ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದಲ್ಲಿ ಸಾದಾತ್ ಫಂಡ್ ಅಸೋಸಿಯೇಷನ್ ಎಂಬ ಸಹ ಸಂಘಟನೆಯನ್ನು ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಅಳೇಕಲ ಇವರ ನೇತ್ರತ್ವದಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಕುಟುಂಬ ಪರಂಪರೆಯಿಂದ ಬಂದವರಿಗೆ ಸಾದಾತುಗಳು ಎಂದು ಹೇಳುತ್ತೇವೆ. ಮುಸ್ಲಿಮರಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವವರಾಗಿದ್ದಾರೆ ಸಾದಾತುಗಳು. ಆರ್ಥಿಕವಾಗಿ ಹಿಂದುಳಿದಿರುವ ಸಾದಾತುಗಳಿಗೆ ಸಹಾಯ ಹಸ್ತ ನೀಡುವ ಉದ್ಧೇಶದಿಂದ ಸಾದಾತ್ ಫಂಡ್ ಅಸೋಸಿಯೇಷನ್ ರಚಿಸಲಾಗಿದೆ ಎಂದು ತಿಳಿಸಿದರು. ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷ ಅಬೂ ಅನಸ್ ಜಮಾಲ್ ಉಸ್ತಾದ್, ಎಸ್ ವೈ ಎಸ್ ಮೀಡಿಯಾ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಸಾದಾತು ಫಂಡ್ ಅಸೋಸಿಯೇಶನ್ ಇದರ ನೂತನ ಸಮಿತಿಯನ್ನು ಆರಿಸಲಾಯಿತು. ಚೇರಮಾನ್ ಆಗಿ ಸಯ್ಯಿದ್ ಜಲಾಲ್ ತಂಗಳ್ ಅಳೇಕಲ, ಸಂಚಾಲಕರಾಗಿ ಸಯ್ಯಿದ್ ಜವಾದ್ ತಂಗಳ್ ಅಳೇಕಲ, ಪ್ರಧಾನ ಕಾರ್ಯದರ್ಶಿಯಾಗಿ ಶಫೀಕ್ ಯು ಎಸ್ ಅಳೇಕಲ, ಕೋಶಾಧಿಕಾರಿಯಾಗಿ ಅರಫಾತ್ ಉಳ್ಳಾಲ, ಉಪಾಧ್ಯಕ್ಷರಾಗಿ ಹಂಝ ಸುಂದರಭಾಗ್ ಹಾಗು ಇಬ್ರಾಹಿಂ ಉಳ್ಳಾಲಬೈಲು, ಜೊತೆ ಕಾರ್ಯದರ್ಶಿಗಳ...