Skip to main content

Posts

Showing posts from August, 2022

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಪಝಶ್ಶೀ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಪಝಶ್ಶೀ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮ ಉಳ್ಳಾಲ ಆಝಾದ್ ನಗರದ ಇಸ್ಲಾಮಿಕ್ ನೋಲೇಜ್ ಸೆಂಟರಿನಲ್ಲಿ ನಡೆಯಿತು. ಎಸ್ ವೈ ಎಸ್ ದ.ಕ ಜಿಲ್ಲಾ ನಾಯಕರಾದ ಸಯ್ಯಿದ್ ಜಲಾಲ್ ತಂಗಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೆಂಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಪಝಶ್ಶೀ ಉಸ್ತಾದರ ಕುರಿತು ಮಾತನಾಡಿ, ದುಆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ರಾಜ್ಯ ನಾಯಕರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಹಾಗು ಸೆಂಟರ್ ನಾಯಕರುಗಳು, ಸದಸ್ಯರು ಹಾಜರಿದ್ದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಕ್ ಸ್ವಾಗತಿಸಿದರು.

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಚಿಕಿತ್ಸಾ ನೆರವು

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ 10,800 ರೂಪಾಯಿಗಳನ್ನು ಚಿಕಿತ್ಸಾ ಸಹಾಯವಾಗಿ ಮೂವರು ರೋಗಿಗಳಿಗೆ ಹಂಚಲಾಯಿತು. ಸಹಾಯ ಸಹಕಾರ ನೀಡಿದ ಎಲ್ಲರಿಗೂ ಅಲ್ಲಾಹನು ಇಹಪರದಲ್ಲಿ ತಕ್ಕ ಪ್ರತಿಫಲ ನೀಡಲಿ, ಜೀವನ, ಮಕ್ಕಳು, ಕುಟುಂಬ, ವ್ಯಾಪಾರ ವಹಿವಾಟು, ಕೆಲಸ ಕಾರ್ಯಗಳಲ್ಲಿ ಸಮ್ರದ್ಧಿ, ಐಶ್ವರ್ಯ, ಅಭಿವೃದ್ಧಿ ನೀಡಲಿ, ಎಲ್ಲಾ ತರದ ಆಪತ್ತು, ವಿಪತ್ತು, ರೋಗ ರುಜಿನ, ಕಷ್ಟ ಕಾರ್ಪಣ್ಯಗಳಿಂದ ಅಲ್ಲಾಹನು ಸಂರಕ್ಷಿಸಲಿ. ರೋಗಿಗಳಿಗೆ ಬಲು ಬೇಗನೇ ಶಿಫಾ ನೀಡಿ ಸಂಪೂರ್ಣ ಆರೋಗ್ಯವನ್ನು ಅಲ್ಲಾಹನು ಮರಳಿ ನೀಡಲಿ. ಆಮೀನ್.