ಉಳ್ಳಾಲ : ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ವತಿಯಿಂದ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್ ರವರ ಪ್ರಥಮ ಉರೂಸ್ ಪ್ರಚಾರ ಸಭೆ ಹಾಗು ಅನುಸ್ಮರಣಾ ಕಾರ್ಯಕ್ರಮ ಉಳ್ಳಾಲ ಅಕ್ಕರೆಕೆರೆಯ ಖುರ್ರತುಸ್ಸಾದಾತ್ ಸುನ್ನೀ ಸೆಂಟರಿನಲ್ಲಿ ನಡೆಯಿತು. ಕಾರ್ಯಕ್ರಮದ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಕೆ ಎಂ ಜೆ ಅಧ್ಯಕ್ಷರಾದ ಹಸನ್ ಹಾಜಿ ಉಳ್ಳಾಲ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕೋಟೆಕಾರ್ ಜುಮಾ ಮಸ್ಜಿದ್ ಮುದರ್ರಿಸ್ ಅಬ್ದುರ್ರಝ್ಝಾಖ್ ಸಅದಿ ಮದಕ ಅನುಸ್ಮರಣಾ ಭಾಷಣ ಮಾಡಿದರು. ಎಸ್ ವೈ ಎಸ್ ಉಳ್ಳಾಲ ಝೋನ್ ನಾಯಕ ಸಯ್ಯಿದ್ ಖುಬೈಬ್ ತಂಙಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಸೂರಃ ಯಾಸೀನ್ ಪಾರಾಯಣ, ತಹ್ಲೀಲ್ ಸಮರ್ಪಣೆ ನಡೆಸಲಾಯಿತು. ಎಸ್ಸೆಸ್ಸೆಫ್ ನಾಯಕ ಆಶಿಖ್ ಹಿಮಮಿ ಸಖಾಫಿ ನಶೀದಃ ಹಾಡಿದರು. ಝೋನ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಹಳೆಕೋಟೆ, ಕೋಶಾಧಿಕಾರಿ ಶರೀಫ್ ಮಂಚಿಲ, ಝೋನ್ ನಾಯಕರಾದ ಇಸಾಖ್ ಪೇಟೆ, ಎಸ್ ವೈ ಎಸ್ ಶಾಖಾಧ್ಯಕ್ಷರಾದ ಅಶ್ರಫ್ ಝುಹ್ರಿ ಅಕ್ಕರೆಕೆರೆ, ಕೋಶಾಧಿಕಾರಿ ಆರ್ ಕೆ ಮದನಿ, ಕೆ ಎಂ ಜೆ ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ಅಕ್ಕರೆಕರೆ, ಮುಹಮ್ಮದ್ ಮದನಿ ಹಳೆಕೋಟೆ ಸಹಿತ ಸಂಘಟನಾ ನಾಯಕರು, ಸದಸ್ಯರು, ಹಿತೈಷಿಗಳು ಭಾಗವಹಿಸಿದರು. ...
SYS ULLALA CENTER
ಇದು SYS ಉಳ್ಳಾಲ ಸೆಂಟರಿನ ಅಧಿಕ್ರತ ಬ್ಲಾಗ್ ಆಗಿದೆ.ಇದರಲ್ಲಿ SYS ಉಳ್ಳಾಲ ಸೆಂಟರ್ ಮತ್ತು ಇದರ ಅಧೀನ ಬ್ರಾಂಚುಗಳ ಕಾರ್ಯಕ್ರಮಗಳು, ವರದಿಗಳು ಹಾಗೂ ಫೋಟೋಸ್ ಗಳು ಲಭ್ಯವಾಗಲಿದೆ