Skip to main content

Posts

Showing posts from March, 2017

ರಿಯಾಝ್ ಉಸ್ತಾದ್ ಫಂಡ್ ಹಸ್ತಾಂತರ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ರಿಯಾಝ್ ಮುಸ್ಲಿಯಾರ್ ಕುಟುಂಬದ ನೆರವಿಗೆ ಸಂಗ್ರಹಿಸಿದ ಫಂಡನ್ನು ರಿಯಾಝ್ ಮುಸ್ಲಿಯಾರ್ ಇವರ ಪತ್ನಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಸಯ್ಯಿದ್ ಜಲಾಲುದ್ದೀನ್ ತಂಗಳ್, ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಸಂಚಾಲಕ ಅಶ್ರಫ್ ಹಾಜಿ ಮುಕ್ಕಚ್ಚೇರಿ, ಕೋಶಾಧಿಕಾರಿ ಇಸಾಕ್ ಪೇಟೆ ಹಾಗು ಸಯ್ಯಿದ್ ಮದನಿ ದರ್ಗಾ ಮತ್ತು ಕೇಂದ್ರ ಜುಮಾ ಮಸೀದಿ ಉಳ್ಳಾಲ ಇದರ ಮಾಜಿ ಸಮಿತಿಗಳಾದ ಫಾರೂಖ್ ಕೋಡಿ ಹಾಗು ನಾಝಿಂ ಮುಕ್ಕಚ್ಚೇರಿ ಉಪಸ್ಥಿತರಿದ್ದರು.

ಬ್ರಹತ್ ತಹ್ಲೀಲ್ ಮಜ್ಲಿಸ್ ಹಾಗು ಪ್ರಾರ್ಥನಾ ಸಂಗಮ 23-3-2017

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ಬ್ರಹತ್ ತಹ್ಲೀಲ್ ಮಜ್ಲಿಸ್ ಹಾಗು ಪ್ರಾರ್ಥನಾ ಸಂಗಮ ಸೆಂಟರ್ ಅಧ್ಯಕ್ಷ ಸಯ್ಯಿದ್ ಜಲಾಲುದ್ದೀನ್ ತಂಗಳ್ ಇವರ ಅಧ್ಯಕ್ಷತೆಯಲ್ಲಿ ಮೇಲಂಗಡಿಯ ಫಿರ್ದೌಸ್ ಅಪಾರ್ಟ್ ಮೆಂಟ್ ವರಾಂಡದಲ್ಲಿ ನಡೆಯಿತು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷ ಬಶೀರ್ ಅಹ್ಸನಿ ತೋಡಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಯ್ಯಿದ್ ಸಲಾಂ ಮದನಿ ಅಳೇಕಲ ದುವಾ ನೆರವೇರಿಸಿದರು. ಇತ್ತೀಚೆಗೆ ಕಾಸರಗೋಡ್ ಚೂರಿಯ ಮಸೀದಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಕೊಟ್ಟಮುಡಿ ಆಝಾದ್ ನಗರದ ರಿಯಾಝ್ ಉಸ್ತಾದ್ ಹಾಗು ಪೆರಿಯಡ್ಕ ಮಹಮೂದ್ ಬಾಖವಿ ಉಸ್ತಾದರ ಮೇಲೆ ತಹಲೀಲ್ ಸಮರ್ಪಿಸಲಾಯಿತು. ಪ್ರಾರ್ಥನಾ ಸಂಗಮದ ನೇತ್ರತ್ವವನ್ನು ಸಯ್ಯಿದ್ ಜಲಾಲುದ್ದೀನ್ ತಂಗಳ್ ವಹಿಸಿದರು. ಈ ಸಂದರ್ಭದಲ್ಲಿ ರಿಯಾಝ್ ಉಸ್ತಾದರ ಕುಟುಂಬದ ನೆರವಿಗಾಗಿ ಹಾಗು ಬಡ ಕುಟುಂಬವೊಂದರ ಹೆಣ್ಣಿನ ಮದುವೆಗಾಗಿ ಫಂಡ್ ಶೇಖರಿಸಲಾಯಿತು. ಈ ಸಂದರ್ಭದಲ್ಲಿ ಸೆಂಟರ್ ಉಪಾಧ್ಯಕ್ಷ ತ್ವಾಹಿರ್ ಹಾಜಿ, ಸೆಂಟರ್ ಕೋಶಾಧಿಕಾರಿ ಇಸಾಕ್ ಪೇಟೆ, ಎಸ್ ವೈ ಎಸ್ ದ.ಕ ಜಿಲ್ಲಾ ಕೋಶಾಧಿಕಾರಿ ಖತರ್ ಬಾವ ಹಾಜಿ, ಸೆಂಟರ್ ಸಂಚಾಲಕ ಅಶ್ರಫ್ ಹಾಜಿ, ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಅಧ್ಯಕ್ಷ ಬಶೀರ್ ಸಖಾಫಿ ಉಳ್ಳಾಲ, ಮುಕ್ಕಚ್ಚೇರಿ ಮಸ್ಜಿದ್ ಅಧ್ಯಕ್ಷ ಇಸ್ಮಾಯಿಲ್, ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಕಾದರ್, ಝಿಯಾದ್ ತ...

ಕಾಸರಗೋಡ್ ಚೂರಿಯಲ್ಲಿ ನಡೆದ ಭೀಕರ ಕೊಲೆಯ ವಿರುದ್ದ ಖಂಡನೆ

ಕಾಸರಗೋಡು ಚೂರಿ ಎಂಬಲ್ಲಿ ಮಸೀದಿಗೆ ನುಗ್ಗಿ ಕೊಡಗು ಕೊಟ್ಟಮುಡಿ ಆಝಾದ್ ನಗರ ನಿವಾಸಿಯಾದ ರಿಯಾಝ್ ಮುಸ್ಲಿಯಾರ್ ರವರನ್ನು ಭೀಕರವಾಗಿ ಕೊಲೆಗೈದ ಪೈಶಾಚಿಕ ಘಟನೆಯನ್ನು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ...

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸಮಿತಿ ಸದಸ್ಯರಾಗಿ ಇತ್ತೀಚೆಗೆ ಆಯ್ಕೆಯಾದ ಸಯ್ಯಿದ್ ಫಝಲ್ ಕೋಯಮ್ಮ ತಂಗಳ್ ಕೂರತ್ ರವರಿಗೆ ಸನ್ಮಾನ

ಉಳ್ಳಾಲ ಮದನಿನಗರ : ಮದನಿ ನಗರ ಜುಮಾ ಮಸೀದಿಯಲ್ಲಿ ಮಾಸಂಪ್ರತಿ ನಡೆಸಿಕೊಂಡು ಬರುವ ಸ್ವಲಾತ್ ಮಜ್ಲಿಸ್ ನ ವಾರ್ಷಿಕ ಸಮಾರಂಭವು ದ.ಕ ಜಿಲ್ಲಾ ಸಂಯುಕ್ತ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಗಳ್ ಕೂರತ್ ರವರ ...

ಅಕ್ಕರೆಕೆರೆ : ಮೆಹಫಿಲೇ ತ್ವಯ್ಬಃ ಹಾಗು ತಹ್ಲೀಲ್ ಸಂಗಮ

🍄🌷🍄🌷🍄🌷🍄🌷🍄🌷🍄 🍄🌷🍄🌷🍄🌷🍄🌷🍄🌷🍄 ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಹಾಗು ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಉಳ್ಳಾಲ ಇದರ ಜಂಟಿ ಆಶ್ರಯದಲ್ಲಿ ಮೆಹಫಿಲೇ ತ್ವಯ್ಬಃ ಮಜ್ಲಿಸ್ ಹ...

ದಾಂಪತ್ಯ ಜೀವನಕ್ಕೆ ಪಾದಾರ್ಪಣೆಗೈದ ಅಕ್ಕರೆಕೆರೆ ಸದರ್ ಉಸ್ತಾದಿಗೆ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಕಿರು ಸ್ಮರಣಿಕೆ

ಕೋಟ್ಯಾನುಕೋಟಿ ನಿರೀಕ್ಷೆಯೊಂದಿಗೆ ಮಾರ್ಚ್ 12-2017 ರಂದು ದಾಂಪತ್ಯ ಹೊಸ್ತಿಲು ದಾಟಿದ ನಮ್ಮ ಅಕ್ಕರೆಕೆರೆ ಜನ್ನತುಲ್ ಉಲೂಮ್ ಮದ್ರಸ ಸದರ್  ಉಸ್ತಾದಿಗೆ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯ...