ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಾಗು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧೀನದ ಸಾಂತ್ವನ ವಿಭಾಗದ ಆಶ್ರಯದಲ್ಲಿ ಉಳ್ಳಾಲ ಆಸುಪಾಸಿನ ಅರ್ಹ ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ ಸಾಂತ್ವನ ವಿಭಾಗದ ಚೇಯರ್ಮಾನ್ ಸಯ್ಯಿದ್ ಖುಬೈಬ್ ತಂಗಲ್ ರವರ ಅಧ್ಯಕ್ಷತೆಯಲ್ಲಿ ಮಾಸ್ತಿಕಟ್ಟೆ ಆಝಾದ್ ನಗರದ ಇಸ್ಲಾಮಿಕ್ ನೋಲೆಡ್ಜ್ ಸೆಂಟರ್ ಕಛೇರಿಯಲ್ಲಿ ನಡೆಯಿತು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ ಮಾತನಾಡಿ ಬಡ ನಿರ್ಗತಿಕರ, ವಿಧವೆಯರ ಅನಾಥರ ಕಣ್ಣೀರೊರೆಸುವ ಸಾಂತ್ವನ ಕಾರ್ಯಕ್ರಮಗಳು ಅಲ್ಲಾಹನ ಬಳಿ ಅಪಾರ ಪ್ರತಿಫಲ ಲಭಿಸುವ ಕಾರ್ಯಗಳಾಗಿವೆ ಅಂದರು. ಸಾಂತ್ವನ ವಿಭಾಗದ ಕನ್ವೀನರಾದ ಮನ್ಸೂರ್ ಹಳೆಕೋಟೆ ಅತಿಥಿಗಳನ್ನು ಸ್ವಾಗತಿಸಿ, ಎಸ್ಸೆಸ್ಸೆಫ್, ಎಸ್ ವೈ ಎಸ್ ಸಾಂತ್ವನ ವಿಭಾಗದ ಕಾರ್ಯ ಚಟುವಟಿಕೆಯು ಶ್ಲಾಘನೀವಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಯೋಜನೆಗಳನ್ನು ರೂಪಿಸಿ ಬಡ ನಿರ್ಗತಿಕರ, ಅನಾಥರ, ವಿಧವೆಯರ ಕಣ್ಣೀರೊರೆಸುವ ಸಾಂತ್ವನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಬಳಿಕ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್, ದ.ಕ ಜಿಲ್ಲಾ ಎಸ್ ವೈ ಎಸ್ ಕೋಶಾಧಿಕಾರಿ ಬಿ.ಜಿ ಹನೀಫ್ ಹಾಜಿ, ಎಸ್ಸೆಸ್ಸೆಫ್ ರಾಜ್ಯ ಸಮ...
ಇದು SYS ಉಳ್ಳಾಲ ಸೆಂಟರಿನ ಅಧಿಕ್ರತ ಬ್ಲಾಗ್ ಆಗಿದೆ.ಇದರಲ್ಲಿ SYS ಉಳ್ಳಾಲ ಸೆಂಟರ್ ಮತ್ತು ಇದರ ಅಧೀನ ಬ್ರಾಂಚುಗಳ ಕಾರ್ಯಕ್ರಮಗಳು, ವರದಿಗಳು ಹಾಗೂ ಫೋಟೋಸ್ ಗಳು ಲಭ್ಯವಾಗಲಿದೆ