Skip to main content

Posts

Showing posts from October, 2022

ತಾಜುಲ್ ಫುಖಹಾ ಫಿಕ್ಹ್ ಕ್ಲಾಸ್

ಉಳ್ಳಾಲ : ಎಸ್ ವೈ ಎಸ್ ಪಟ್ಲ ಬ್ರಾಂಚ್  ವತಿಯಿಂದ ಮಾಸಂಪ್ರತಿ ನಡೆಸುವ ತಾಜುಲ್  ಫುಖಹಾ ಫಿಕ್ಹ್ ಕ್ಲಾಸ್ ಎಸ್ಸೆಸ್ಸೆಫ್ ಪಟ್ಲ ಶಾಖಾ ಆಫೀಸ್ ಹಾಲಲ್ಲಿ ಜರುಗಿತು. ಬ್ರಾಂಚ್ ಉಸ್ತುವಾರಿ ನವಾಝ್ ಸಖಾಫಿ ಉಳ್ಳಾಲ ತರಗತಿ ನಡೆಸಿದರು. ಬಳಿಕ ಪವಿತ್ರ ಉಮ್ರಾ ಯಾತ್ರೆಗೆ ಹೊರಡುವ  SYS ಪಟ್ಲ ಬ್ರಾಂಚಿನ ಅಧ್ಯಕ್ಷರು ಹಾಗೂ ದರ್ಗಾ ಸಮಿತಿ ಸದಸ್ಯರು ಆದ  ಮೊಯ್ದಿನಾಕ ಇವರಿಗೆ  ಎಸ್ ವೈ ಎಸ್ ಪಟ್ಲ ಬ್ರಾಂಚ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಎಸ್ಸೆಸ್ಸೆಫ್ ಪಟ್ಲ ಶಾಖೆ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಪ್ರಸ್ತುತ ತರಗತಿಯಲ್ಲಿ ಎಸ್ ವೈ ಎಸ್, ಎಸ್ಸೆಸ್ಸೆಫ್ ನಾಯಕರು, ಸದಸ್ಯರು ಉಪಸ್ಥಿತರಿದ್ದರು. ತರಗತಿಯ ಪುಟ್ಟ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಮೌಲಿದ್ ಮಜ್ಲಿಸಿಗೆ ಚಾಲನೆ

ಮೌಲಿದ್ ಮಜ್ಲಿಸಿಗೆ ಚಾಲನೆ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಹಮ್ಮಿಕೊಂಡ ಮನೆ ಮನೆಗಳಲ್ಲಿ ಮೌಲಿದ್ ಮಜ್ಲಿಸ್ ಕಾರ್ಯಕ್ರಮದ ಪ್ರಥಮ ಮಜ್ಲಿಸ್ ಹಮೀದಾಕ ಹಳೆಕೋಟೆಯವರ ನಿವಾಸದಲ್ಲಿ ನಿನ್ನೆ ಮಗ್ರಿಬ್ ಬಳಿಕ ನಡೆಯಿತು. ಬ್ರಾಂಚ್ ಸದಸ್ಯರಾದ ಆರ್.ಕೆ ಮದನಿ ಅಕ್ಕರೆಕೆರೆಯವರ ನೇತ್ರತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಯಿತು. ಇಂದು ಬೆಳಿಗ್ಗೆ ಮುಹಮ್ಮದ್ ಅಕ್ಕರೆಕೆರೆಯವರ ನಿವಾಸದಲ್ಲಿ ದಅವಾ ಕಾರ್ಯದರ್ಶಿ ಅಶ್ರಫ್ ಝುಹ್ರಿಯವರ ನೇತ್ರತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಯಿತು. ಮಜ್ಲಿಸಿನಲ್ಲಿ ಬ್ರಾಂಚ್ ನಾಯಕರು, ಸದಸ್ಯರು ಹಾಗು ಮನೆ ಮಂದಿ ಹಾಜರಿದ್ದರು.