Skip to main content

Posts

Showing posts from February, 2020

ರಜಬ್ ಸಂದೇಶ ಕಾರ್ಯಕ್ರಮ ಮತ್ತು ಕಾರ್ಯಕಾರಿ ಸಮಿತಿ ಸಭೆ

ರಜಬ್ ಸಂದೇಶ ಕಾರ್ಯಕ್ರಮ ಮತ್ತು ಕಾರ್ಯಕಾರಿ ಸಮಿತಿ ಸಭೆ  ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಆಶ್ರಯದಲ್ಲಿ ರಜಬ್ ಸಂದೇಶ ಕಾರ್ಯಕ್ರಮ ಮತ್ತು ಕಾರ್ಯಕಾರಿ ಸಮಿತಿ ಸಭೆ ಅಬೂ ಮಫಾಝ್ ಮದನಿಯವರ ಅಧ್ಯಕ್ಷತೆಯಲ್ಲಿ ಬ್ರಾಂಚ್ ಆಫೀಸಿನಲ್ಲಿ ನಡೆಯಿತು. ಪವಿತ್ರ ರಜಬ್ ತಿಂಗಳು ಏನು ಸಂದೇಶ ನೀಡುತ್ತದೆ ಎಂಬುದರ ಕುರಿತು ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ಅಧ್ಯಕ್ಷರಾದ ಯೂನುಸ್ ಇಮ್ದಾದಿ ತರಗತಿ ನಡೆಸಿದರು. ಬಳಿಕ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾರ್ಚ್ ತಿಂಗಳ 08, ಆದಿತ್ಯವಾರ ರಾತ್ರಿ ಅಜ್ಮೀರ್ ಮೌಲೂದ್ ಕಾರ್ಯಕ್ರಮ ನಡೆಸುವುದೆಂದು ತೀರ್ಮಾನಿಸಲಾಗಿದೆ. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಖಾಲಿದ್ ಅಕ್ಕರೆಕೆರೆ ಸ್ವಾಗತಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ನಾಯಕ ಸಿರಾಜ್ ಅಕ್ಕರೆಕೆರೆ ಹಾಗು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ನಾಯಕರು, ಸದಸ್ಯರು ಭಾಗವಹಿಸಿದ್ದರು.