ಎಸ್ ವೈ ಎಸ್ ಅಳೇಕಲ ಬ್ರಾಂಚ್ ಮಹಾಸಭೆ ಹಾಗು ನೂತನ ಸಮಿತಿ ರಚನಾ ಕಾರ್ಯಕ್ರಮ ಉಳ್ಳಾಲ ಅಳೇಕಲದಲ್ಲಿ ನಡೆಯಿತು.
ಬ್ರಾಂಚ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಅಳೇಕಲ ಜುಮಾ ಮಸೀದಿಯ ಖತೀಬರಾದ ಅಬೂಝಿಯಾದ್ ಮದನಿ ಪಟ್ಟಾಂಬಿ ಉಸ್ತಾದ್ ಉದ್ಘಾಟಿಸಿದರು
ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ, ವರದಿ ಹಾಗು ಲೆಕ್ಕಪತ್ರ ಮಂಡಿಸಿದರು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ ದ.ಕ ಜಿಲ್ಲಾ ಎಸ್ ವೈ ಎಸ್ ಕೋಶಾಧಿಕಾರಿ ಬಿ.ಜಿ ಹನೀಫ್ ಹಾಜಿ ರವರ ನೇತ್ರತ್ವದಲ್ಲಿ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಮದನಿ ಕೈಕೋ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಅಶ್ರಫ್ ಅಳೇಕಲ, ಕೋಶಾಧಿಕಾರಿಯಾಗಿ ಅಬ್ದುಲ್ ರಝ್ಝಾಕ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಸಯ್ಯಿದ್ ಜಲಾಲ್ ತಂಗಲ್, ಶಿಕ್ಷಣ ಹಾಗು ದಅವಾ ವಿಭಾಗದ ಕಾರ್ಯದರ್ಶಿಯಾಗಿ ರಹ್ಮತ್, ಸಾಂತ್ವನ ಹಾಗು ಇಸಾಬಃ ವಿಭಾಗದ ಕಾರ್ಯದರ್ಶಿಯಾಗಿ ಅಕೌಂಟ್ ಬಾವಾಕ ಇವರನ್ನು ಆರಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ 15 ಮಂದಿಯನ್ನು ಆರಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಉಸ್ಮಾನ್ ಸಖಾಫಿ ಪೊಳಲಿ, ಶಿಹಾಬ್ ಸಖಾಫಿ ಉಳ್ಳಾಲ, ಹನೀಫ್ ಸಅದಿ ಅಳೇಕಲ ಸಹಿತ ಎಸ್ ವೈ ಎಸ್ ನೇತಾರರು ಕಾರ್ಯಕರ್ತರು ಭಾಗವಹಿಸಿದರು.



Comments