Skip to main content

Posts

Showing posts from 2020

ಎಸ್ ವೈ ಎಸ್ ಉಳ್ಳಾಲ ಸೆಂಟರ್ COUNT - 20 ವಾರ್ಷಿಕ ಮಹಾಸಭೆ

ಎಸ್ ವೈ ಎಸ್ ಉಳ್ಳಾಲ ಸೆಂಟರ್ COUNT - 20 ವಾರ್ಷಿಕ ಮಹಾಸಭೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ COUNT - 20 ವಾರ್ಷಿಕ ಮಹಾಸಭೆ ಉಳ್ಳಾಲ ಮೇಲಂಗಡಿಯ ತಾಜುಲ್ ಉಲಮಾ ಸುನ್ನೀ ಸೆಂಟರಿನಲ್ಲಿ  ನಡೆಯಿತು.  ಎಸ್ ವೈ ಎಸ್ ಉಳ್ಳಾಲ ಸೆಂಟರ್ ದಅವಾ ಕಾರ್ಯದರ್ಶಿ ಪಿ ಎಸ್ ಎಂ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿದರು. ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಳಿಕ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ವರದಿ ಹಾಗು ಸೆಂಟರ್ ಕೋಶಾಧಿಕಾರಿ ಅಬ್ದುಸ್ಸಮದ್ ಹಳೆಕೋಟೆ ಲೆಕ್ಕಪತ್ರ ಮಂಡಿಸಿ ಸಭೆಯಲ್ಲಿ ಅಂಗೀಕರಿಸಲಾಯಿತು. ಎಸ್ ವೈ ಎಸ್ ರಾಜ್ಯ ನಾಯಕರು ಮತ್ತು ಸೆಂಟರ್ ಉಪಾಧ್ಯಕ್ಷರಾದ ಬಿ ಜಿ ಹನೀಫ್ ಹಾಜಿ ಉಳ್ಳಾಲ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಎಸ್ ವೈ ಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಲೀಲ್ ಮುಸ್ಲಿಯಾರ್ ಕಾವೂರು ಸಂಘಟನಾ ತರಗತಿ ನಡೆಸಿದರು. ಎಸ್ ವೈ ಎಸ್ ದ.ಕ ಜಿಲ್ಲಾಧ್ಯಕ್ಷರಾದ ಮುಹಮ್ಮದ್ ಅಲಿ ಸಖಾಫಿ ಸುರಿಬೈಲು ಸಂಘಟನಾ ರಂಗದಲ್ಲಿ ಎಸ್ ವೈ ಎಸ್ ನ ಪ್ರಾಮುಖ್ಯತೆ ಎಂಬ ವಿಷಯದಲ್ಲಿ ತರಗತಿ ನಡೆಸಿದರು. ಸೆಂಟರ್ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ ಸ್ವಾಗತಿಸಿದರು. ಸೆಂಟರ್ ಸಮಿತಿ ನಾಯಕರು, ಬ್ರಾಂಚ್ ಕೌನ್ಸಿಲರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.  

ಪ್ರವಾದಿಯ ಹಾದಿಯಲ್ಲಿ ಗೆಲುವಿದೆ ಎಂಬ ಸಂದೇಶದೊಂದಿಗೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಮ್ಮಿಕೊಂಡ ಮೌಲಿದ್ ಮಜ್ಲಿಸ್ ಕಾರ್ಯಕ್ರಮ

  ಪ್ರವಾದಿಯ ಹಾದಿಯಲ್ಲಿ ಗೆಲುವಿದೆ ಎಂಬ ಸಂದೇಶದೊಂದಿಗೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಮ್ಮಿಕೊಂಡ ಮೌಲಿದ್ ಮಜ್ಲಿಸ್ ಕಾರ್ಯಕ್ರಮ ಉಳ್ಳಾಲ ಆಝಾದ್ ನಗರದ ಇಸ್ಲಾಮಿಕ್ ನೋಲೇಜ್ ಸೆಂಟರಿನಲ್ಲಿ ನಡೆಯಿತು. ಸೆಂಟರ್ ಗೌರವಾಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಅಳೇಕಲ ಮಜ್ಲಿಸಿನ ನೇತ್ರತ್ವವನ್ನು ವಹಿಸಿದರು. ಸೆಂಟರ್ ದಅವಾ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ತರಗತಿ ನಡೆಸಿದರು. ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಮತ್ತು ಸೆಂಟರ್ ಮಾಜಿ ಅಧ್ಯಕ್ಷರಾದ ಬಶೀರ್ ಅಹ್ಸನಿ ತೋಡಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಎಸ್ ವೈ ಎಸ್ ರಾಜ್ಯ ನಾಯಕರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ,  ಸೆಂಟರ್ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ, ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಸೆಂಟರ್ ಕೋಶಾಧಿಕಾರಿ ಅಬ್ದುಸ್ಸಮದ್ ಹಳೆಕೋಟೆ, ಸೆಂಟರ್ ಕಾರ್ಯಕ್ರಮ ನಿರ್ವಹಣಾ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಕೋಡಿ ಕೋಟೆಪುರ ಬ್ರಾಂಚ್ ನಾಯಕರಾದ ಶರೀಫ್ ಮದನಿ ಕೋಟೆಪುರ, ಸುಂದರಭಾಗ್ ಬ್ರಾಂಚ್ ನಾಯಕರಾದ ಯೂಸುಫ್ ಮದನಿ, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರು, ಬ್ರಾಂಚ್ ಪದಾಧಿಕಾರಿಗಳು ಭಾಗವಹಿಸಿದರು.  

ಹ್ಯಾಪಿ ಫ್ಯಾಮಿಲಿ ಮಾಹಿತಿ ಕಾರ್ಯಾಗಾರ

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಆಶ್ರಯದಲ್ಲಿ ಹ್ಯಾಪಿ ಫ್ಯಾಮಿಲಿ ಮಾಹಿತಿ ಕಾರ್ಯಕ್ರಮ ಬ್ರಾಂಚ್ ಅಧ್ಯಕ್ಷರಾದ ಅಬೂ ಮಫಾಝ್ ಮದನಿಯವರ ಅಧ್ಯಕ್ಷತೆಯಲ್ಲಿ ಶಬೀರ್ ವಿಲ್ಲಾದಲ್ಲಿ ನಡೆಯಿತು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮೀಡಿಯಾ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿದರು. ಸೆಂಟರ್ ದಅವಾ ಕಾರ್ಯದರ್ಶಿ ಶಿಹಾಬುದ್ದೀನ್ ಅಶ್ರಫಿ ಅಲ್ ಕಾಮಿಲ್ ಸಖಾಫಿ ಉಳ್ಳಾಲ ಹ್ಯಾಪಿ ಫ್ಯಾಮಿಲಿ ( ಅಲ್ ಉಸ್ರತುತ್ವಯ್ಯಿಬಃ ) ವಿಷಯದಲ್ಲಿ ಮಾಹಿತಿ ವಿನಿಮಯ ಮಾಡಿದರು.  ಬಳಿಕ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಪ್ರವಾದಿಯ ಹಾದಿಯಲ್ಲಿ ಗೆಲುವಿದೆ ಎಂಬ ಧ್ಯೇಯ ಸಂದೇಶದೊಂದಿಗೆ ಕರ್ನಾಟಕ ರಾಜ್ಯ ಎಸ್ ವೈ ಎಸ್ ಹೊರಡಿಸಿದ ಸುತ್ತೋಲೆ ಪ್ರಕಾರ ಮುತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ತಿಂಗಳು ರಬೀವುಲ್ ತಿಂಗಳ ಪ್ರಯುಕ್ತ ನವೆಂಬರ್ ಒಂದು ಆದಿತ್ಯವಾರದಂದು ಮೌಲಿದ್ ಮಜ್ಲಿಸ್ ತುಂಬಾ ವಿಜ್ರಂಭಣೆ, ಸಡಗರದಿಂದ ನಡೆಸುವುದೆಂದು ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಾಯಿತು. ಸೆಂಟರ್ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ ಸ್ವಾಗತಿಸಿದರು.  ಸಭೆಯಲ್ಲಿ ಬ್ರಾಂಚ್ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಅಬೂ ಮುಝಯ್ಯಿನ್ ಉಸ್ತಾದ್ ಹಾಗು ಬ್ರಾಂಚ್ ನಾಯಕರು, ಸದ...

ಮಳೆ ಆರ್ಭಟ, ಜಾಗ್ರತೆ ಪಾಲಿಸಿ

ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಇನ್ನೆರಡು ದಿನಗಳು ಮಳೆಯ ಆರ್ಭಟ ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ತಗ್ಗು ಪ್ರದೇಶದ ಮತ್ತು ಅಪಾಯದ ಸ್ಥಿತಿಯಲ್ಲಿರುವ ಪ್ರದೇಶದ ಜನರು ಆದಷ್ಟು ಜಾಗ್ರತೆ  ವಹಿಸಿ. ಅಲ್ಲಾಹನು ನಮ್ಮನ್ನು, ನಮ್ಮ ಕುಟುಂಬ, ಬಂಧು ಮಿತ್ರಾದಿಗಳನ್ನು ಎಲ್ಲಾ ಆಪತ್ತು, ಮುಸೀಬತುಗಳಿಂದ ರಕ್ಷೆ ನೀಡಲಿ. ಆಮೀನ್. ಎಸ್ ವೈ ಎಸ್ ಉಳ್ಳಾಲ ಸೆಂಟರ್  

ಅಲ್ ಉಸ್ರತುತ್ವಯ್ಯಿಬಃ (ಸಂತುಷ್ಟ ಕುಟುಂಬ) ಮಾಹಿತಿ ಕಾರ್ಯಾಗಾರ.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಅಲ್ ಉಸ್ರತುತ್ವಯ್ಯಿಬಃ (ಸಂತುಷ್ಟ ಕುಟುಂಬ) ಮಾಹಿತಿ ಕಾರ್ಯಾಗಾರ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ಉಳ್ಳಾಲ ಮೇಲಂಗಡಿಯ ತಾಜುಲ್ ಉಲಮಾ ಸುನ್ನೀ ಸೆಂಟರಿನಲ್ಲಿ ನಡೆಯಿತು. ಎಸ್ ವೈ ಎಸ್ ರಾಜ್ಯ ನಾಯಕ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೆಂಟರ್ ದಅವಾ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಅಲ್ ಉಸ್ರತುತ್ವಯ್ಯಿಬಃ ಪ್ರತೀ ಮನೆಯಲ್ಲಿ ನಡೆಸುವುದರ ಕುರಿತು ಮಾಹಿತಿ ನೀಡಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ಸ್ವಾಗತಿಸಿದರು. ಪ್ರಸ್ತುತ ಸಭೆಯಲ್ಲಿ ಸೆಂಟರ್ ಪದಾಧಿಕಾರಿಗಳು, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರು, ಸೆಂಟರ್ ಅಧೀನದ ಪ್ರತೀ ಬ್ರಾಂಚಿನ ಪಿ,ಎಸ್,ಟಿ ಉಪಸ್ಥಿತರಿದ್ದರು.  

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಎಸ್ ವೈ ಎಸ್ ಸದಸ್ಯತ್ವದ ಐಡಿ ಕಾರ್ಡ್ ವಿತರಣೆ ಹಾಗು ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸ್

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಎಸ್ ವೈ ಎಸ್ ಸದಸ್ಯತ್ವದ ಐಡಿ ಕಾರ್ಡ್ ವಿತರಣೆ ಹಾಗು ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸ್ ಬ್ರಾಂಚ್ ಅಧ್ಯಕ್ಷರಾದ ಅಬೂ ಮಫಾಝ್ ಮದನಿ ಹಳೆಕೋಟೆಯವರ ನೇತ್ರತ್ವದಲ್ಲಿ ಹಳೆಕೋಟೆಯ ಶಬೀರ್ ಪ್ಯಾಲೇಸಿನಲ್ಲಿ ಜರುಗಿತು. ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ಕಾರ್ಯಕ್ರಮ ಉದ್ಘಾಟಿಸಿದರು. ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಎಸ್ ವೈ ಎಸ್ ಸದಸ್ಯತ್ವ ಐಡಿ ಕಾರ್ಡಿನ ಕುರಿತು ಮಾಹಿತಿ ನೀಡಿದರು. ಸಂಘಟನೆಯ ಹಿರಿಯ ಸದಸ್ಯರುಗಳಾದ ಅಬ್ದುರ್ರಹ್ಮಾನ್ ಅಕ್ಕರೆಕೆರೆ ಹಾಗು ಯೂಸುಫ್ (ಯೂನುಸಾಕ) ಅಕ್ಕರೆಕೆರೆ ಯವರಿಗೆ ಸೆಂಟರ್ ಅಧ್ಯಕ್ಷರು ಐಡಿ ಹಸ್ತಾಂತರಿಸುವ ಮೂಲಕ ಐಡಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  ಸುಂದರಭಾಗ್ ಬದ್ರಿಯಾ ಜುಮಾ ಮಸೀದಿ ಖತೀಬರಾದ ಶರೀಫ್ ಸಅದಿ ಮಂಜೇಶ್ವರ ತರಗತಿ ನಡೆಸಿ ದುವಾ ನಡೆಸಿದರು. ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸೆಂಟರ್ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ, ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಖಾಲಿದ್ ಅಕ್ಕರೆಕೆರೆ ಹಾಗು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚಿನ ಸದಸ್ಯರು ಮತ್ತು ಹಾಜರಿದ್ದರು. ಎಸ್ಸೆಸ್ಸೆಫ್ ಹಳೆಕೋಟೆ ಶಾಖಾ ನಾಯಕರಾದ ಹಮೀದ್ ಹಳೆಕೋಟೆ, ಹನೀಫ್ ಹಳೆಕೋಟೆ ಉಪಸ್ಥಿತರಿದ್ದರು.