Skip to main content

Posts

Showing posts from June, 2019

ಎಚ್ಚರಿಕೆ : ಉಳ್ಳಾಲದ ಸಮುದ್ರ ಆಳವಾಗಿದೆ, ಈಜುವ, ನೀರಿನಾಟ ಆಡುವ ಗೋಜಿಗೆ ಹೋಗದಿರಿ

ಎಚ್ಚರಿಕೆ : ಉಳ್ಳಾಲದ ಸಮುದ್ರ ಆಳವಾಗಿದೆ, ಈಜುವ, ನೀರಿನಾಟ ಆಡುವ ಗೋಜಿಗೆ ಹೋಗದಿರಿ. ಉಳ್ಳಾಲ ಸಯ್ಯಿದ್ ಮದನಿ ಖ.ಸಿ ದರ್ಗಾ ಹಾಗು ಇತರ ಪ್ರವಾಸ ತಾಣಗಳಿಗೆ ಸಂದರ್ಶನಕ್ಕೆ ಆಗಮಿಸುವ ಕರ್ನಾಟಕ, ಕೇರಳ, ತಮಿಳ್ನಾಡು ಹಾಗು ಇತರ ರಾಜ್ಯಗಳ ಪ್ರವಾಸಿಗರು ಅದರಲ್ಲೂ ಉತ್ತರ ಕರ್ನಾಟಕದ ಪ್ರವಾಸಿಗರು ಬಹಳ ಜಾಗರೂಕರಾಗಿರಬೇಕಾದ ಒಂದು ಸಂಗತಿಯಾಗಿದೆ. ದ.ಕ ಜಿಲ್ಲೆಯ ಒಳಗಿನ ಪ್ರವಾಸೀ ತಾಣಗಳಿಗೆ ಸಂದರ್ಶನಕ್ಕೆ ಬರುವವರು ಉಳ್ಳಾಲದ ಮತ್ತು ಇತರ ಸ್ಥಳಗಳಲ್ಲಿರುವ ಸಮುದ್ರ ಕಿನಾರೆಗೆ ಭೇಟಿ ನೀಡುವುದು ಹವ್ಯಾಸವಾಗಿ ಬಿಟ್ಟಿದೆ. ವರ್ಷ ಪೂರ್ತಿ ಇಲ್ಲಿನ ಸಮುದ್ರದಲ್ಲಿ ತೆರೆಗಳ ಆರ್ಭಟ ಹೆಚ್ಚಿರುತ್ತದೆ. ಅದರಲ್ಲೂ ಉಳ್ಳಾಲದ ಸಮುದ್ರ ಕಿನಾರೆಯು ತುಂಬಾ ಆಳವಾಗಿದ್ದು, ಅಲೆಗಳ ಆರ್ಭಟ ಹಾಗು ಸೆಳೆತ ಅಧಿಕವಾಗಿದ್ದು ತುಂಬಾ ಅಪಾಯವಾದುದಾಗಿದೆ. ಉಳ್ಳಾಲ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಅಪಾರ ಸಾವುಗಳು ಸಂಭವಿಸಿದ್ದು, ಅದರಲ್ಲೂ ಉತ್ತರ ಕರ್ನಾಟಕದಿಂದ ಉಳ್ಳಾಲ ಸಯ್ಯಿದ್ ಮದನಿ ಖ.ಸಿ ದರ್ಗಾ ಝಿಯಾರತಿಗೆ ಬರುವ ಸಂದರ್ಶಕರ ಸಾವಿನ ಸಂಖ್ಯೆ ಹೆಚ್ಚಿದೆ. ಆದುದರಿಂದ ಸಮುದ್ರ ಕಿನಾರೆಗೆ ತೆರಳುವ ಸಂದರ್ಶಕರು ತುಂಬಾ ಜಾಗ್ರತೆ ವಹಿಸಿ ವೀಕ್ಷಣೆ ಮಾಡಬಹುದಾಗಿದೆ. ಊರಿನಿಂದ ಸಂತೋಷದಿಂದ ಪ್ರವಾಸ ಹೊರಟು ಊರಿಗೆ ದುಃಖದಿಂದ ಮರಳಿ ಹೋಗಬೇಕಾದ ದುಸ್ಥಿತಿ ಬರಬಾರದು. ಕಳೆದು ಹೋದ ಮೇಲೆ ಚಿಂತಿಸಿ ಫಲವಿಲ್ಲ. ಯಾವುದೇ ಸಮಯದಲ್ಲಿ ಅಪಾಯ ತಂದೊಡ್ಡಬಹುದಾದ ಸಮುದ್ರ ಸ್ನಾನಕ್ಕಿಳಿಯು...