Skip to main content

Posts

Showing posts from June, 2022

ಜುಲೈ 10 ಆದಿತ್ಯವಾರ ಈದುಲ್ ಅದ್'ಹಾ. ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಕೂರತ್ ತಂಗಲ್ ಘೋಷಣೆ.

ಇಂದು ( ಗುರುವಾರ ಅಸ್ತ ಶುಕ್ರವಾರ )  ರಾತ್ರಿ  ದ್ಸುಲ್ ಹಿಜ್ಜಃ   ತಿಂಗಳ  ಚಂದ್ರ  ದರ್ಶನವಾದ ಖಚಿತ ಮಾಹಿತಿಯ  ಹಿನ್ನೆಲೆಯಲ್ಲಿ  ಜುಲೈ 01  ಶುಕ್ರವಾರ  ದ್ಸುಲ್ ಹಿಜ್ಜ  ತಿಂಗಳ ಚಾಂದ್ ಒಂದು ಆಗಿದೆ,  ಅದರಂತೆ  ಜುಲೈ 09  ಶನಿವಾರ   ಅರಫಾ  ದಿನ  ಮತ್ತು ಜುಲೈ 10,  ಆದಿತ್ಯವಾರ  ಈದುಲ್ ಅದ್'ಹಾ  ( ಬೆಲಿಯೆ ಪೆರ್ನಾಲ್ )  ಆಚರಿಸಲಾಗುತ್ತದೆ  ಎಂದು  ಗೌರವಾನ್ವಿತ  ದ.ಕ  ಜಿಲ್ಲೆಯ ಉಳ್ಳಾಲ ಹಾಗು ನೂರಾರು ಮೊಹಲ್ಲಾಗಳ ಸಂಯುಕ್ತ  ಜಮಾಅತ್  ಖಾಝಿ  ಖುರ್ರತುಸ್ಸಾದಾತ್  ಅಸ್ಸಯ್ಯಿದ್  ಫಝಲ್  ಕೋಯಮ್ಮ  ಮದನಿ  ಅಲ್  ಬುಖಾರಿ  ಕೂರತ್  ತಂಗಳ್  ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. The  Honourable  Khazi of Ullala  Qurrathussadath  Seyyid  Fazal  Koyamma  Thangal  Al Bukhari  has  announced  that  July 01-2022  is  first  of  Dul hijja  and The Day of Arafa July 09,  Eid ul ad'ha  will be  celebrated  ...

ತೀವ್ರವಾದ ಮಳೆಗಾಳಿ, ಜಾಗ್ರತೆ ಪಾಲಿಸಿ.

ರಾಜ್ಯದಾದ್ಯಂತ ಹಲವು ಜಿಲ್ಲೆಗಳಲ್ಲಿ ಮಳೆಗಾಳಿಯ ಆರ್ಭಟ ತೀವ್ರವಾಗಿದ್ದು, ಅಪಾಯದ ಮುನ್ಸೂಚನೆ ಇರುವ ಮನೆ, ತಗ್ಗು  ಪ್ರದೇಶದ  ಮತ್ತು  ಕಡಲು  ಕಿನಾರೆ  ನಿವಾಸಿಗಳು  ಆದಷ್ಟು ಜಾಗ್ರತೆ ವಹಿಸಬೇಕು  ಎಂದು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸೂಚಿಸುತ್ತಿದೆ. ಅಲ್ಲಾಹನು ನಮ್ಮನ್ನು, ನಮ್ಮ ಕುಟುಂಬ, ಬಂಧು ಮಿತ್ರಾದಿಗಳನ್ನು ಎಲ್ಲಾ ಆಪತ್ತು, ಮುಸೀಬತುಗಳಿಂದ ರಕ್ಷೆ ನೀಡಲಿ. ಆಮೀನ್. ಎಸ್ ವೈ ಎಸ್ ಉಳ್ಳಾಲ ಸೆಂಟರ್

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಾಗು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಮಂಜನಾಡಿ ಅಲ್ ಮದೀನಕ್ಕೆ ಸಂದಲ್ ಮೆರವಣಿಗೆ

ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ (ನ.ಮ) 3 ನೇ ಉರೂಸ್ ಮುಬಾರಕ್ ಪ್ರಯುಕ್ತ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಾಗು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಮಂಜನಾಡಿ ಅಲ್ ಮದೀನಕ್ಕೆ ಅಕ್ಕಿ, ಸಕ್ಕರೆ, ತೆಂಗಿನ ಕಾಯಿ, ತರಕಾರಿಗಳು ಹಾಗು ಇನ್ನಿತರ ಸಂದಲ್ ಮೂಲಕ  ಎರಡು ಟೆಂಪೋಗಳಲ್ಲಿ ಸಾಗಿಸಲಾಯಿತು. ಈ ಸಂದರ್ಭದಲ್ಲಿ ಉಳ್ಳಾಲ ಎಸ್ ವೈ ಎಸ್ ಹಾಗು ಎಸ್ಸೆಸ್ಸೆಫ್ ನಾಯಕರುಗಳು ಉಪಸ್ಥಿತರಿದ್ದರು.

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸಸಿ ವಿತರಣಾ ಕಾರ್ಯಕ್ರಮ

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸಸಿ ವಿತರಣಾ ಕಾರ್ಯಕ್ರಮ ಸುನ್ನೀ ಯುವಜನ ಸಂಘ ಅಳೇಕಲ ಬ್ರಾಂಚ್ ಉಳ್ಳಾಲ ಇದರ ಪ್ರಯುಕ್ತ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸಸಿ ವಿತರಣಾ ಕಾರ್ಯಕ್ರಮವು ಅಳೇಕಲ ಜುಮಾ ಮಸೀದಿಯ ವಠಾರದಲ್ಲಿ ಯು ಎಸ್ ಹಂಝ ಹಾಜಿ ಯವರ ಅಧ್ಯಕ್ಷತೆಯಲ್ಲಿ ಜರುಗಿತು. ಇಬ್ರಾಹೀಮ್ ಸಖಾಫಿ ಸೇರ್ಕಳ ಉಸ್ತಾದರು ದುಆ ಮೂಲಕ ಚಾಲನೆ ನೀಡಿದರು. ಸ್ಥಳೀಯ ಕೌನ್ಸಿಲರುಗಳಾದ ಯು ಎ ಇಸ್ಮಾಯಿಲ್, ಅಸ್ಗರ್ ಅಲಿ, ಬ್ರಾಂಚ್ ಅಧ್ಯಕ್ಷರಾದ ಮುಹಮ್ಮದ್ ರಿಯಾಝ್, ಕೋಶಾಧಿಕಾರಿ ಅಬ್ದುಲ್ ಲತೀಫ್, SYS ಅಳೇಕಲ ಬ್ರಾಂಚ್ ಉಸ್ತುವಾರಿಯಾದ ಮನ್ಸೂರ್ ಹಳೇಕೋಟೆ, ಖ್ಯಾತ ಪತ್ರಕರ್ತರಾದ B S ಇಸ್ಮಾಯೀಲ್ ಹಾಗೂ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಂಬೂಟನ್, ಪುನರ್ ಪುಲಿ, ನೇರಳೆ, ಸಪೋಟ, ಮಾವಿನಗಿಡ ಮುಂತಾದ ವಿವಿಧ ತಳಿಯ ಸಸಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಅನ್ಸಾರ್ ಅಳೇಕಲ ಸ್ವಾಗತಿಸಿ, ಧನ್ಯವಾದ ಗೈದರು. 3 ಸ್ವಲಾತ್ ನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.