Skip to main content

Posts

Showing posts from August, 2020

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಎಸ್ ವೈ ಎಸ್ ಸದಸ್ಯತ್ವದ ಐಡಿ ಕಾರ್ಡ್ ವಿತರಣೆ ಹಾಗು ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸ್

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಎಸ್ ವೈ ಎಸ್ ಸದಸ್ಯತ್ವದ ಐಡಿ ಕಾರ್ಡ್ ವಿತರಣೆ ಹಾಗು ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸ್ ಬ್ರಾಂಚ್ ಅಧ್ಯಕ್ಷರಾದ ಅಬೂ ಮಫಾಝ್ ಮದನಿ ಹಳೆಕೋಟೆಯವರ ನೇತ್ರತ್ವದಲ್ಲಿ ಹಳೆಕೋಟೆಯ ಶಬೀರ್ ಪ್ಯಾಲೇಸಿನಲ್ಲಿ ಜರುಗಿತು. ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ಕಾರ್ಯಕ್ರಮ ಉದ್ಘಾಟಿಸಿದರು. ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಎಸ್ ವೈ ಎಸ್ ಸದಸ್ಯತ್ವ ಐಡಿ ಕಾರ್ಡಿನ ಕುರಿತು ಮಾಹಿತಿ ನೀಡಿದರು. ಸಂಘಟನೆಯ ಹಿರಿಯ ಸದಸ್ಯರುಗಳಾದ ಅಬ್ದುರ್ರಹ್ಮಾನ್ ಅಕ್ಕರೆಕೆರೆ ಹಾಗು ಯೂಸುಫ್ (ಯೂನುಸಾಕ) ಅಕ್ಕರೆಕೆರೆ ಯವರಿಗೆ ಸೆಂಟರ್ ಅಧ್ಯಕ್ಷರು ಐಡಿ ಹಸ್ತಾಂತರಿಸುವ ಮೂಲಕ ಐಡಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  ಸುಂದರಭಾಗ್ ಬದ್ರಿಯಾ ಜುಮಾ ಮಸೀದಿ ಖತೀಬರಾದ ಶರೀಫ್ ಸಅದಿ ಮಂಜೇಶ್ವರ ತರಗತಿ ನಡೆಸಿ ದುವಾ ನಡೆಸಿದರು. ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸೆಂಟರ್ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ, ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಖಾಲಿದ್ ಅಕ್ಕರೆಕೆರೆ ಹಾಗು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚಿನ ಸದಸ್ಯರು ಮತ್ತು ಹಾಜರಿದ್ದರು. ಎಸ್ಸೆಸ್ಸೆಫ್ ಹಳೆಕೋಟೆ ಶಾಖಾ ನಾಯಕರಾದ ಹಮೀದ್ ಹಳೆಕೋಟೆ, ಹನೀಫ್ ಹಳೆಕೋಟೆ ಉಪಸ್ಥಿತರಿದ್ದರು.  

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಆಝಾದ್ ನಗರ ಬ್ರಾಂಚ್ ಸದಸ್ಯತ್ವದ ಐಡಿ ಕಾರ್ಡ್ ವಿತರಣೆ.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಆಝಾದ್ ನಗರ ಬ್ರಾಂಚ್ ಸದಸ್ಯತ್ವದ ಐಡಿ ಕಾರ್ಡ್ ವಿತರಣೆ. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಆಝಾದ್ ನಗರ ಬ್ರಾಂಚ್ ಸದಸ್ಯರ ಸದಸ್ಯತ್ವದ ಐಡಿ ಕಾರ್ಡ್ ವಿತರಣಾ ಕಾರ್ಯಕ್ರಮ ಬ್ರಾಂಚ್ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಉಳ್ಳಾಲ ಪುರಸಭಾ ಸ್ಥಳೀಯ ಕೌನ್ಸಿಲರ್ ಮುಹಮ್ಮದ್ ಅಶ್ರಫ್ ಕಾರ್ಯಕ್ರಮ ಉದ್ಘಾಟಿಸಿದರು. ಮಾಸ್ತಿಕಟ್ಟೆ ಜುಮಾ ಮಸೀದಿ ಅಧ್ಯಕ್ಷರಾದ ಮುಹಮ್ಮದ್ ಫ್ಯಾನ್ಸಿಗೆ ಐಡಿ ಕಾರ್ಡ್ ನೀಡುವ ಮೂಲಕ ಐಡಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  ಎಸ್ ವೈ ಎಸ್ ಸದಸ್ಯರುಗಳಾದ ಆಝಾದ್ ನಗರ ಬದ್ರಿಯ್ಯ ಫರ್ನೀಚರ್ ಮಾಲಕರಾದ ಮಯ್ಯದ್ದಿಯಾಕ, ಮುಸ್ತಫ ಹಾಗು ಶೌಕತ್ ಇಬ್ರಾಹಿಂ ಉಪಸ್ಥಿತರಿದ್ದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಆರ್ ಆರ್ ರಫೀಕ್ ಸ್ವಾಗತಿಸಿದರು.  

ಎಸ್ ವೈ ಎಸ್ ಉಳ್ಳಾಲ ಸೆಂಟರಿನ ಅಧೀನದ 13 ಬ್ರಾಂಚುಗಳಲ್ಲಿ ನಡೆದ ಎಸ್ ವೈ ಎಸ್ ಸದಸ್ಯತ್ವ ಐಡಿ ವಿತರಣಾ ಕಾರ್ಯಕ್ರಮ

ಕೋಡಿ ಕೋಟೆಪುರ ಬ್ರಾಂಚ್ ಮಂಚಿಲ ಬ್ರಾಂಚ್ ಅಳೇಕಲ ಬ್ರಾಂಚ್ ಮಾರ್ಗತಲೆ ಬ್ರಾಂಚ್ ಮೇಲಂಗಡಿ ಬ್ರಾಂಚ್ ತೊಕ್ಕೋಟು ಬ್ರಾಂಚ್ ಸುಂದರಭಾಗ್ ಮದನಿ ನಗರ ಆಝಾದ್ ನಗರ ಮುಕ್ಕಚ್ಚೇರಿ ಪಟ್ಲ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಉಳ್ಳಾಲ ಬೈಲು ಬ್ರಾಂಚ್