Skip to main content

Posts

Showing posts from January, 2022

ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಸಂಘಟನಾ ತರಬೇತಿ ಶಿಬಿರ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಮಿತಿ ಹಮ್ಮಿಕೊಂಡ ಎಸ್ ವೈ ಎಸ್ ಕ್ಲಾಸ್ ರೂಂ ಸಂಘಟನಾ ತರಬೇತಿ ಶಿಬಿರ,  ಸಂಘಟನಾ ವ್ಯವಸ್ಥೆಗಳ ಸಮಗ್ರ ಪರಿಚಯ ಕಾರ್ಯಕ್ರಮ ಮೇಲಂಗಡಿಯ ತಾಜುಲ್ ಉಲಮಾ ಆಡಿಟೋರಿಯಂ ನಲ್ಲಿ ನಡೆಯಿತು. ಸೆಂಟರ್ ಅಧ್ಯಕ್ಷರಾದ ಪಿ ಎಸ್ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಸ್ವಾಗತ ಭಾಷಣ ಮಾಡಿದರು.  ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಇದರ ಸಂಘಟನಾ ಕಾರ್ಯದರ್ಶಿ ಜಿ.ಎಂ ಕಾಮಿಲ್ ಸಖಾಫಿ ಸಂಘಟನಾ ತರಗತಿ ನಡೆಸಿದರು.   ಸಂಘಟನೆಯ ಕಾರ್ಯಕರ್ತರಿಗಿರಬೇಕಾದ ಸ್ವಭಾವಗುಣಗಳು, ಜವಾಬ್ದಾರಿಗಳು, ಶಿಸ್ತು, ಕಾರ್ಯಕರ್ತರ ಮತ್ತು ನಾಯಕರ ಪರಸ್ಪರ ಸಂಬಂಧ, ಪ್ರಬೋಧನೆಯ ಶೈಲಿ ಹಾಗೂ ಮುಂದಿನ ಯೋಜನೆ ಇವುಗಳ ಬಗ್ಗೆ ವಿವರಿಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ರಾಜ್ಯ ಎಸ್ ವೈ ಎಸ್ ಪಬ್ಲಿಕ್ ರಿಲೇಶನ್ಸ್ ಕಾರ್ಯದರ್ಶಿ ಬಿ.ಜಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್, ಸೆಂಟರ್ ಸಂಘಟನಾ ಕಾರ್ಯದರ್ಶಿ ಫಾರೂಖ್ ಅಬ್ಬಾಸ್ ಹಾಜಿ ಉಳ್ಳಾಲ, ಕೆ.ಸಿ.ಎಫ್ ಸೌದಿ ಅರೇಬಿಯ ನಾಯಕ ಅಬ್ದುಲ್ ಹಮೀದ್ ಹಾಜಿ ಉಳ್ಳಾಲ, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯ ಸಯ್ಯಿದ್ ಝಿಯಾದ್ ತಂಗಲ್, ಸೆಂಟರ್ ದಅವಾ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಹಳೆಕೋಟೆ, ಸಾಂತ್ವನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ಸೋಶಿಯಲ್ ಕಾರ್ಯದರ್ಶಿ ಇಲ್ಯಾಸ್ ಕೈಕೋ,...

73 ನೇ ಗಣರಾಜ್ಯೋತ್ಸವದ ಪ್ರಯುಕ್ತ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ವಿವಿಧ ಬ್ರಾಂಚುಗಳಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಅಳೇಕಲ, ಮೇಲಂಗಡಿ, ಆಝಾದ್ ನಗರ, ಮದನಿ ನಗರ, ತೊಕ್ಕೋಟು, ಮಂಚಿಲ, ಮುಕ್ಕಚೇರಿ, ಮಾರ್ಗತಲೆ, ಸುಂದರಬಾಗ್ ಹಾಗು ಕೋಡಿ ಕೋಟೆಪುರ ಬ್ರಾಂಚುಗಳಲ್ಲಿ ಭಾರತದ 73 ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಮತ್ತು ಸಂದೇಶ ಭಾಷಣಗಳು ನಡೆಯಿತು. ಸಂವಿಧಾನದ ಸುಂದರ ಮೌಲ್ಯಗಳ ವಿರುದ್ಧವಾಗಿ ದೇಶದಲ್ಲಿ ನಡೆಯುವಂತಹ ಘಟನೆಗಳ ವಿರುದ್ಧ ಜಾತಿ-ಮತ, ಧರ್ಮ, ವರ್ಣ ಭಾಷೆ ಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯನು ಹೋರಾಟ ಮಾಡಬೇಕು. ಸಾಂವಿಧಾನಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯ ನಡೆಯಬೇಕು ಎಂದು ಕಾರ್ಯಕ್ರಮದಲ್ಲಿ ಸಂದೇಶ ನೀಡಲಾಯಿತು. ಸೆಂಟರ್ ನಾಯಕರುಗಳು, ಆಯಾ ಬ್ರಾಂಚುಗಳ ನಾಯಕರುಗಳು, ಸದಸ್ಯರುಗಳು, ಊರ ವಿದ್ವಾಂಸರು, ಸಹೋದರರು, ವಿದ್ಯಾರ್ಥಿಗಳು, ಎಸ್ಸೆಸ್ಸೆಫ್, ರೈಂಬೋ ಕಾರ್ಯಕರ್ತರು ಭಾಗವಹಿಸಿದರು.

ಸಯ್ಯಿದ್ ಮದನಿ ದರ್ಗಾ ರಸ್ತೆ ಎಂದು ಹೆಸರಿಡಲು ಉಳ್ಳಾಲ ಎಸ್ ವೈ ಎಸ್ ನಾಯಕರ ನಿಯೋಗ ಮನವಿ.

ಇತಿಹಾಸ ಪ್ರಸಿದ್ಧ ಸಯ್ಯಿದ್ ಮದನಿ ದರ್ಗಾ ಹೆಸರನ್ನು ಓವರ್ ಬ್ರಿಡ್ಜ್ ನಿಂದ ಉಳ್ಳಾಲ ತನಕದ ರಸ್ತೆಗೆ ನಾಮಕರಣ ಮಾಡಲು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ನೇತ್ರತ್ವದ ನಾಯಕರ ತಂಡ ಉಳ್ಳಾಲ ನಗರ ಸಭೆ ಅಧ್ಯಕ್ಷರಾದ ಚಿತ್ರಕಲಾ ರವರ ಮೂಲಕ ಉಳ್ಳಾಲ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿತು. ಉಳ್ಳಾಲದ ಸಯ್ಯಿದ್ ಮದನಿ ದರ್ಗಾ ದಕ್ಷಿಣ ಭಾರತದ ಅಜ್ಮೀರ್ ಎಂಬ ಖ್ಯಾತಿಯನ್ನು ಪಡೆದಿರುತ್ತದೆ. ಸದ್ರಿ ದರ್ಗಾಕ್ಕೆ ಜಾತಿ-ಮತ, ಭಾಷೆ, ವರ್ಣ ಭೇದವಿಲ್ಲದೆ ಸಾವಿರಾರು ಭಕ್ತರು ಪ್ರತಿ ದಿನ ಸಂದರ್ಶಿಸುತ್ತಿದ್ದಾರೆ. ಪ್ರತಿ ಐದು ವರ್ಷಗಳಿಗೊಮ್ಮೆ ಬಹಳ ವಿಜ್ರಂಭಣೆ, ಸಡಗರದಿಂದ ಐತಿಹಾಸಿಕ ಉರೂಸ್  ಕಾರ್ಯಕ್ರಮವು ನಡೆಯುತ್ತದೆ. ಆದುದರಿಂದ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಉಳ್ಳಾಲಕ್ಕೆ ಬರುವ ರಸ್ತೆಗೆ ಸೈಯದ್ ಮದನಿ ದರ್ಗಾ ರಸ್ತೆ ಎಂದು ನಾಮಕರಣ ಮಾಡಲು ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ಎಸ್ ವೈ ಎಸ್ ನಿಯೋಗ ಮನವಿ ಸಲ್ಲಿಸಿದೆ. ನಿಯೋಗದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್, ಎಸ್ ವೈ ಎಸ್ ದ.ಕ ಜಿಲ್ಲಾ ನಾಯಕರಾದ ವಿ.ಎ ಸಖಾಫಿ, ಸೆಂಟರ್ ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ, ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಸಾಂತ್ವನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಹಾಜರಿದ್ದರು.

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಆಶ್ರಯದಲ್ಲಿ ಮಹ್ಳರತುಲ್ ಬದ್ರಿಯ್ಯ ಮಜ್ಲಿಸ್ ಮತ್ತು ರಿಫಾಯೀ ಶೈಖ್ ರ.ಅ ಅನುಸ್ಮರಣಾ ಕಾರ್ಯಕ್ರಮ

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಆಶ್ರಯದಲ್ಲಿ ಮಹ್ಳರತುಲ್ ಬದ್ರಿಯ್ಯ ಮಜ್ಲಿಸ್ ಮತ್ತು ರಿಫಾಯೀ ಶೈಖ್ ರ.ಅ ಅನುಸ್ಮರಣಾ ಕಾರ್ಯಕ್ರಮ ಸುಹೈಲ್ ನಿವಾಸದಲ್ಲಿ ಜನವರಿ 02 ರಂದು ನಡೆಯಿತು. ಆರ್ ಕೆ ಮದನಿ ಮಜ್ಲಿಸ್ ನೇತ್ರತ್ವ ವಹಿಸಿದರು.  ಅನುಸ್ಮರಣಾ ಪ್ರಭಾಷಣ ತೋಟ ಮಸೀದಿಯ ಇಮಾಮರಾದ ಯೂನುಸ್ ಇಮ್ದಾದಿ ಅಲ್ ಫುರ್ಖಾನೀ ನಡೆಸಿದರು.  ಸಭೆಯಲ್ಲಿ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಸದಸ್ಯರು ಭಾಗವಹಿಸಿದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಧನ್ಯವಾದಗೈದರು.