ಅಪಘಾತಕ್ಕೀಡಾದ ಹಿಂದೂ ಸಹೋದರನನ್ನು ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವತಾ ಸಹೋದರತೆಯನ್ನು ಜೀವಂತವಾಗಿಸಿದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಇದರ ಇಸಾಬಃ ಟೀಂ ಸದಸ್ಯ ಶಮೀರ್ ತೊಕ್ಕೋಟು
ಅಪಘಾತಕ್ಕೀಡಾದ ಹಿಂದೂ ಸಹೋದರನನ್ನು ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವತಾ ಸಹೋದರತೆಯನ್ನು ಜೀವಂತವಾಗಿಸಿದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಇದರ ಇಸಾಬಃ ಟೀಂ ಸದಸ್ಯ ಶಮೀರ್ ತೊಕ್ಕೋಟು ಪರಸ್ಪರ ಕೋಮು ಭಾವನೆಯ ಕಠೋರ ಮನಸ್ಥಿತಿಯ ಇಂದಿನ ಯುಗದಲ್ಲಿ ಪರಸ್ಪರ ಮಾನವೀಯ ಸಂಬಂಧ ಇಂದಿಗೂ ಅಮರವಾಗಿದೆ ಎಂದು ತನ್ನ ಕಾರ್ಯ ವೈಖರಿಯಿಂದ ಎಲ್ಲರ ಪ್ರಶಂಶೆಗೆ ಪಾತ್ರರಾದ ಶಮೀರ್ ತೊಕ್ಕೋಟು. ಮೊನ್ನೆ (12 - 02 - 2019) ಸಂಜೆಯ ವೇಳೆ ದೇರಳಕಟ್ಟೆ ನಿಟ್ಟೆಯ ಸಮೀಪ ಬೈಕ್ ಹಾಗು ಕೆನೆಟಿಕ್ ಸ್ಕೂಟರ್ ಮಧ್ಯೆ ನಡೆದ ಅಪಘಾತದಲ್ಲಿ ಕೆನೆಟಿಕ್ ಸವಾರರಾದ ಹಿಂದೂ ಸಹೋದರ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಘಟನೆ ನಡೆದ ಸ್ಥಳದಲ್ಲಿ ಜಮಾಯಿಸಿದ ಜನ ನೋಡುತ್ತಿದ್ದರೇ ವಿನಹ ಯಾರು ಕೂಡಾ ಗಾಯಾಳುವಿನ ಸನಿಹ ಹೋಗುವುದಾಗಲಿ, ಆತನಿಗೆ ಏನಾಗಿದೆ ಎಂದು ತಿಳಿಯುವ ಗೋಜಿಗಾಗಲೀ, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ಕನಿಷ್ಠ ಪ್ರಯತ್ನವನ್ನೂ ಮಾಡಲಿಲ್ಲ. ಅಷ್ಟೊತ್ತಿಗೆ ಅಲ್ಲಿಗೆ ಆಗಮಿಸಿದ ಶಮೀರ್ ತೊಕ್ಕೋಟು ತನ್ನ ಎಲ್ಲಾ ಕೆಲಸ ಕಾರ್ಯ, ಬ್ಯುಸಿಯನ್ನು ಬದಿಗಿರಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ವಾಹನದ ಏರ್ಪಾಟು ಮಾಡಿ, ದೇರಳಕಟ್ಟೆ ಬ್ಯಾರೀಸ್ ನ ಓರ್ವ ಸೆಕ್ಯೂರಿಟಿಯ ಸಹಾಯದೊಂದಿಗೆ ನಿಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಿ ತನ್ನದೇ ಹೆಸರಿನಲ್ಲಿ ಫೈಲ್ ತೆರೆಯಿಸಿ ಗಾಯಾಳುವಿನ ಚಿಕಿತ್ಸೆಗೆ ನೆರವಾದರು. ಬಳಿಕ ಗಾಯಾಳುವಿನ ಬಳಿಯಿದ್ದ ಮೊಬೈಲ್ ...