ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಎಸ್ ವೈ ಎಸ್ ಉಳ್ಳಾಲ ಸರ್ಕಲ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ ವೈ ಎಸ್ ಅಳೇಕಲ ಶಾಖೆ ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ವಿತರಣಾ ಕಾರ್ಯಕ್ರಮ ಜಾಮಿಉಲ್ ಅಮೀನ್ ಅಳೇಕಲ ಮಸ್ಜಿದ್ ವಠಾರದಲ್ಲಿ ನಡೆಯಿತು. ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ ಮತ್ತು ಸೈಯದ್ ಮದನಿ ದರ್ಗಾ ಉಳ್ಳಾಲ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ಪಿ.ಎಸ್ ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ದುಆ ದೊಂದಿಗೆ ಚಾಲನೆ ನೀಡಿ ಕಾರ್ಯಕ್ರಮ ಉದ್ಘಾಟಿಸಿದರು. ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯದ್ ಮದನಿ ದರ್ಗಾ ಉಳ್ಳಾಲ ಇದರ ಮಾಜಿ ಅಧ್ಯಕ್ಷರು ಹಾಗೂ ಜಾಮಿಉಲ್ ಅಮೀನ್ ಮಸ್ಜಿದ್ ಅಳೇಕಲ ಇದರ ಅಧ್ಯಕ್ಷರಾದ ಯು.ಎಸ್ ಹಂಝ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಎಸ್.ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಮತ್ತು ಯುಎಸ್ ಹಂಝ ಹಾಜಿ ಕರ್ನಾಟಕ ಮುಸ್ಲಿಂ ಜಮಾಅತ್ ಉಳ್ಳಾಲ ಸರ್ಕಲ್ ಇದರ ಅಧ್ಯಕ್ಷರಾದ ಸಯ್ಯಿದ್ ಜಲಾಲುದ್ದೀನ್ ತಂಗಲ್ ರವರಿಗೆ ಸಸಿ ನೀಡುವ ಮೂಲಕ ಸಸಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ನಜಾತ್ತುಸ್ಸಿಬಿಯಾನ್ ಮದ್ರಸ ಅಳೇಕಲ ಇದರ ಮುಖ್ಯೋಪಾಧ್ಯಾಯರಾದ ಇಬ್ರಾಹಿಂ ಸಖಾಫಿ ಸೆರ್ಕಳ, ಎಸ್ ವೈ ಎಸ್ ಉಳ್ಳಾಲ ಸರ್ಕಲ್ ಇದರ ಕಾರ್ಯಕಾರಿ ಸಮಿತಿ ಸದಸ್ಯರಾದ ನವಾಝ್ ಸಖಾಫಿ ಉಳ್ಳಾಲ, ಝುಬೈರ್ ಉಸ್ತಾದ್ ಅ...
ಇದು SYS ಉಳ್ಳಾಲ ಸೆಂಟರಿನ ಅಧಿಕ್ರತ ಬ್ಲಾಗ್ ಆಗಿದೆ.ಇದರಲ್ಲಿ SYS ಉಳ್ಳಾಲ ಸೆಂಟರ್ ಮತ್ತು ಇದರ ಅಧೀನ ಬ್ರಾಂಚುಗಳ ಕಾರ್ಯಕ್ರಮಗಳು, ವರದಿಗಳು ಹಾಗೂ ಫೋಟೋಸ್ ಗಳು ಲಭ್ಯವಾಗಲಿದೆ