ಎಸ್ಸೆಸ್ಸೆಫ್ ಹಾಗು ಎಸ್ ವೈ ಎಸ್ ಪಟ್ಲ ಇದರ ಜಂಟಿ ಆಶ್ರಯದಲ್ಲಿ ಪಟ್ಲದ ಸರಕಾರೀ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಳೆಗೊಂದು ನೆರಳು ಎಂಬ ಶೀರ್ಷಿಕೆಯಲ್ಲಿ ಸಸಿ ವಿತರಣಾ ಕಾರ್ಯಕ್ರಮ ಹಾಗು ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಪಟ್ಲ ಶಾಖಾಧ್ಯಕ್ಷರಾದ ನಝೀರ್ ಪಟ್ಲ ವಹಿಸಿದರು. ತಖ್ವಾ ಜುಮಾ ಮಸೀದಿ ಮುದರ್ರಿಸರಾದ ಇಝ್ಝುದ್ದೀನ್ ಅಹ್ಸನಿ ದುವಾ ನೆರವೇರಿಸಿದರು. ಉಳ್ಳಾಲ ನಗರ ಸಭಾಧ್ಯಕ್ಷರಾದ ಬಾಝಿಲ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು. ಮಂಗಳೂರು ಉಪ ವಲಯ ಅರಣ್ಯಾಧಿಕಾರಿ ರವಿಕುಮಾರ್ ಮಾತನಾಡಿ ಪರಿಸರ ಸಂರಕ್ಷಣೆಗೆ ಗಿಡ ನೆಡುವುದು ಅನಿವಾರ್ಯ ಎಂದು ತಿಳಿಸಿದರು. ಜೆ. ಸಿ. ಐ. ಮಂಗಳೂರು ಸಾಮ್ರಾಟ್ ಇದರ ಅಧ್ಯಕ್ಷೆ ಅಶ್ವಿನಿ ಐತಾಳ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸ್ವಚ್ಛತೆ ಹಾಗು ಪರಿಸರ ಸಂರಕ್ಷಣೆಯನ್ನೇ ತನ್ನ ದಿನ ನಿತ್ಯದ ಕಾಯಕವಾಗಿಸಿರುವ ಖ್ಯಾತ ಪರಿಸರ ಪ್ರೇಮಿ ಅಬ್ದುಲ್ ರಹ್ಮಾನ್ ಪಟ್ಲ ಹಾಗು ಸಂಜೀವ ಭಂಡಾರಿ ತೋಡುದಳ ಮತ್ತು ಮಂಗಳೂರು ಉಪವಲಯ ಅರಣ್ಯಾಧಿಕಾರಿ ರವಿಕುಮಾರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉಳ್ಳಾಲ ಕಾಂಗ್ರೆಸ್ ಮುಖಂಡ ಉಸ್ಮಾನ್ ಕಲ್ಲಾಪು, ಬಿಜೆಪಿ ಮುಖಂಡ ಚಂದ್ರಹಾಸ್ ಪಂಡಿತ್ ಹೌಸ್ ಹಾಗು ದ.ಕ ಜಿಲ್ಲಾ ಟಿಪ್ಪು ಸುಲ್ತಾನ್ ಅಭಿಮಾನಿ ಬಳಗದ ಅಧ್ಯಕ್ಷರಾಗಿರು...