Skip to main content

Posts

Showing posts from November, 2020

ಎಸ್ ವೈ ಎಸ್ ಉಳ್ಳಾಲ ಸೆಂಟರ್ COUNT - 20 ವಾರ್ಷಿಕ ಮಹಾಸಭೆ

ಎಸ್ ವೈ ಎಸ್ ಉಳ್ಳಾಲ ಸೆಂಟರ್ COUNT - 20 ವಾರ್ಷಿಕ ಮಹಾಸಭೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ COUNT - 20 ವಾರ್ಷಿಕ ಮಹಾಸಭೆ ಉಳ್ಳಾಲ ಮೇಲಂಗಡಿಯ ತಾಜುಲ್ ಉಲಮಾ ಸುನ್ನೀ ಸೆಂಟರಿನಲ್ಲಿ  ನಡೆಯಿತು.  ಎಸ್ ವೈ ಎಸ್ ಉಳ್ಳಾಲ ಸೆಂಟರ್ ದಅವಾ ಕಾರ್ಯದರ್ಶಿ ಪಿ ಎಸ್ ಎಂ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿದರು. ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಳಿಕ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ವರದಿ ಹಾಗು ಸೆಂಟರ್ ಕೋಶಾಧಿಕಾರಿ ಅಬ್ದುಸ್ಸಮದ್ ಹಳೆಕೋಟೆ ಲೆಕ್ಕಪತ್ರ ಮಂಡಿಸಿ ಸಭೆಯಲ್ಲಿ ಅಂಗೀಕರಿಸಲಾಯಿತು. ಎಸ್ ವೈ ಎಸ್ ರಾಜ್ಯ ನಾಯಕರು ಮತ್ತು ಸೆಂಟರ್ ಉಪಾಧ್ಯಕ್ಷರಾದ ಬಿ ಜಿ ಹನೀಫ್ ಹಾಜಿ ಉಳ್ಳಾಲ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಎಸ್ ವೈ ಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಲೀಲ್ ಮುಸ್ಲಿಯಾರ್ ಕಾವೂರು ಸಂಘಟನಾ ತರಗತಿ ನಡೆಸಿದರು. ಎಸ್ ವೈ ಎಸ್ ದ.ಕ ಜಿಲ್ಲಾಧ್ಯಕ್ಷರಾದ ಮುಹಮ್ಮದ್ ಅಲಿ ಸಖಾಫಿ ಸುರಿಬೈಲು ಸಂಘಟನಾ ರಂಗದಲ್ಲಿ ಎಸ್ ವೈ ಎಸ್ ನ ಪ್ರಾಮುಖ್ಯತೆ ಎಂಬ ವಿಷಯದಲ್ಲಿ ತರಗತಿ ನಡೆಸಿದರು. ಸೆಂಟರ್ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ ಸ್ವಾಗತಿಸಿದರು. ಸೆಂಟರ್ ಸಮಿತಿ ನಾಯಕರು, ಬ್ರಾಂಚ್ ಕೌನ್ಸಿಲರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.