Skip to main content

Posts

Showing posts from October, 2020

ಪ್ರವಾದಿಯ ಹಾದಿಯಲ್ಲಿ ಗೆಲುವಿದೆ ಎಂಬ ಸಂದೇಶದೊಂದಿಗೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಮ್ಮಿಕೊಂಡ ಮೌಲಿದ್ ಮಜ್ಲಿಸ್ ಕಾರ್ಯಕ್ರಮ

  ಪ್ರವಾದಿಯ ಹಾದಿಯಲ್ಲಿ ಗೆಲುವಿದೆ ಎಂಬ ಸಂದೇಶದೊಂದಿಗೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಹಮ್ಮಿಕೊಂಡ ಮೌಲಿದ್ ಮಜ್ಲಿಸ್ ಕಾರ್ಯಕ್ರಮ ಉಳ್ಳಾಲ ಆಝಾದ್ ನಗರದ ಇಸ್ಲಾಮಿಕ್ ನೋಲೇಜ್ ಸೆಂಟರಿನಲ್ಲಿ ನಡೆಯಿತು. ಸೆಂಟರ್ ಗೌರವಾಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಅಳೇಕಲ ಮಜ್ಲಿಸಿನ ನೇತ್ರತ್ವವನ್ನು ವಹಿಸಿದರು. ಸೆಂಟರ್ ದಅವಾ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ತರಗತಿ ನಡೆಸಿದರು. ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಮತ್ತು ಸೆಂಟರ್ ಮಾಜಿ ಅಧ್ಯಕ್ಷರಾದ ಬಶೀರ್ ಅಹ್ಸನಿ ತೋಡಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಎಸ್ ವೈ ಎಸ್ ರಾಜ್ಯ ನಾಯಕರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ,  ಸೆಂಟರ್ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ, ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಸೆಂಟರ್ ಕೋಶಾಧಿಕಾರಿ ಅಬ್ದುಸ್ಸಮದ್ ಹಳೆಕೋಟೆ, ಸೆಂಟರ್ ಕಾರ್ಯಕ್ರಮ ನಿರ್ವಹಣಾ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಕೋಡಿ ಕೋಟೆಪುರ ಬ್ರಾಂಚ್ ನಾಯಕರಾದ ಶರೀಫ್ ಮದನಿ ಕೋಟೆಪುರ, ಸುಂದರಭಾಗ್ ಬ್ರಾಂಚ್ ನಾಯಕರಾದ ಯೂಸುಫ್ ಮದನಿ, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರು, ಬ್ರಾಂಚ್ ಪದಾಧಿಕಾರಿಗಳು ಭಾಗವಹಿಸಿದರು.  

ಹ್ಯಾಪಿ ಫ್ಯಾಮಿಲಿ ಮಾಹಿತಿ ಕಾರ್ಯಾಗಾರ

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಆಶ್ರಯದಲ್ಲಿ ಹ್ಯಾಪಿ ಫ್ಯಾಮಿಲಿ ಮಾಹಿತಿ ಕಾರ್ಯಕ್ರಮ ಬ್ರಾಂಚ್ ಅಧ್ಯಕ್ಷರಾದ ಅಬೂ ಮಫಾಝ್ ಮದನಿಯವರ ಅಧ್ಯಕ್ಷತೆಯಲ್ಲಿ ಶಬೀರ್ ವಿಲ್ಲಾದಲ್ಲಿ ನಡೆಯಿತು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮೀಡಿಯಾ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿದರು. ಸೆಂಟರ್ ದಅವಾ ಕಾರ್ಯದರ್ಶಿ ಶಿಹಾಬುದ್ದೀನ್ ಅಶ್ರಫಿ ಅಲ್ ಕಾಮಿಲ್ ಸಖಾಫಿ ಉಳ್ಳಾಲ ಹ್ಯಾಪಿ ಫ್ಯಾಮಿಲಿ ( ಅಲ್ ಉಸ್ರತುತ್ವಯ್ಯಿಬಃ ) ವಿಷಯದಲ್ಲಿ ಮಾಹಿತಿ ವಿನಿಮಯ ಮಾಡಿದರು.  ಬಳಿಕ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಪ್ರವಾದಿಯ ಹಾದಿಯಲ್ಲಿ ಗೆಲುವಿದೆ ಎಂಬ ಧ್ಯೇಯ ಸಂದೇಶದೊಂದಿಗೆ ಕರ್ನಾಟಕ ರಾಜ್ಯ ಎಸ್ ವೈ ಎಸ್ ಹೊರಡಿಸಿದ ಸುತ್ತೋಲೆ ಪ್ರಕಾರ ಮುತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ತಿಂಗಳು ರಬೀವುಲ್ ತಿಂಗಳ ಪ್ರಯುಕ್ತ ನವೆಂಬರ್ ಒಂದು ಆದಿತ್ಯವಾರದಂದು ಮೌಲಿದ್ ಮಜ್ಲಿಸ್ ತುಂಬಾ ವಿಜ್ರಂಭಣೆ, ಸಡಗರದಿಂದ ನಡೆಸುವುದೆಂದು ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಾಯಿತು. ಸೆಂಟರ್ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ ಸ್ವಾಗತಿಸಿದರು.  ಸಭೆಯಲ್ಲಿ ಬ್ರಾಂಚ್ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಅಬೂ ಮುಝಯ್ಯಿನ್ ಉಸ್ತಾದ್ ಹಾಗು ಬ್ರಾಂಚ್ ನಾಯಕರು, ಸದ...