ಎಸ್ ವೈ ಎಸ್ ಮುಕ್ಕಚ್ಚೇರಿ ಬ್ರಾಂಚ್ ಮಹಾಸಭೆ ಹಾಗು ನೂತನ ಸಮಿತಿ ರಚನಾ ಕಾರ್ಯಕ್ರಮ ಮುಕ್ಕಚ್ಚೇರಿ ಬ್ರಾಂಚ್ ಕಛೇರಿಯಲ್ಲಿ ನಡೆಯಿತು.
ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ, ವರದಿ ಹಾಗು ಲೆಕ್ಕಪತ್ರ ಮಂಡಿಸಿದರು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ ಉಳ್ಳಾಲ ಸೆಂಟರ್ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ ಹಾಗು ಸೆಂಟರ್ ಕೋಶಾಧಿಕಾರಿ ಇಸಾಕ್ ಪೇಟೆ ರವರ ನೇತ್ರತ್ವದಲ್ಲಿ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಇಸ್ಮಾಯಿಲ್ ಯು ಬಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಕೈಕೋ, ಕೋಶಾಧಿಕಾರಿಯಾಗಿ ಹೈದರ್ ಅಲಿ ಎಚ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಅಸ್ಗರ್ ಕೋಟೆ, ಶಿಕ್ಷಣ ಹಾಗು ದಅವಾ ವಿಭಾಗದ ಕಾರ್ಯದರ್ಶಿಗಳಾಗಿ ಇಲ್ಯಾಸ್ ಕೈಕೋ, ಅಬ್ದುಲ್ ಸಮದ್, ಆರಿಫ್, ಸಾಂತ್ವನ ಹಾಗು ಇಸಾಬಃ ವಿಭಾಗದ ಕಾರ್ಯದರ್ಶಿಗಳಾಗಿ ಹಂಝ ಹಾಗು ರಾಹಿಝ್ ರವರನ್ನು ಆರಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಮುಕ್ಕಚ್ಚೇರಿ ಎಸ್ ವೈ ಎಸ್ ನೇತಾರರು ಕಾರ್ಯಕರ್ತರು ಭಾಗವಹಿಸಿದರು.


Comments