ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಆಶ್ರಯದಲ್ಲಿ ಮುಹ್ಯಿದ್ದೀನ್ ರಾತೀಬ್ ಮಜ್ಲಿಸ್, ತಾಜುಲ್ ಉಲಮಾ ಅನುಸ್ಮರಣೆ, ಅಭಿನಂದನಾ ಸಮಾರಂಭ ಮತ್ತು ಮದುವೆ ಫಂಡ್ ಹಸ್ತಾಂತರ ಕಾರ್ಯಕ್ರಮ
ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಆಶ್ರಯದಲ್ಲಿ ಮುಹ್ಯಿದ್ದೀನ್ ರಾತೀಬ್ ಮಜ್ಲಿಸ್, ತಾಜುಲ್ ಉಲಮಾ ಅನುಸ್ಮರಣೆ, ಅಭಿನಂದನಾ ಸಮಾರಂಭ ಮತ್ತು ಮದುವೆ ಫಂಡ್ ಹಸ್ತಾಂತರ ಕಾರ್ಯಕ್ರಮ ಬ್ರಾಂಚ್ ಅಧ್ಯಕ್ಷರಾದ ಅಬೂಬಕರ್ ಸಿದ್ದೀಕ್ ರವರ ಅಧ್ಯಕ್ಷತೆಯಲ್ಲಿ ಉಳ್ಳಾಲ ಹಳೆಕೋಟೆಯ ಹಂಝ ರೆಸಿಡೆನ್ಸಿಯಲ್ಲಿ ನಡೆಯಿತು.
ಬ್ರಾಂಚಿನ ಉಲಮಾ ಸದಸ್ಯರುಗಳ ನೇತ್ರತ್ವದಲ್ಲಿ ರಾತೀಬ್ ಮಜ್ಲಿಸ್ ನಡೆಯಿತು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಅನುಸ್ಮರಣಾ ಪ್ರಭಾಷಣ ನಡೆಸಿ, ದುಆ ನೆರವೇರಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಓರ್ವ ಬಡ ಸಹೋದರಿಯ ಮದುವೆಗೆ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಸಂಗ್ರಹಿಸಿದ 57,000 ರೂಪಾಯಿಗಳು ಹಸ್ತಾಂತರಿಸಲಾಯಿತು.
ಇತ್ತೀಚೆಗೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಪಿ ಎಸ್ ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಇವರಿಗೆ ಸಭೆಯಲ್ಲಿ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಸ್ಮರಣಿಕೆ ನೀಡಿ ಶುಭಾಶಯ ತಿಳಿಸಿ ಅಭಿನಂದಿಸಲಾಯಿತು.
ಬ್ರಾಂಚ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ನಾಯಕರು, ಸದಸ್ಯರು ಉಪಸ್ಥಿತರಿದ್ದರು.
Comments