Skip to main content

Posts

Showing posts from July, 2021

ಈದುಲ್ ಅದ್'ಹಾ ಹಬ್ಬದ ಶುಭಾಶಯಗಳು.

ಸರ್ವರಿಗೂ ಈದುಲ್ ಅದ್'ಹಾ ಹಬ್ಬದ ಶುಭಾಶಯಗಳು. ಈ ಈದ್ ಸಂತೋಷ, ಹೊಸತನ,ಸಾಮರಸ್ಯ,ನೆಮ್ಮದಿ,ಶಾಂತಿ ಮತ್ತು ಪ್ರೀತಿಯ ಸಂದೇಶವಾಗಿಸಿ ಅನ್ಯೋನ್ಯತೆಯ ಆತ್ಮೀಯ ಬಂಧವನ್ನು ವೃದ್ಧಿಸಲಿ ಮತ್ತು ಮಾರಕ ಕೋರೋನ ವೈರಸ್ ನಿಂದ ಶೀಘ್ರದಲ್ಲೇ ಜಗತ್ತು ಮುಕ್ತಗೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ. ▪️ SYS ullala center  ▪️

ತೀವ್ರವಾದ ಮಳೆ ಆರ್ಭಟ, ಜಾಗ್ರತೆ ಪಾಲಿಸಿ

ರಾಜ್ಯದಾದ್ಯಂತ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ತೀವ್ರವಾಗಿದ್ದು, ಅಪಾಯದ ಮುನ್ಸೂಚನೆ ಇರುವ ಮನೆ, ತಗ್ಗು  ಪ್ರದೇಶದ  ಮತ್ತು  ಕಡಲು  ಕಿನಾರೆ  ನಿವಾಸಿಗಳು  ಆದಷ್ಟು ಜಾಗ್ರತೆ ವಹಿಸಬೇಕು ಎಂದು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸೂಚಿಸುತ್ತಿದೆ. ಅಲ್ಲಾಹನು ನಮ್ಮನ್ನು, ನಮ್ಮ ಕುಟುಂಬ, ಬಂಧು ಮಿತ್ರಾದಿಗಳನ್ನು ಎಲ್ಲಾ ಆಪತ್ತು, ಮುಸೀಬತುಗಳಿಂದ ರಕ್ಷೆ ನೀಡಲಿ. ಆಮೀನ್. ಎಸ್ ವೈ ಎಸ್ ಉಳ್ಳಾಲ ಸೆಂಟರ್

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಮುಅಲ್ಲಿಂ ಫಂಡ್ ಹಸ್ತಾಂತರ.

ಎಸ್ ವೈ ಎಸ್  ಉಳ್ಳಾಲ  ಸೆಂಟರ್  ವತಿಯಿಂದ  ಮುಅಲ್ಲಿಂ  ಫಂಡ್  ಹಸ್ತಾಂತರ  ಕಾರ್ಯಕ್ರಮ  ಉಳ್ಳಾಲ  ಆಝಾದ್ ನಗರದ  ಇಸ್ಲಾಮಿಕ್  ನೋಲೇಜ್  ಸೆಂಟರಿನಲ್ಲಿ  ನಡೆಯಿತು. ಲಾಕ್ ಡೌನ್ ಹಾಗು ಇತರ ಕಾರಣಗಳಿಂದ ಸಂಕಷ್ಟ ಅನುಭವಿಸುತ್ತಿರುವ ಮೊಹಲ್ಲಾದ ಉಸ್ತಾದರುಗಳನ್ನು ಗುರುತಿಸಿ ಅವರಿಗೆ ಆರ್ಥಿಕ ಸಹಾಯ ನೀಡಿ, ಆ ಮೂಲಕ ಅವರ ಕಷ್ಟಗಳನ್ನು ನಿವಾರಿಸಲು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮುಅಲ್ಲಿಂ ಫಂಡ್ ಸಂಗ್ರಹ ಯೋಜನೆ  ಹಮ್ಮಿಕೊಂಡು, ಅಧೀನ ಬ್ರಾಂಚುಗಳ ಮೂಲಕ ಫಂಡ್ ಸಂಗ್ರಹಿಸಲಾಗಿತ್ತು.  ಸೆಂಟರ್  ಅಧ್ಯಕ್ಷರಾದ  ಬಶೀರ್  ಸಖಾಫಿ  ಉಳ್ಳಾಲ  ಪ್ರಸ್ತುತ  ಕಾರ್ಯಕ್ರಮದ  ಅಧ್ಯಕ್ಷತೆ  ವಹಿಸಿದರು.  ಸಮುದಾಯದಲ್ಲಿ  ಅತ್ಯಂತ  ಪ್ರಭಾವಿಗಳು ಮತ್ತು ಗೌರವಯುತ  ಸ್ಥಾನದಲ್ಲಿರುವವರು  ಮುಅಲ್ಲಿಮರಾಗಿದ್ದಾರೆ. ಅವರ  ಕಷ್ಟಕ್ಕೆ  ಸ್ಪಂದಿಸುವುದು  ನಮ್ಮೆಲ್ಲರ  ಜವಾಬ್ದಾರಿಯಾಗಿದೆ ಎಂದು ಎಸ್ ವೈ ಎಸ್  ರಾಜ್ಯ  ನಾಯಕರಾದ  ಬಿ.ಜಿ ಹನೀಫ್ ಹಾಜಿ  ಉಳ್ಳಾಲ  ಕಾರ್ಯಕ್ರಮ  ಉದ್ಘಾಟಿಸಿ  ತಿಳಿಸಿದರು. ಉಳ್ಳಾಲ  ರೇಂಜ್  ಪ್ರಧಾನ  ಕಾರ್ಯದರ್ಶಿ  ಅಯ್ಯೂಬ್  ಮಹ್ಳರಿ  ಶುಭಹಾರೈಸಿ  ಮಾತ...

ಜುಲೈ 01 ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಉಳ್ಳಾಲ ವ್ಯಾಪ್ತಿಯಲ್ಲಿ ಬರುವ ವೈದ್ಯರುಗಳಿಗೆ ಶುಭಾಶಯ ತಿಳಿಸುವ ವಿಶೇಷ ಅಭಿನಂದನಾ ಕಾರ್ಯಕ್ರಮ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮತ್ತು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ ವೈ ಎಸ್ ಟೀಂ ಇಸಾಬಃ ಉಳ್ಳಾಲ ಇದರ ವತಿಯಿಂದ ಜುಲೈ 01 ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಉಳ್ಳಾಲ ವ್ಯಾಪ್ತಿಯಲ್ಲಿ ಬರುವ ಹತ್ತು ವೈದ್ಯರುಗಳ ಸೇವೆಯನ್ನು ಗುರುತಿಸಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ತಮ್ಮ ರೋಗಿಗಳ ಆರೋಗ್ಯವನ್ನು ಪುನಃ ಸ್ಥಾಪಿಸಲು ಮತ್ತು ಕಳೆದು ಹೋದ ನಗು ಮುಖವನ್ನು ಮರಳಿ ತರಲು ಅಪಾರವಾಗಿ ಶ್ರಮ ವಹಿಸಿದ, ಪ್ರತ್ಯೇಕವಾಗಿ ಕೋವಿಡ್ 19 ಸಾಂಕ್ರಾಮಿಕ ರೋಗದ ದ್ವಿತೀಯ ಅಲೆಯ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ರೋಗಿಗಳಿಗೆ ಚಿಕಿತ್ಸೆ ನೀಡಿದ ಹಲವು ವೈದ್ಯರುಗಳು ಉಳ್ಳಾಲ ವ್ಯಾಪ್ತಿಯಲ್ಲಿ ಇದ್ದಾರೆ. ಇವರುಗಳಲ್ಲಿ ಪ್ರತ್ಯೇಕವಾಗಿ ಹತ್ತು ವೈದ್ಯರುಗಳನ್ನು ವಿಶೇಷವಾಗಿ ಪರಿಗಣಿಸಿ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು.  ಜನತೆಯ ಆರೋಗ್ಯ ರಕ್ಷಣೆಗೆ ಸ್ವಯಂ ಮರೆತು ಹಗಲಿರುಳು ದುಡಿದ ಉಳ್ಳಾಲ ಸರಕಾರಿ ಆಸ್ಪತ್ರೆಯ ವೈದ್ಯರುಗಳಾದ ಡಾ ಪ್ರಶಾಂತ್ ಅಮೀನ್, ಡಾ ಎಂ. ವಿದ್ಯಾಸಾಗರ್, ಡಾ ಸಾರಾ ನೌಶಾದ್, ಖಾಸಗಿ ಕ್ಲಿನಿಕ್ ವೈದ್ಯರುಗಳಾದ ಡಾ ಸುಜಯಾ ಪ್ರಭಾಕರ್ ನೇತಾಜಿ ಎಲ್ಲಪ್ಪ ಮೆಮೋರಿಯಲ್ ಆಸ್ಪತ್ರೆ ತೊಕ್ಕೋಟು, ಡಾ. ಸದಾಶಿವ ಪೊಲ್ನಾಯ ಎಸ್.ಕೆ ಕ್ಲಿನಿಕ್ ಉಳ್ಳಾಲ, ಡಾ ಸುರೇಶ್ ನಾಯ್ಕ್ ಉಳ್ಳಾಲ ಕ್ಲಿನಿಕ್ ಪೇಟೆ, ಡಾ ರವಿವರ್ಮ ಆಳ್ವಾ ಕ್ಲಿನಿಕ್ ಪೇಟೆ ಉಳ್ಳಾಲ, ಡಾ ಸತೀಶ್ ಕೆ ಎಲ್ ಸ್ವಾತಿ ಕ್ಲಿನಿಕ್ ಮುಕ್ಕಚ್ಚೇರಿ....