ಎಸ್‌ವೈಎಸ್ ತೊಕ್ಕೋಟ್ಟು ಬ್ರಾಂಚ್ ವತಿಯಿಂದ ಬಡ ಕುಟುಂಬದ ನಿರ್ವಹಣೆಗೆ ಚೆಕ್ ವಿತರಣಾ ಕಾರ್ಯಕ್ರಮ ಆದಿತ್ಯವಾರ ತೊಕ್ಕೋಟ್ಟು ತಾಜುಲ್ ಉಲಮಾ ಜುಮಾ ಮಸ್ಜಿದ್‌ನಲ್ಲಿ ನಡೆಯಿತು. ಬ್ರಾಂಚ್ ಎಸ್ ವೈ ಎಸ್ ಉಪಾಧ್ಯಕ್ಷ ಬಶೀರ್ ಪಿಲಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಕೋಶಾಧಿಕಾರಿ ನಿಝಾಮ್ ಷಾ ಕೋಟೆಪುರ ಉದ್ಘಾಟಿಸಿದರು. ಎಸ್ ಎಸ್ ಎಫ್ ಮುಕ್ಕಚೇರಿ ಬ್ರಾಂಚ್ ಮಾಜಿ ಅಧ್ಯಕ್ಷ ಯೂಸುಫ್ ಹನೀಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ರೈಂಬೊ ಕಾರ್ಯದರ್ಶಿ ನಿಝಾಮ್ ಉಳ್ಳಾಲ ಚೆಕ್ ವಿತರಿಸಿದರು. ಅಲ್ತಾಫ್ ಕುಂಪಲ ಸ್ವಾಗತಿಸಿ ವಂದಿಸಿದರು.
ಇದು SYS ಉಳ್ಳಾಲ ಸೆಂಟರಿನ ಅಧಿಕ್ರತ ಬ್ಲಾಗ್ ಆಗಿದೆ.ಇದರಲ್ಲಿ SYS ಉಳ್ಳಾಲ ಸೆಂಟರ್ ಮತ್ತು ಇದರ ಅಧೀನ ಬ್ರಾಂಚುಗಳ ಕಾರ್ಯಕ್ರಮಗಳು, ವರದಿಗಳು ಹಾಗೂ ಫೋಟೋಸ್ ಗಳು ಲಭ್ಯವಾಗಲಿದೆ