ಮುಸ್ಲಿಮರ ಭಾವನೆಯನ್ನು ಕೆರಳಿಸಿದ ಸುವರ್ಣ ನ್ಯೂಸ್ ಚಾನಲ್ ನಿರೂಪಕ ಅಜಿತ್ ಹನುಮಕ್ಕನವರ ವಿರುದ್ಧ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಖಂಡನೆ
ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ನಿಂದನೆ ಮಾಡಿ ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವ ರೀತಿಯಲ್ಲಿ ಮಾಧ್ಯಮಕ್ಕೆ ಅಗೌರವ ತೋರಿ, ಮುಸ್ಲಿಮರ ಭಾವನೆಯನ್ನು ಕೆರಳಿಸಿದ ಸುವರ್ಣ ನ್ಯೂಸ್ ಚಾನಲ್ ನಿರೂಪಕ ಅಜಿತ್ ಹನುಮಕ್ಕನವರ ನಡೆ ತೀವ್ರ ಖಂಡನೀಯವಾದುದಾಗಿದೆ. ಅವರನ್ವು ಶೀಘ್ರವೇ ಬಂಧಿಸಬೇಕು ಹಾಗೂ ಸುವರ್ಣ ನ್ಯೂಸ್ ಚಾನಲನ್ನು ಬ್ಯಾನ್ ಮಾಡಬೇಕೆಂದು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಒತ್ತಾಯಿಸಿದೆ. ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಲ್, ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ, ಎಸ್ ವೈ ಎಸ್ ದ.ಕ ಜಿಲ್ಲಾ ಕೋಶಾಧಿಕಾರಿ ಬಿ.ಜಿ ಹನೀಫ್ ಹಾಜಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ರಿಲೀಫ್ ಚೇರಮಾನ್ ಅಲ್ತಾಫ್ ಕುಂಪಲ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಹಾಗು ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.