Skip to main content

Posts

Showing posts from April, 2021

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ತಾಜುಶ್ಶರೀಅಃ ಆಲಿ ಕುಞ್ಞಿ ಉಸ್ತಾದರ ಅನುಸ್ಮರಣೆ, ರಂಝಾನ್ ಸಿದ್ಧತಾ ಸಭೆ ಹಾಗು ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ತಾಜುಶ್ಶರೀಅಃ ಆಲಿ ಕುಞ್ಞಿ ಉಸ್ತಾದರ ಅನುಸ್ಮರಣೆ, ರಂಝಾನ್ ಸಿದ್ಧತಾ ಸಭೆ ಹಾಗು ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ ಹಳೆಕೋಟೆಯ ಶಬೀರ್ ಪ್ಯಾಲೇಸಿನಲ್ಲಿ ನಡೆಯಿತು. ಸಭೆಯನ್ನು ಅಬ್ಬಾಸ್ ಮದನಿ ವಳಚ್ಚಿಲ್ ಉದ್ಘಾಟಿಸಿ ಮಾತನಾಡಿದರು. ದ.ಕ ಜಿಲ್ಲಾ ವೆಸ್ಟ್ ದಅವಾ ಸಮಿತಿ ನಾಯಕರಾದ ವಿ ಎ ಮುಹಮ್ಮದ್ ಸಖಾಫಿ ವಳವೂರು ರಂಝಾನ್ ಸಿದ್ಧತಾ ತರಗತಿ ಹಾಗು ತಾಜುಶ್ಶರೀಅಃ ಆಲಿ ಕುಞ್ಞಿ ಉಸ್ತಾದರ ಅನುಸ್ಮರಣಾ ಭಾಷಣ ಮಾಡಿದರು. ಬ್ರಾಂಚ್ ಅಧ್ಯಕ್ಷರಾದ ಅಬೂ ಮಫಾಝ್ ಮದನಿ ಅಧ್ಯಕ್ಷತಾ ಭಾಷಣ ನಡೆಸಿದರು. ಗೌರವ ಅತಿಥಿಗಳಾಗಿ ಆಗಮಿಸಿದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆಯ ನೇತ್ರತ್ವದಲ್ಲಿ ರಂಝಾನ್ ಕಿಟ್  ಅಕ್ಕರೆಕೆರೆ ಹಳೆಕೋಟೆ ವ್ಯಾಪ್ತಿಯ ಅರ್ಹ ಬಡ ಕುಟುಂಬಗಳಿಗೆ ವಿತರಿಸಲಾಯಿತು.  ಪ್ರಸ್ತುತ ಕಾರ್ಯಕ್ರಮದಲ್ಲಿ ಬ್ರಾಂಚ್ ಉಸ್ತುವಾರಿ ಅಬ್ದುಸ್ಸಮದ್ ಹಳೆಕೋಟೆ, ಬ್ರಾಂಚ್ ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಅಕ್ಕರೆಕೆರೆ ಹಾಗು ಬ್ರಾಂಚ್ ಸದಸ್ಯರು ಉಪಸ್ಥಿತರಿದ್ದರು. ಬ್ರಾಂಚ್ ಕೋಶಾಧಿಕಾರಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು.