Skip to main content

Posts

Showing posts from March, 2020

ಎಸ್ ವೈ ಎಸ್ ಮಂಚಿಲ ಬ್ರಾಂಚ್ ವತಿಯಿಂದ ಅರ್ಹ ಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ

ಜಾಗತಿಕ ಮಹಾಮಾರಿ "COVID 19" ಪ್ರಯುಕ್ತ ಘೋಷಿಸಲಾದ ಲಾಕ್ ಡೌನ್ ನಿಂದ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಅರ್ಹ 32 ಕುಟುಂಬಗಳಿಗೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಎಸ್ ವೈ ಎಸ್ ಮಂಚಿಲ ಬ್ರಾಂಚ್ ವತಿಯಿಂದ ರೇಷನ್ ಕಿಟ್ ವಿತರಣೆ ಇತ್ತೀಚೆಗೆ ಮಾಡಲಾಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಮಂಚಿಲ ಬ್ರಾಂಚ್ ಅಧ್ಯಕ್ಷರಾದ ಅಶ್ರಫ್ ಸಅದಿ, ಉಪಾಧ್ಯಕ್ಷರಾದ ಸಯೀದ್, ಕೋಶಾಧಿಕಾರಿ ಅಶ್ರಫ್ ಅಕ್ಕರೆಕೆರೆ, ಪ್ರಧಾನ ಕಾರ್ಯದರ್ಶಿ ಶರೀಫ್, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಹಮೀದ್ ಮಂಚಿಲ ಹಾಗು ಜಾವಿದ್, ಲತೀಫಾಕ, ದಾವೂದ್ ಹಾಜರಿದ್ದರು.                  

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚಿನಿಂದ ಸಾಂತ್ವನ ಕಾರ್ಯಕ್ರಮಕ್ಕೆ ಸಹಾಯ ಹಸ್ತ

ಜಾಗತಿಕ ಮಹಾಮಾರಿ  "ಕೋವಿಡ್ 19" ಪ್ರಯುಕ್ತ ಘೋಷಿಸಲಾದ ರಾಷ್ಟ್ರೀಯ ಲಾಕ್ ಡೌನ್ ನಿಂದ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಜನರಿಗೆ ಯಾವುದೇ ಜಾತಿ, ಧರ್ಮ ನೋಡದೆ ತುರ್ತು ಸಹಾಯ, ಸಾಂತ್ವನ ಸೇವೆಗಳಲ್ಲಿ SYS ಉಳ್ಳಾಲ ಸೆಂಟರ್ ತೊಡಗಿಸಿಕೊಂಡಿದೆ. *ಒಂದುವರೆ ಲಕ್ಷ ರೂಪಾಯಿಗಳಿಗೂ ಮಿಕ್ಕ ಮೌಲ್ಯದ ರೇಷನ್ ಕಿಟ್ಟುಗಳು SYS ಉಳ್ಳಾಲ ಸೆಂಟರ್ ಸಾರಥ್ಯದಲ್ಲಿ ಸದ್ಯದಲ್ಲೇ ವಿತರಿಸಲಾಗುತ್ತಿದ್ದು, ಈ ಸಾಂತ್ವನ ಕಾರ್ಯಕ್ರಮಕ್ಕೆ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ 13,000 ರೂಪಾಯಿಗಳ ಧನ ಸಹಾಯ ನೀಡಲಾಯಿತು.* ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಂಡು ತೇಗುವವನು ನನ್ನವನಲ್ಲ ಎಂದು ಸಾರಿ ಹೇಳಿದ ಪ್ರವಾದಿ ﷺ ರವರ ಪವಿತ್ರ ಸಂದೇಶಕ್ಕೆ ಜೀವ ತುಂಬಿರುವ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಸೆಂಟರ್ ನಡೆಸುವ ಹಸಿದವರಿಗೆ ಉಣ ಬಡಿಸುವ ಮಾದರಿಯೋಗ್ಯ ಕಾರ್ಯಾಚರಣೆಯೊಂದಿಗೆ ಕೈ ಜೋಡಿಸಿದೆ. ಹಸಿದವನಿಗೆ ಉಣ ಬಡಿಸುವುದು ಅತ್ಯಂತ ದೊಡ್ಡ ಪುಣ್ಯದಾಯಕ ಕರ್ಮವಾಗಿದೆ. ಇಸ್ಲಾಮ್ ಅದಕ್ಕೆ ದೊಡ್ಡ ಪ್ರತಿಫಲ ನೀಡುವುದಾಗಿ ಘೋಷಿಸುತ್ತದೆ. ಹಸಿದವನ ಹಸಿವು ನೀಗಿಸುವ ಸೇವೆ ನಿಜಕ್ಕೂ ಶ್ಲಾಘನೀಯ. ಅಲ್ಲಾಹು ಸ್ವೀಕರಿಸಲಿ. ರೇಷನ್ ಕಿಟ್ಟುಗಳ ವಿತರಣೆಗೆ ಧನ ಸಹಾಯ ನೀಡಲು ಸಹಕರಿಸಿದ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚಿನ ಸದಸ್ಯರಿಗೂ, ಇತರರಿಗೂ ಅಲ್ಲಾಹನು ಇಹಪರ ಎರಡರಲ್ಲೂ ಸಂತೋಷವನ್ನು ನೀಡಲಿ. ಇಹದಲ...

ಎಸ್ ವೈ ಎಸ್ ಉಳ್ಳಾಲ ಸೆಂಟರಿನ ಶ್ಲಾಘನೀಯ ಸೇವೆ

ಜಾಗತಿಕ ಮಹಾಮಾರಿ  "ಕೋವಿಡ್ 19" ಪ್ರಯುಕ್ತ ಘೋಷಿಸಲಾದ ರಾಷ್ಟ್ರೀಯ ಲಾಕ್ ಡೌನ್ ನಿಂದ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಜನರಿಗೆ ಯಾವುದೇ ಜಾತಿ, ಧರ್ಮ ನೋಡದೆ ತುರ್ತು ಸಹಾಯ, ಸಾಂತ್ವನ ಸೇವೆಗಳಲ್ಲಿ  ತೊಡಗಿಸಿಕೊಂಡಿರುವ SYS ಉಳ್ಳಾಲ ಸೆಂಟರ್. ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ವಾಸಿಸುತ್ತಿರುವ ತಮಿಳು ನಾಡು ಮೂಲದ ಸತೀಶ್ ರಾಮಚಂದ್ರನ್ ಎಂಬ ಹಿಂದೂ ಸಹೋದರ ಕಳೆದ ಮೂರು ದಿನಗಳಿಂದ ಹಸಿವು ನೀಗಿಸಲು ಕಷ್ಟಪಡುತ್ತಿದ್ದುದನ್ನು ಅರಿತ ಎಸ್ ವೈ ಎಸ್ ಉಳ್ಳಾಲ ಸೆಂಟರ್ ನಾಯಕರು ತುರ್ತು ಪರಿಹಾರವಾಗಿ ನಿನ್ನೆ (27-03-2020) ಅಗತ್ಯ ರೇಷನನ್ನು ಮನೆಗೆ ತಲುಪಿಸಿದರು. ಈ ಸಂದರ್ಭದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ನಾಯಕರೂ, ಕರ್ನಾಟಕ ರಾಜ್ಯ ಎಸ್ ವೈ ಎಸ್ ಸದಸ್ಯರೂ ಆದ ಹನೀಫ್ ಹಾಜಿ ಉಳ್ಳಾಲ, ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ಉಪಸ್ಥಿತರಿದ್ದರು. ಒಂದುವರೆ ಲಕ್ಷ ರೂಪಾಯಿಗಳಿಗೂ ಮಿಕ್ಕ ಮೌಲ್ಯದ ಕಿಟ್ಟುಗಳು SYS ಉಳ್ಳಾಲ ಸೆಂಟರ್ ಸಾರಥ್ಯದಲ್ಲಿ ಸದ್ಯದಲ್ಲಿ ಅರ್ಹರ ಪಾಲಾಗಲಿದೆ. ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಂಡು ತೇಗುವವನು ನನ್ನವನಲ್ಲ ಎಂದು ಸಾರಿ ಹೇಳಿದ ಪ್ರವಾದಿ ﷺ ರವರ ಪವಿತ್ರ ಸಂದೇಶಕ್ಕೆ ಜೀವ ತುಂಬಿರುವ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾದರಿಯೋಗ್ಯ ಕಾರ್ಯಾಚರಣೆಯೊಂದಿಗೆ ಹಸಿದವರಿಗೆ ಉಣ ಬಡಿಸುತ್ತಿದೆ. ಹಸಿದವನಿಗೆ ಉಣ ಬಡಿ...

ಎಸ್ ವೈ ಎಸ್ ಮದನಿನಗರ ಬ್ರಾಂಚ್ ಆಶ್ರಯದಲ್ಲಿ ಅಜ್ಮೀರ್ ಮೌಲಿದ್ ಹಾಗು ರಜಬ್ ಸಂದೇಶ ಕಾರ್ಯಕ್ರಮ

ಎಸ್ ವೈ ಎಸ್ ಮದನಿನಗರ ಬ್ರಾಂಚ್ ಆಶ್ರಯದಲ್ಲಿ ಅಜ್ಮೀರ್ ಮೌಲಿದ್ ಹಾಗು ರಜಬ್ ಸಂದೇಶ ಕಾರ್ಯಕ್ರಮ ಬ್ರಾಂಚ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ಮೊರೊಕ್ಕೋ ರವರ ಅಧ್ಯಕ್ಷತೆಯಲ್ಲಿ ಮದನಿ ನಗರದ ಅಲ್ ಮದ್ರಸತುಲ್ ಸಯ್ಯಿದ್ ಮದನಿ ಮದ್ರಸ ಹಾಲ್ ನಲ್ಲಿ ನಡೆಯಿತು. ಸಯ್ಯಿದ್ ಮದನಿ ಮದ್ರಸದ ಸದರ್ ಮುಅಲ್ಲಿಮರಾದ ಅಯ್ಯೂಬ್ ಮಹ್ಲರಿ ದುವಾ ನಡೆಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿದರು. ಪವಿತ್ರ ರಜಬ್ ತಿಂಗಳು ಏನು ಸಂದೇಶ ನೀಡುತ್ತದೆ ಎಂಬುದರ ಕುರಿತು ಸುನ್ನೀ ಮೊಹಲ್ಲಾ ಒಕ್ಕೂಟ SMO ಉಳ್ಳಾಲ ಹಾಗು ಅಳೇಕಲ ಜುಮಾ ಮಸೀದಿಯ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ತರಗತಿ ನಡೆಸಿದರು. ಕಾರ್ಯಕ್ರಮದಲ್ಲಿ ಸಯ್ಯಿದ್ ಮದನಿ ಮದ್ರಸದ ಅಧ್ಯಕ್ಷರಾದ ಇಸ್ಮಾಯಿಲ್ ಎಸ್. ಎ, ಅಲ್ ಹಾಜ್ ಅಬ್ದುಲ್ ಅಝೀಝ್ ಮದನಿ ಶಾಂತಿಭಾಗ್, ಎಸ್ಸೆಸ್ಸೆಫ್ ಮದನಿ ನಗರ ಶಾಖಾಧ್ಯಕ್ಷರಾದ ಶೇಕ್ ಅಹ್ಮದ್ ಶಮೀರ್ ಹಾಗು ಮದನಿಗರದ ಎಸ್ ವೈ ಎಸ್, ಎಸ್ಸೆಸ್ಸೆಫ್ ನ ನಾಯಕರು, ಕಾರ್ಯಕರ್ತರು, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಂಖೂಸ್ ಮೌಲಿದ್ ಮತ್ತು ಅಜ್ಮೀರ್ ಮೌಲಿದ್ ಆತ್ಮೀಯ ಸಂಗಮ

ಎಸ್ ವೈ ಎಸ್ ಆಝಾದ್ ನಗರ ಬ್ರಾಂಚ್ ವತಿಯಿಂದ ಮಂಖೂಸ್ ಮೌಲಿದ್ ಮತ್ತು ಅಜ್ಮೀರ್ ಮೌಲಿದ್ ಆತ್ಮೀಯ ಸಂಗಮ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಇವರ ನೇತ್ರತ್ವದಲ್ಲಿ ಆಝಾದ್ ನಗರದ ಐಕೆಸಿ ಕಛೇರಿಯಲ್ಲಿ ನಡೆಯಿತು. ಆಝಾದ್ ನಗರ ಬ್ರಾಂಚ್ ಅಧ್ಯಕ್ಷರಾದ ಹನೀಫ್ ಹಾಜಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಆರ್ ಆರ್ ರಫೀಕ್, ಉಪಾಧ್ಯಕ್ಷರಾದ ಮಾಜಿ ಕೌನ್ಸಿಲರ್ ಶೌಕತ್, ಫಾರೂಕ್ ಕೋಡಿ, ಕುಞ್ಞಿ ಮೋನಾಕ, ಸಲಾಂ ಮಾಸ್ತಿಕಟ್ಟೆ ಹಾಗು ಇಲ್ಯಾಸ್ ಕೈಕೋ ಉಪಸ್ಥಿತರಿದ್ದರು.

ಬ್ರಹತ್ ಅಜ್ಮೀರ್ ಮೌಲಿದ್ ಆತ್ಮೀಯ ಸಂಗಮ

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಆಶ್ರಯದಲ್ಲಿ ಅಜ್ಮೀರ್ ಮೌಲಿದ್ ಆತ್ಮೀಯ ಸಂಗಮ ಬ್ರಾಂಚ್ ಅಧ್ಯಕ್ಷರಾದ ಅಬೂ ಮಫಾಝ್ ಮದನಿಯವರ ನೇತ್ರತ್ವದಲ್ಲಿ ಬ್ರಾಂಚ್ ಆಫೀಸ್ ಸಭಾಂಗಣದಲ್ಲಿ ನಡೆಯಿತು. ಸುಂದರಭಾಗ್ ಬದ್ರಿಯಾ ಜುಮಾ ಮಸೀದಿ ಖತೀಬರಾದ ಶರೀಫ್ ಸಅದಿ ಮಂಜೇಶ್ವರ ಅಜ್ಮೀರ್ ಶೈಖ್ ಅನುಸ್ಮರಣಾ ಭಾಷಣ ಮಾಡಿದರು. ಅತಿಥಿಗಳಾಗಿ ಭಾಗವಹಿಸಿದ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ಹಾಗು ಸೆಂಟರ್ ಕೋಶಾಧಿಕಾರಿ ಅಬ್ದುಸ್ಸಮದ್ ಹಳೆಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ಪ್ರಸ್ತುತ ಸಭೆಯಲ್ಲಿ ಬ್ರಾಂಚ್ ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಅಕ್ಕರೆಕೆರೆ, ಎಸ್ಸೆಸ್ಸೆಫ್ ಅಕ್ಕರೆಕೆರೆ ನಾಯಕರಾದ ಸಿರಾಜ್ ಅಕ್ಕರೆಕೆರೆ, ಎಸ್ಸೆಸ್ಸೆಫ್ ಹಳೆಕೋಟೆ ಶಾಖಾಧ್ಯಕ್ಷ ಹಮೀದ್ ಹಳೆಕೋಟೆ, ಪ್ರಧಾನ ಕಾರ್ಯದರ್ಶಿ ಸದ್ದಾಂ, ಕೋಶಾಧಿಕಾರಿ ಹನೀಫ್ ಹಾಗು ಅಕ್ಕರೆಕೆರೆ ಹಳೆಕೋಟೆ ಎಸ್ಸೆಸ್ಸೆಫ್ ಶಾಖೆಯ ಮತ್ತು ಎಸ್ ವೈ ಎಸ್ ಬ್ರಾಂಚಿನ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಿದರು.