ಎಸ್ ವೈ ಎಸ್ ಪಬ್ಲಿಕ್ ರಿಲೇಶನ್ಸ್ ಕಾರ್ಯದರ್ಶಿ ಬಿ.ಜಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ...