ಎಸ್ ವೈ ಎಸ್ ಸುಂದರ್ ಬಾಗ್ ಬ್ರಾಂಚ್ ಮಹಾಸಭೆ ಹಾಗು ನೂತನ ಸಮಿತಿ ರಚನಾ ಕಾರ್ಯಕ್ರಮ ಬ್ರಾಂಚ್ ಅಧ್ಯಕ್ಷ ಸೀದಿಯಬ್ಬ ಇಸ್ಮಾಯಿಲ್ ನಿವಾಸದಲ್ಲಿ ನಡೆಯಿತು.
ಬ್ರಾಂಚ್ ಅಧ್ಯಕ್ಷರಾದ ಸೀದಿಯಬ್ಬ ಇಸ್ಮಾಯಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ ದುವಾ ನೆರವೇರಿಸಿ ಹಿಜ್ರಾ ಪಲಾಯನವಲ್ಲ ಎಂಬ ವಿಷಯದಲ್ಲಿ ತರಗತಿ ನಡೆಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ.ಕ ಜಿಲ್ಲಾ ಎಸ್ ವೈ ಎಸ್ ಕೋಶಾಧಿಕಾರಿ ಬಿ.ಜಿ ಹನೀಫ್ ಹಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಶ್ರಫ್ UB ಸ್ವಾಗತಿಸಿ, ವರದಿ ಹಾಗು ಲೆಕ್ಕಪತ್ರ ಮಂಡಿಸಿದರು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ ಬಶೀರ್ ಸಖಾಫಿ ಉಳ್ಳಾಲ ರವರ ನೇತ್ರತ್ವದಲ್ಲಿ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಸೀದಿಯಬ್ಬ ಇಸ್ಮಾಯಿಲ್. ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್ ಅಶ್ರಫ್ ಹಾಜಿ UB, ಕೋಶಾಧಿಕಾರಿಯಾಗಿ ಹೈದರ್ ಹಾಜಿ ಬೋಳಾರ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಯೂಸುಫ್ ಮದನಿ, ಶಿಕ್ಷಣ ಹಾಗೂ ದಅವಾ ವಿಭಾಗದ ಕಾರ್ಯದರ್ಶಿಯಾಗಿ
ಅಝ್ಮಾಲ್ ಮೊಇದಿನಬ್ಬ, ಸಾಂತ್ವನ ಹಾಗು ಇಸಾಬಃ ವಿಭಾಗದ ಕಾರ್ಯದರ್ಶಿಯಾಗಿ ಪಾರೂಕ್ ಬಾವ ಇವರನ್ನು ಆರಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಇಬ್ರಾಹಿಂ ಮದನಿ UB,ಆಸಿಫ್ ಪೊಡಿಯಬ್ಬ,ಹನೀಫ್,ಅಶ್ರಫ್ UA,ಮೂಸ,ಫಾರೂಕ್ ಗೋವಾ,ಇಸ್ಮಾಯಿಲ್ VK,ಮುಹಮ್ಮದ್,ಶರೀಫ್ ಮೇಸ್ತ್ರಿ, ಮತ್ತು ಸೆಂಟರ್ ಕೌನ್ಸಿಲರುಗಳಾಗಿ 7 ಮಂದಿಯನ್ನು (ಸೀದಿಯಬ್ಬ ಇಸ್ಮಾಯಿಲ್,ಅಹ್ಮದ್ ಅಶ್ರಫ್ ಹಾಜಿ UB,ಹೈದರ್ ಹಾಜಿ,ಆಸಿಫ್ ಪೊಡಿಯಬ್ಬ,ಅಶ್ರಫ್ UA,ಪಾರೂಕ್ ಬಾವ,ಹನೀಫ್) ಆರಿಸಲಾಯಿತು.
ಕೊನೆಯಲ್ಲಿ ಹಾಲಿ ಕಾರ್ಯದರ್ಶಿ ಅಶ್ರಫ್ ಹಾಜಿ UB ಧನ್ಯವಾದಗೈದರು.










Comments