Skip to main content

Posts

Showing posts from April, 2020

ರಂಝಾನ್ 2 ಅಹ್ಮದ್ ಬಾವ ಉಸ್ತಾದ್ ಮರಣ ಹೊಂದಿ ಒಂದು ವರ್ಷ

ರಂಝಾನ್ 2 ಅಹ್ಮದ್ ಬಾವ ಉಸ್ತಾದ್ ಮರಣ ಹೊಂದಿ ಒಂದು ವರ್ಷ ಸಾವಿರಾರು ಶಿಷ್ಯರಿಗೆ ಇಸ್ಲಾಮಿನ ಸುಜ್ಞಾನದ ಪ್ರಭೆ ಹರಡಿದ ಉಳ್ಳಾಲದ ಮಹೋನ್ನತ ವಿದ್ವಾಂಸರಾದ ಮರ್ಹೂಂ ಅಹ್ಮದ್ ಬಾವ ಉಸ್ತಾದ್ ಮರಣ ಹೊಂದಿ ಒಂದು ವರ್ಷವಾಗಲಿದೆ. ಅಲ್ಲಾಹನು ಉಸ್ತಾದರ ಪದವಿಯನ್ನು ಉನ್ನತಿಗೇರಿಸಲಿ. ಆಮೀನ್ ಸಯ್ಯಿದ್ ಮದನಿ ಅರೆಬಿಕ್ ಕಾಲೇಜು ಪ್ರಾರಂಭವಾದಂದಿನಿಂದ ತನ್ನ ಆಯುಷ್ಯದ ಕೊನೆಯವರೆಗೂ ಸೇವೆಗೈಯ್ಯುತ್ತಿದ್ದ ಅಗಾಧ ಪಾಂಡಿತ್ಯದ ಒಡೆಯರಾದ ನಮ್ಮೆಲ್ಲರ ಪ್ರೀತಿಯ ಶೈಖುನಾ ಬಾವಾ ಉಸ್ತಾದ್ ರವರು ಇದ್ದಿನಬ್ಬ ಹಾಗು ಖದೀಜಃ ದಂಪತಿಗಳ ಪುತ್ರನಾಗಿ 1942 ರಲ್ಲಿ ಉಳ್ಳಾಲದಲ್ಲಿ ಜನ್ಮ ತಾಳಿದರು. ಜನ್ಮ ನಾಡಿನಲ್ಲೇ ಪ್ರಾಥಮಿಕ ಧಾರ್ಮಿಕ ವಿದ್ಯಾಭ್ಯಾಸವನ್ನು ಪಡೆದ ಅಹ್ಮದ್ ಬಾವಾ ಉಸ್ತಾದರು ಶೈಖುನಾ ತಾಜುಲ್ ಉಲಮಾ ಖ.ಸಿ ರವರ ಬಳಿ ಸರಿ ಸುಮಾರು ಹನ್ನೆರಡು ವರ್ಷಗಳ ಕಾಲ ಉಳ್ಳಾಲದ ದರ್ಸಿನಲ್ಲಿ ವಿದ್ಯಾರ್ಜನೆ ಪಡೆದರು. ನಂತರ ಉನ್ನಂತ ವ್ಯಾಸಂಗಕ್ಕಾಗಿ ವೆಲ್ಲೂರು ಬಾಖಿಯಾತುಸ್ಸಾಲಿಹಾತಿಗೆ ತೆರಳಿ ಬಾಖವಿ ಬಿರುದುದಾರಿಯಾಗಿ ಹೊರಬಂದು, ತದನಂತರ ದಯೂಬಂದ್ ನಿಂದ ಖಾಸಿಮಿ ಬಿರುದನ್ನೂ ಪಡೆದರು. ಧಾರ್ಮಿಕ ವಿಜ್ಞಾನದ ವಿವಿಧ ಮಜಲುಗಳಲ್ಲಿ ಅಗಾಧ ಪಾಂಡಿತ್ಯ ಹೊಂದಿರುವ ಉಸ್ತಾದರು ಬಜಪೆ, ಕನ್ನಂಗಾರ್, ಮೊಗ್ರಾಲ್ ಮೊದಲಾದ ಸ್ಥಳಗಳಲ್ಲಿ ಮುದರ್ರಿಸರಾಗಿ ಕಾರ್ಯ ನಿರ್ವಹಿಸಿ ತನ್ನ ಅರಿವನ್ನು ವಿದ್ಯಾದಾಹಿಗಳಿಗೆ ಪಸರಿಸಿ, ಬಳಿಕ ತನ್ನ ಹುಟ್ಟೂರಾದ ಉಳ್ಳಾಲದಲ್ಲಿ ಮುದರ್ರಿಸಾಗಿ ನೇಮಕಗೊಂಡ...

ಜಾತಿ, ಧರ್ಮದ ಗೋಡೆಯ ದಾಟಿ ಒಟ್ಟು 250 ಕುಟುಂಬಗಳಿಗೆ SYS ಉಳ್ಳಾಲ ಸೆಂಟರ್ ರೇಷನ್ ಕಿಟ್ಟುಗಳ ವಿತರಣೆ.

SYS ಉಳ್ಳಾಲ ಸೆಂಟರ್ ಇದರ ಮಾದರೀ ಸೇವೆ. ಜಾತಿ, ಧರ್ಮದ ಗೋಡೆಯ ದಾಟಿ ಒಟ್ಟು 250 ಕುಟುಂಬಗಳಿಗೆ ರೇಷನ್ ಕಿಟ್ಟುಗಳ ವಿತರಣೆ. ಉಳ್ಳಾಲ ಆಸುಪಾಸಿನ 35 ಕ್ಕೂ ಮಿಕ್ಕ ಸಯ್ಯಿದ್ ಕುಟುಂಬಗಳಿಗೂ ರೇಷನ್ ಕಿಟ್ ತಲುಪಿಸಿದ SYS ಉಳ್ಳಾಲ. "ಕೋವಿಡ್ 19" ಎಂಬ ಜಾಗತಿಕ ಕಿಲ್ಲರ್ ವೈರಾಣು ಹರಡುವುದನ್ನು ತಡೆಗಟ್ಟಲು ಘೋಷಿಸಲಾದ ರಾಷ್ಟ್ರೀಯ ಲಾಕ್ ಡೌನ್ ನಿಂದ ಸಂಪೂರ್ಣವಾಗಿ ಸಂಕಷ್ಟಕ್ಕೊಳಗಾಗಿರುವ ಜನರಿಗೆ ಜಾತಿ, ಧರ್ಮ ವ್ಯತ್ಯಾಸವಿಲ್ಲದೆ ತುರ್ತು ಸಹಾಯ ಹಾಗು 250 ಕ್ಕೂ ಮಿಕ್ಕ ಕುಟುಂಬಗಳಿಗೆ ರೇಷನ್ ಕಿಟ್ ತಲುಪಿಸುವ ಮೂಲಕ ಮಾದರೀ ಸೇವೆ ನಡೆಸಿದೆ. ಮುಕ್ಕಚ್ಚೇರಿ ಸುಭಾಷ್ ನಗರದ ದಿನೇಶ್,ಆಝಾದ್ ನಗರ ನಿವಾಸಿ ತಮಿಳು ನಾಡು ಮೂಲದ ಸತೀಶ್ ರಾಮಚಂದ್ರನ್ ಹಾಗು ಸೆಲ್ವೀ ಎಂಬ ಮಹಿಳೆ ಸಹಿತ ಉಳ್ಳಾಲ ಆಸುಪಾಸಿನ 250 ಕ್ಕೂ ಮಿಕ್ಕ ಕುಟುಂಬಗಳು ಜಾತಿ ಧರ್ಮಗಳ ಅಂತರವಿಲ್ಲದೆ ಇದರ ಪ್ರಯೋಜನವನ್ನು ಪಡೆದರು. ಉಳ್ಳಾಲದ 35 ಕ್ಕೂ ಮಿಕ್ಕ ಸಾದಾತುಗಳ ಕುಟುಂಬಗಳಿಗೂ ರೇಷನ್ ಕಿಟ್ಟುಗಳನ್ನು ತಲುಪಿಸಿ ಅಭಿನಂದನಾರ್ಹ ಸೇವೆ ನಡೆಸಿದ SYS ಉಳ್ಳಾಲ ಸೆಂಟರ್ ಎಲ್ಲರಿಗೂ ಮಾದರಿಯಾಗಿದೆ. ಎಸ್ ವೈ ಎಸ್ ರಾಜ್ಯ ಸದಸ್ಯರೂ, SYS ಉಳ್ಳಾಲ ಸೆಂಟರ್ ನಾಯಕರೂ ಆದ ಬಿಜಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ...

ಮೂರನೇ ಹಂತದ ರೇಷನ್ ಕಿಟ್ಟುಗಳು ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ 35 ಅರ್ಹ ಬಡ ಕುಟುಂಬಗಳಿಗೆ ವಿತರಣೆ.

ಮೂರನೇ ಹಂತದ ರೇಷನ್ ಕಿಟ್ಟುಗಳು ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ 35 ಅರ್ಹ ಬಡ ಕುಟುಂಬಗಳಿಗೆ ವಿತರಣೆ. ಮೊದಲೆರಡು ಹಂತಗಳಲ್ಲಿ 150 ಕುಟುಂಬಗಳಿಗೆ ಕಿಟ್ಟುಗಳನ್ನು ವಿತರಿಸಲಾಗಿತ್ತು. ಶೀಘ್ರದಲ್ಲಿ ಸಾದಾತುಗಳಿಗೆ SYS ಉಳ್ಳಾಲ ವತಿಯಿಂದ ರೇಷನ್ ಕಿಟ್ಟುಗಳ ವಿತರಣೆ ಜಾಗತಿಕ ಮಹಾಮಾರಿ  "ಕೋವಿಡ್ 19" ಪ್ರಯುಕ್ತ ಘೋಷಿಸಲಾದ ರಾಷ್ಟ್ರೀಯ ಲಾಕ್ ಡೌನ್ ನಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅದರಲ್ಲೂ ಬಡ ಜನರು ತೀವ್ರ ಸಂಕಷ್ಟಗೊಳಗಾಗಿದ್ದಾರೆ. ಇಂತಹ ಜನರಿಗೆ ಜಾತಿ, ಧರ್ಮ ವ್ಯತ್ಯಾಸವಿಲ್ಲದೆ ತುರ್ತು ಸಹಾಯ ಹಾಗು ಸಾಂತ್ವನ ಸೇವೆಗಳಲ್ಲಿ SYS ಉಳ್ಳಾಲ ಸೆಂಟರ್ ತೊಡಗಿಸಿಕೊಂಡಿದ್ದು, ಇದರ ಭಾಗವಾಗಿ ಉಳ್ಳಾಲದ ಅರ್ಹ 35 ಬಡ ಕುಟುಂಬಗಳಿಗೆ ತ್ರತೀಯ ಹಂತದ ರೇಷನ್ ಕಿಟ್ಟುಗಳನ್ನು ವಿತರಿಸಲಾಯಿತು.  ಈ ಮೂಲಕ ಉಳ್ಳಾಲದ 13 ಬ್ರಾಂಚುಗಳ 185 ಕುಟುಂಬಗಳು ಇದರ ಪ್ರಯೋಜನವನ್ನು ಪಡೆದರು. ಮುಂದಿನ ಹಂತದಲ್ಲಿ ಸಾದಾತುಗಳ 35 ಕುಟುಂಬಗಳಿಗೆ ರೇಷನ್ ಕಿಟ್ಟುಗಳನ್ನು ವಿತರಿಸುವ ಯೋಜನೆ SYS ಉಳ್ಳಾಲ ಸೆಂಟರ್ ಹಮ್ಮಿಕೊಂಡಿದೆ.    ಎಸ್ ವೈ ಎಸ್ ರಾಜ್ಯ ಸದಸ್ಯರೂ, SYS ಉಳ್ಳಾಲ ಸೆಂಟರ್ ನಾಯಕರೂ ಆದ ಬಿಜಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಸೆ...

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ 110 ಅರ್ಹ ಬಡ ಕುಟುಂಬಗಳಿಗೆ ದ್ವಿತೀಯ ಹಂತದ ರೇಷನ್ ಕಿಟ್ ವಿತರಣೆ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ 110 ಅರ್ಹ ಬಡ ಕುಟುಂಬಗಳಿಗೆ ದ್ವಿತೀಯ ಹಂತದ ರೇಷನ್ ಕಿಟ್ ವಿತರಣೆ ಜಾಗತಿಕ ಮಹಾಮಾರಿ  "ಕೋವಿಡ್ 19" ಪ್ರಯುಕ್ತ ಘೋಷಿಸಲಾದ ರಾಷ್ಟ್ರೀಯ ಲಾಕ್ ಡೌನ್ ನಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅದರಲ್ಲೂ ಬಡ ಜನರು ತೀವ್ರ ಸಂಕಷ್ಟಗೊಳಗಾಗಿದ್ದಾರೆ. ಇಂತಹ ಜನರಿಗೆ ಜಾತಿ, ಧರ್ಮ ವ್ಯತ್ಯಾಸವಿಲ್ಲದೆ ತುರ್ತು ಸಹಾಯ ಹಾಗು ಸಾಂತ್ವನ ಸೇವೆಗಳಲ್ಲಿ SYS ಉಳ್ಳಾಲ ಸೆಂಟರ್ ತೊಡಗಿಸಿಕೊಂಡಿದ್ದು, ಇದರ ಭಾಗವಾಗಿ ಉಳ್ಳಾಲದ ಅರ್ಹ 110 ಬಡ ಕುಟುಂಬಗಳಿಗೆ ದ್ವಿತೀಯ ಹಂತದ ರೇಷನ್ ಕಿಟ್ಟುಗಳನ್ನು ವಿತರಿಸಲಾಯಿತು. ಈ ಮೊದಲು ಮೊದಲ ಹಂತದಲ್ಲಿ 40 ಕುಟುಂಬಗಳಿಗೆ ಕಿಟ್ಟುಗಳನ್ನು ವಿತರಿಸಲಾಗಿತ್ತು. ಈ ಮೂಲಕ ಉಳ್ಳಾಲದ 13 ಬ್ರಾಂಚುಗಳ 150 ಕುಟುಂಬಗಳು ಇದರ ಪ್ರಯೋಜನವನ್ನು ಪಡೆದರು.  ಎಸ್ ವೈ ಎಸ್ ರಾಜ್ಯ ಸದಸ್ಯರೂ, SYS ಉಳ್ಳಾಲ ಸೆಂಟರ್ ನಾಯಕರೂ ಆದ ಬಿಜಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ನಾಯಕರಾದ ಸತ್ತಾರ್ ಮೇಲಂಗಡಿ, ಎಸ್ಸೆಸ್ಸೆಫ್ ಮೇಲಂಗಡಿ ಶಾಖಾ ನಾಯಕರಾದ ನವಾಝ್ ಮೇಲಂಗಡಿ, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರಾದ ತ್ವಾಹಿರ್ ಹಾಜಿ, ಮಾಸ್ತಿಕಟ್ಟೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಆರ್ ಆರ...

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ಮೊದಲ ಹಂತದ ರೇಷನ್ ಕಿಟ್ ವಿತರಣೆ

ಜಾಗತಿಕ ಮಹಾಮಾರಿ  "ಕೋವಿಡ್ 19" ಪ್ರಯುಕ್ತ ಘೋಷಿಸಲಾದ ರಾಷ್ಟ್ರೀಯ ಲಾಕ್ ಡೌನ್ ನಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅದರಲ್ಲೂ ಬಡ ಜನರು ತೀವ್ರ ಸಂಕಷ್ಟಗೊಳಗಾಗಿದ್ದಾರೆ. ಇಂತಹ ಜನರಿಗೆ ಜಾತಿ, ಧರ್ಮ ವ್ಯತ್ಯಾಸವಿಲ್ಲದೆ ತುರ್ತು ಸಹಾಯ ಹಾಗು ಸಾಂತ್ವನ ಸೇವೆಗಳಲ್ಲಿ SYS ಉಳ್ಳಾಲ ಸೆಂಟರ್ ತೊಡಗಿಸಿಕೊಂಡಿದೆ. ಇದರ ಭಾಗವಾಗಿ ಉಳ್ಳಾಲದ ಅರ್ಹ ನಲ್ವತ್ತು ಕುಟುಂಬಗಳಿಗೆ ಮೊದಲ ಹಂತದ ರೇಷನ್ ಕಿಟ್ಟುಗಳನ್ನು ವಿತರಿಸಲಾಯಿತು.  ಎಸ್ ವೈ ಎಸ್ ರಾಜ್ಯ ಸದಸ್ಯರೂ, SYS ಉಳ್ಳಾಲ ಸೆಂಟರ್ ನಾಯಕರೂ ಆದ ಬಿಜಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ, ಕೋಶಾಧಿಕಾರಿ ಅಬ್ದುಸ್ಸಮದ್ ಹಳೆಕೋಟೆ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಸೆಂಟರ್ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ, ಮದನಿ ನಗರ ಬ್ರಾಂಚ್ ಅಧ್ಯಕ್ಷರಾದ ಇಸ್ಮಾಯಿಲ್ ಎಸ್ ಎ ಮೊರೊಕ್ಕೋ ಮದನಿ, ಮಾಸ್ತಿಕಟ್ಟೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಆರ್ ಆರ್ ರಫೀಕ್ ಹಾಜರಿದ್ದರು. ಹಸಿದವನಿಗೆ ಉಣ ಬಡಿಸುವುದು ಅತ್ಯಂತ ದೊಡ್ಡ ಪುಣ್ಯದಾಯಕ ಕರ್ಮವಾಗಿದೆ. ಇಸ್ಲಾಮ್ ಅದಕ್ಕೆ ದೊಡ್ಡ ಪ್ರತಿಫಲ ನೀಡುವುದಾಗಿ ಘೋಷಿಸುತ್ತದೆ. ಹಸಿದವನ ಹಸಿವು ನೀಗಿಸುವ ಸೇವೆ ನಿಜಕ್ಕೂ ಶ್ಲಾಘನೀಯ. ಅಲ್ಲಾಹು ಸ್ವೀಕರಿಸಲಿ. ರೇಷನ್ ಕಿಟ್ಟುಗಳ ವಿತರಣೆಗೆ ತನು, ಮನ, ಧನಗಳಿಂದ ಸಹಕರಿಸಿದ ಎಸ್ ...