ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಮಹಾಸಭೆ ಹಾಗು ನೂತನ ಸಮಿತಿ ರಚನಾ ಕಾರ್ಯಕ್ರಮ ಉಳ್ಳಾಲ ಅಕ್ಕರೆಕೆರೆ ಎಸ್ಸೆಸ್ಸೆಫ್, ಎಸ್ ವೈ ಎಸ್ ಸಭಾ ಭವನದಲ್ಲಿ ನಡೆಯಿತು.
ಬ್ರಾಂಚ್ ಅಧ್ಯಕ್ಷರಾದ ಅಬ್ದುಸ್ಸಮದ್ ಹಳೆಕೋಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ ದುವಾ ನೆರವೇರಿಸಿ ಹಿಜ್ರಾ ಪಲಾಯನವಲ್ಲ ಎಂಬ ವಿಷಯದಲ್ಲಿ ತರಗತಿ ನಡೆಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ.ಕ ಜಿಲ್ಲಾ ಎಸ್ ವೈ ಎಸ್ ಕೋಶಾಧಿಕಾರಿ ಬಿ.ಜಿ ಹನೀಫ್ ಹಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿ, ವರದಿ ಹಾಗು ಲೆಕ್ಕಪತ್ರ ಮಂಡಿಸಿದರು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ ಬಶೀರ್ ಸಖಾಫಿ ಉಳ್ಳಾಲ ರವರ ನೇತ್ರತ್ವದಲ್ಲಿ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಮುಹಮ್ಮದ್ ಮದನಿ ಹಳೆಕೋಟೆ, ಪ್ರಧಾನ ಕಾರ್ಯದರ್ಶಿಯಾಗಿ ಖಾಲಿದ್ ಪಟೇಲ್ ಕಂಪೌಂಡ್, ಕೋಶಾಧಿಕಾರಿಯಾಗಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್, ಶಿಕ್ಷಣ ಹಾಗು ದಅವಾ ವಿಭಾಗದ ಕಾರ್ಯದರ್ಶಿಯಾಗಿ ಮನ್ಸೂರ್ ಹಳೆಕೋಟೆ, ಸಾಂತ್ವನ ಹಾಗು ಇಸಾಬಃ ವಿಭಾಗದ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ಅಕ್ಕರೆಕೆರೆ ಇವರನ್ನು ಆರಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸತ್ತಾರ್ ಅಕ್ಕರೆಕೆರೆ, ಹಸನ್ ಬಾವ ಹಾಜಿ ಅಕ್ಕರೆಕೆರೆ, ಯು ಎಚ್ ಹಂಝ ಹಳೆಕೋಟೆ, ಅಬ್ದುಲ್ಲತೀಫ್ ಅಕ್ಕರೆಕೆರೆ, ಅಶ್ರಫ್ ಅಕ್ಕರೆಕೆರೆ, ಯು ಎಚ್ ಯೂಸುಫ್, ಎಂ ಕೆ ಅಬ್ದುಲ್ ಅಝೀಝ್ ಮುಸ್ಲಿಯಾರ್ ಹಾಗು ಸೆಂಟರ್ ಕೌನ್ಸಿಲರುಗಳಾಗಿ 5 ಮಂದಿಯನ್ವು ಆರಿಸಲಾಯಿತು.
ಕೊನೆಯಲ್ಲಿ ಹಾಲಿ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ ಧನ್ಯವಾದಗೈದರು.















Comments