Skip to main content

Posts

Showing posts from 2021

ಕರ್ನಾಟಕ ರಾಜ್ಯ ಎಸ್ ವೈ ಎಸ್ ನೂತನ ಪದಾಧಿಕಾರಿಗಳಿಗೆ ಸನ್ಮಾನ.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಮಿತಿಯಿಂದ ಕರ್ನಾಟಕ ರಾಜ್ಯ ಎಸ್ ವೈ ಎಸ್ ನೂತನ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭ ಉಳ್ಳಾಲ ಆಝಾದ್ ನಗರದ ಇಸ್ಲಾಮಿಕ್ ನೋಲೇಜ್ ಸೆಂಟರಿನಲ್ಲಿ ಇತ್ತೀಚೆಗೆ ಜರುಗಿತು. ರಾಜ್ಯದ ಎಸ್ ವೈ ಎಸ್ ನೂತನ ಪದಾಧಿಕಾರಿಗಳ ಆಯ್ಕೆಯ ನಂತರದ ಪ್ರಥಮ ಕ್ಯಾಬಿನೆಟ್ ಮೀಟ್ ಉಳ್ಳಾಲದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ನಿಮಿತ್ತ ಉಳ್ಳಾಲಕ್ಕೆ ಆಗಮಿಸಿದ ರಾಜ್ಯ ನಾಯಕರು ಉಳ್ಳಾಲ ದರ್ಗಾ ಝಿಯಾರತ್ ನಡೆಸಿ, ಉಳ್ಳಾಲ ಆಝಾದ್ ನಗರದ ಇಸ್ಲಾಮಿಕ್ ನೋಲೇಜ್ ಸೆಂಟರಿನಲ್ಲಿ ಪ್ರಥಮ ಕ್ಯಾಬಿನೆಟ್ ಮೀಟ್ ನಡೆಸಿದರು. ಪ್ರಸ್ತುತ ಸಭೆಯ ಆರಂಭದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಮಿತಿ ವತಿಯಿಂದ ರಾಜ್ಯ ಎಸ್ ವೈ ಎಸ್ ನೂತನ ಪದಾಧಿಕಾರಿಗಳಾದ  ರಾಜ್ಯಾಧ್ಯಕ್ಷ ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಲ್ ಸಅದಿ ಕೊಳಕೇರಿ, ಉಪಾಧ್ಯಕ್ಷ ಸಯ್ಯಿದ್ ಜಾಫರ್ ಸಖಾಫ್ ತಂಗಲ್ ಕೋಟೇಶ್ವರ, ಕೋಶಾಧಿಕಾರಿ ಅಬ್ದುಲ್ ಹಕೀಂ ಕೊಡ್ಲಿಪೇಟೆ, ಸಂಘಟನಾ ಕಾರ್ಯದರ್ಶಿ ಜಿ.ಎಂ ಕಾಮಿಲ್ ಸಖಾಫಿ, ದಅವಾ ಕಾರ್ಯದರ್ಶಿ ಕೆ.ಕೆ.ಎಂ ಕಾಮಿಲ್ ಸಖಾಫಿ, ರಾಜ್ಯ ನಿಕಟ ಪೂರ್ವ ಅಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಇಸಾಬಃ ಕಾರ್ಯದರ್ಶಿ ಬಶೀರ್ ಸಅದಿ ಬೆಂಗಳೂರು, ಪಬ್ಲಿಕ್ ರಿಲೇಶನ್ಸ್ ಕಾರ್ಯದರ್ಶಿ ಬಿ.ಜಿ ಹನೀಫ್ ಹಾಜಿ ಉಳ್ಳಾಲ, ನೋರ್ತ್ ಕೌನ್ಸಿಲ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ ಹಾಗು ಸೋಶಿಯ...

ವಿವಾಹ ಫಂಡ್ ಹಸ್ತಾಂತರ

ಓರ್ವ ಉಸ್ತಾದರ ಮಗಳ ವಿವಾಹಕ್ಕೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ವ್ಯಾಪ್ತಿಯಲ್ಲಿ ಸಂಗ್ರಹಿಸಿದ 46,000 ರೂಪಾಯಿಗಳು ಹಸ್ತಾಂತರಿಸಲಾಯಿತು. ಎಸ್ ವೈ ಎಸ್ ಅಳೇಕಲ ಬ್ರಾಂಚ್ 12,500 ರೂಪಾಯಿಗಳು ಮತ್ತು ಎಸ್ ವೈ ಎಸ್ ಮದನಿ ನಗರ ಬ್ರಾಂಚ್ 10,000 ರೂಪಾಯಿಗಳು ಈ ಎರಡು ಬ್ರಾಂಚುಗಳ ನಾಯಕರು ಹಸ್ತಾಂತರಿಸಿದರು.   ಆಝಾದ್ ನಗರ, ಪಟ್ಲ, ಕೋಡಿ ಕೋಟೆಪುರ ಸಹಿತ ಇತರ ಬ್ರಾಂಚುಗಳು ಸಂಗ್ರಹಿಸಿದ 23,500 ರೂಪಾಯಿಗಳು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ರವರ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್, ಸೆಂಟರ್ ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ, ಸೆಂಟರ್ ಸಾಂತ್ವನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ ಹಾಗು ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಉಪಸ್ಥಿತರಿದ್ದರು.   ಒಟ್ಟು ಸೆಂಟರ್ ವ್ಯಾಪ್ತಿಯಲ್ಲಿ 46,000 ರೂಪಾಯಿಗಳು ಸಂಗ್ರಹವಾಗಿತ್ತು.

ರಿಫಾಯೀ ಡೇ ಪ್ರಯುಕ್ತ ರಿಫಾಯೀ ಮೌಲಿದ್ ಮಜ್ಲಿಸ್ ಮತ್ತು ಮಾಸಿಕ ಬಡತನ ವೇತನ ವಿತರಣಾ ಕಾರ್ಯಕ್ರಮ

ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ವತಿಯಿಂದ ರಿಫಾಯೀ ಡೇ ಪ್ರಯುಕ್ತ ರಿಫಾಯೀ ಮೌಲಿದ್ ಮಜ್ಲಿಸ್ ಮತ್ತು ಮಾಸಿಕ ಬಡತನ ವೇತನ ವಿತರಣಾ ಕಾರ್ಯಕ್ರಮ ಮೇಲಂಗಡಿಯ ತಾಜುಲ್ ಉಲಮಾ ಆಡಿಟೋರಿಯಂ ನಲ್ಲಿ ನಡೆಯಿತು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ ಸಭೆಯ ನೇತ್ರತ್ವ ವಹಿಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್, ಮೇಲಂಗಡಿ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಖಲೀಲ್, ಬ್ರಾಂಚ್ ಕೋಶಾಧಿಕಾರಿ ಅಬ್ದುಲ್ ಸಮದ್, ಝೈನುದ್ದೀನಾಕ, ಫಾರೂಖ್ ಯು.ಕೆ, ಅಬ್ದುಲ್ ಸತ್ತಾರ್, ಅಶ್ರಫ್, ಮುಹಮ್ಮದಾಕ, ಮುಹಮ್ಮದ್ ಅಲಿ, ಹಾಗು ಅಬ್ಬಾಸ್ ಹಾಜಿ ಉಪಸ್ಥಿತರಿದ್ದರು. ಮೇಲಂಗಡಿ ಬ್ರಾಂಚ್ ಇಸಾಬಃ ಕಾರ್ಯದರ್ಶಿ ಅಬ್ದುಲ್ ಖಾದರ್ ಜೀಲಾನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಿಸಲಾಯಿತು.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ರಿಫಾಯಿ ಡೇ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ರಿಫಾಯಿ ಡೇ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಸೆಂಟರ್ ಅಧ್ಯಕ್ಷರಾದ ಬಹು ಶಿಹಾಬುದ್ದೀನ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು. ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ ಅಂತ್ಯ ವಿಶ್ರಮಹೊಂದುತ್ತಿರುವ ಉಳ್ಳಾಲ ದರ್ಗಾ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಸಯ್ಯಿದ್ ಮದನಿ ಖ.ಸಿ ಮಖಾಂ ಝಿಯಾರತಿನೊಂದಿಗೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉಳ್ಳಾಲ ದರ್ಗಾ ಮುಖ್ಯ ದ್ವಾರದಿಂದ ಉಳ್ಳಾಲ ಪೇಟೆ ತನಕ ಮತ್ತು ಉಳ್ಳಾಲ ಮುಕ್ಕಚ್ಚೇರಿವರೆಗೆ, ಹಾಗು ಮಂಚಿಲ ಮಸೀದಿ ಪರಿಸರ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸೆಂಟರ್ ನಾಯಕರಾದ ಸಯ್ಯಿದ್ ಜಲಾಲ್ ತಂಗಲ್, ಮುಹಮ್ಮದ್ ಇಸ್ಹಾಖ್, ಬಶೀರ್ ಸಖಾಫಿ ಉಳ್ಳಾಲ, ಎಸ್ ವೈ ಎಸ್ ರಾಜ್ಯ ಸಮಿತಿ ಸದಸ್ಯರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಇಸಾಬಃ ಕಾರ್ಯದರ್ಶಿ ಶರೀಫ್ ಮಂಚಿಲ ಸಹಿತ ಸೆಂಟರ್ ನಾಯಕರು, ಸೆಂಟರ್ ಅಧೀನದ ವಿವಿಧ ಬ್ರಾಂಚುಗಳ ನಾಯಕರು, ಇಸಾಬಃ ಸದಸ್ಯರು ಭಾಗವಹಿಸಿ ಸಾಥ್ ನೀಡಿದರು. ...

ರಿಫಾಯೀ ಡೇ ಪ್ರಯುಕ್ತ ನಡೆಯುವ ಸ್ವಚ್ಛತಾ ಕಾರ್ಯಕ್ರಮ ಇದರ ಪೂರ್ವಭಾವಿ ಸಭೆ.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಡಿಸೆಂಬರ್ 19, ಆದಿತ್ಯವಾರ ಸೆಂಟರ್ ಇಸಾಬಃ ಕಾರ್ಯಕರ್ತರಿಂದ ನಡೆಯುವ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಆಝಾದ್ ನಗರದ ಇಸ್ಲಾಮಿಕ್ ನೋಲೇಜ್ ಸೆಂಟರಿನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸೆಂಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ವಹಿಸಿದರು. ಸೆಂಟರ್ ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿದರು. ಎಸ್ ವೈ ಎಸ್ ರಾಜ್ಯ ಸಮಿತಿ ನಾಯಕರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸಭೆಯಲ್ಲಿ ಸೆಂಟರ್ ಅಧೀನದ ಬ್ರಾಂಚುಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸಹಿತ ಪ್ರತೀ ಬ್ರಾಂಚುಗಳ ಇಸಾಬಃ ಸದಸ್ಯರುಗಳು ಉಪಸ್ಥಿತರಿದ್ದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಕ್ ಸ್ವಾಗತಿಸಿದರು. ಸೆಂಟರ್ ಇಸಾಬಃ ಕಾರ್ಯದರ್ಶಿ ಶರೀಫ್ ಮಂಚಿಲ ಧನ್ಯವಾದಗೈದರು.