Skip to main content

Posts

Showing posts from March, 2025

ಗ್ರ್ಯಾಂಡ್ ಇಫ್ತಾರ್ ಕೂಟ ಹಾಗು ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸ್

ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ವತಿಯಿಂದ ಗ್ರ್ಯಾಂಡ್ ಇಫ್ತಾರ್ ಕೂಟ ಹಾಗು ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸ್ ಉಳ್ಳಾಲ ಅಕ್ಕರೆಕೆರೆಯ ಶಾಖಾ ಸಭಾ ಭವನ ಖುರ್ರತುಸ್ಸಾದಾತ್ ಸುನ್ನೀ ಸೆಂಟರಿನಲ್ಲಿ ನಡೆಯಿತು. ಇಫ್ತಾರ್ ಕೂಟದ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಇಫ್ತಾರ್ ಕೂಟದ ಮತ್ತೊಂದು ವೀಡಿಯೋ ನೋಡಲು ನನ್ನನ್ನು ಮುಟ್ಟಿ ಎಸ್ಸೆಸ್ಸೆಫ್ ಶಾಖಾ ನಿರ್ದೇಶಕರಾದ ಹಾಫಿಲ್ ಆಶಿಖ್ ಹಿಮಮಿ ಸಖಾಫಿ ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸಿನ ನೇತ್ರತ್ವ ವಹಿಸಿದರು.  ಇಫ್ತಾರ್ ಕೂಟದ ಮತ್ತೊಂದು ವೀಡಿಯೋ ನೋಡಲು ನನ್ನನ್ನು ಮುಟ್ಟಿ ಪ್ರಸ್ತುತ ಸಭೆಯಲ್ಲಿ ನಮ್ಮಿಂದ ಅಗಲಿದ ಸಂಘಟನಾ ಮಿತ್ರರು, ಊರಿನ ಮಹಣೀಯರ ಹೆಸರಿನಲ್ಲಿ ಕೆ ಎಂ ಜೆ ದಅವಾ ಕಾರ್ಯದರ್ಶಿ ಶಂಸುದ್ದೀನ್ ಮದನಿ ಉಸ್ತಾದ್ ದುಆ ನೆರವೇರಿಸಿದರು. ಇಫ್ತಾರ್ ಕೂಟದ ಮತ್ತೊಂದು ವೀಡಿಯೋ ನೋಡಲು ನನ್ನನ್ನು ಮುಟ್ಟಿ ಇಫ್ತಾರ್ ಕಾರ್ಯಕ್ರಮದಲ್ಲಿ ಕೆ ಎಂ ಜೆ, ಎಸ್ ವೈ ಎಸ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ನಾಯಕರು, ಸದಸ್ಯರು, ಹಿತೈಷಿಗಳು ಭಾಗವಹಿಸಿದರು.

ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ರಂಝಾನ್ ಫಂಡ್ ವಿತರಣೆ

ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ರಂಝಾನ್ ಫಂಡ್ ವಿತರಣಾ ಕಾರ್ಯಕ್ರಮ ಉಳ್ಳಾಲ ಅಕ್ಕರೆಕೆರೆಯ ಶಾಖಾ ಸಭಾ ಭವನ ಖುರ್ರತುಸ್ಸಾದಾತ್ ಸುನ್ನೀ ಸೆಂಟರಿನಲ್ಲಿ ನಡೆಯಿತು. ಕೆ ಎಂ ಜೆ ಅಧ್ಯಕ್ಷರಾದ ಹಸನ್ ಹಾಜಿ ಉಳ್ಳಾಲ ಸಭೆಯ ಅಧ್ಯಕ್ಷತೆ ವಹಿಸಿದರು. ಎಸ್ ವೈ ಎಸ್ ಉಳ್ಳಾಲ ಝೋನ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಉದ್ಘಾಟಿಸಿದರು. ಕೆ ಎಂ ಜೆ ದಅವಾ ಕಾರ್ಯದರ್ಶಿ ಶಂಸುದ್ದೀನ್ ಮದನಿ ಹಾಗು ಎಸ್ ವೈ ಎಸ್ ಉಳ್ಳಾಲ ಸರ್ಕಲ್ ಅಧ್ಯಕ್ಷರಾದ ಮುಹಮ್ಮದ್ ಇಸ್ಹಾಖ್ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು.  ಬಳಿಕ ರಂಝಾನ್ ಫಂಡ್ ಅರ್ಹ ಬಡ ಕುಟುಂಬಗಳಿಗೆ ವಿತರಿಸಲಾಯಿತು. ಎಸ್ ವೈ ಎಸ್ ಶಾಖಾ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿ ಎಸ್ ವೈ ಎಸ್ ಶಾಖಾಧ್ಯಕ್ಷರಾದ ಅಶ್ರಫ್ ಝುಹ್ರಿ ಧನ್ಯವಾದಗೈದರು.  ರಂಝಾನ್ ಫಂಡ್ ವಿತರಣಾ ಕಾರ್ಯಕ್ರಮದ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಪ್ರಸ್ತುತ ಕಾರ್ಯಕ್ರಮದಲ್ಲಿ ಕೆ ಎಂ ಜೆ ಶಾಖಾ ಉಪಾಧ್ಯಕ್ಷರಾದ ಹುಸೈನ್ ಮೋನು, ಕೋಶಾಧಿಕಾರಿ ಅಬ್ದುಲ್ ರಹ್ಮಾನ್, ಸಾಂತ್ವನ ಕಾರ್ಯದರ್ಶಿ ಅಬ್ದುಲ್ ಸತ್ತಾರ್, ಶಾಖಾ ಎಸ್ಸೆಸ್ಸೆಫ್ ನಾಯಕರಾದ ಹಾಫಿಲ್ ಆಶಿಖ್ ಹಿಮಮಿ ಸಖಾಫಿ, ಎಸ್ ವೈ ಎಸ್ ಶಾಖಾ ಸಾಂತ್ವನ ಕಾರ್ಯದರ್ಶಿ ಸಲಾಂ ಅಕ್ಕರೆಕೆರೆ ಹಾಗು ಶಾಖಾ ಕೆ ಎಂ ...

ಅಕ್ಕರೆಕೆರೆ ಸುನ್ನೀ ಆದರ್ಶ ಸಮ್ಮೇಳನ ಅಭೂತಪೂರ್ವ ಯಶಸ್ವಿ

KMJ, SYS ಅಕ್ಕರೆಕೆರೆ ಹಳೆಕೋಟೆ ಶಾಖೆ ಹಮ್ಮಿಕೊಂಡ ಸುನ್ನೀ ಆದರ್ಶ ಸಮ್ಮೇಳನ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಉಳ್ಳಾಲದ ಅಕ್ಕರೆಕೆರೆಯಲ್ಲಿ ಮೌಲವಿಗಳು ಸ್ಟೇಜ್ ಕಟ್ಟಿ ಬಿತ್ತರಿಸಿದ ವಂಚನೆಗಳನ್ನು ಒಂದೊಂದಾಗಿ ಬಯಲಿಗೆಳೆದು ಉಳ್ಳಾಲದ ನಾಗರಿಕರಿಗೆ ಸುನ್ನತ್ ಜಮಾಅತಿನ ನೈಜ ಆಶಯಾದರ್ಶಗಳನ್ನು ಸವಿಸ್ತಾರವಾಗಿ ತೋಕೆ ಉಸ್ತಾದ್ ವಿವರಿಸಿದ್ದಾರೆ.  ಉಳ್ಳಾಲದ ಅಲ್ಲಲ್ಲಿ ನೂತನವಾದಿಗಳು ಸ್ಟೇಜ್ ಕಟ್ಟಿ ತಮ್ಮ ವಿಚಿತ್ರ ನೀಚ ಆಶಯಗಳನ್ನು ಬಿತ್ತರಿಸುತ್ತಿದ್ದರು. ತಮಗೆ ಅರಿವಿಲ್ಲ ಎಂದು ಕೂಡಾ ಅರಿಯದ ಕೆಲವು ಮೌಲವಿಗಳು ಒಟ್ರಾಸಿ ಇಸ್ಲಾಮಿನ ಬಗ್ಗೆ ಮಾತನಾಡುತ್ತಿದ್ದರು. ರಮಳಾನಿಗೆ ಸ್ವಾಗತ ಎಂಬ ಹೆಸರಿಟ್ಟು ಮಾಡಿದ ಸಲಫಿಗಳ ಸಭೆಯಲ್ಲಿ ರಮಳಾನ್ ನಲ್ಲಿ ಮಾಡಬೇಕಾದ ಎಲ್ಲಾ ಒಳಿತುಗಳನ್ನು ಸ್ವಯಂ ರಿಮೂವ್ ಮಾಡಿ ಮಾತನಾಡುತ್ತಿದ್ದರು.  ಇಸ್ಲಾಮಿನ ಬಾಲಪಾಠ ಕೂಡಾ ಅವರಿಗೆ ತಿಳಿದಿಲ್ಲ ಎಂದು ಅವರ ಮಾತಿನಿಂದಲೇ ತಿಳಿಯುತ್ತಿತ್ತು. ಸಲಫಿ ಮೌಲವಿಗಳು ಮುಗ್ಧ ಜನರನ್ನು ಹೇಗಾದರೂ ಮಾಡಿ ವಂಚಿಸಬಹುದು ಎಂದು ಅವರ ವಿವರಣೆಯಿಂದ ತಿಳಿಯುತ್ತದೆ. ಇಸ್ಲಾಮಿನ ಸುಂದರ ಆಶಯಾದರ್ಶಗಳಿಗೆ ಧಕ್ಕೆ ತರುವಂತಹ ಕುಪ್ರಯತ್ನಗಳು ಸಲಫಿ ಮೌಲವಿಗಳು ನಡೆಸಿದರಿಂದ ಇಸ್ಲಾಮಿನ ಎಳೆಯ ಬಾಲಕರ, ಯುವಕರ ಮನಸ್ಸಿನಲ್ಲಿ ಚಂಚಲತೆ ಉಂಟು ಮಾಡುವ ಪ್ರಯತ್ನ ಮಾಡಿದ ನಿಮಿತ್ತ ಇಸ್ಲಾಮಿನ ನೈಜ ಆಶಯಗಳನ್ನು ತಿಳಿಸುವ ಸಲುವಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಮತ್ತು...