Skip to main content

ಕರ್ನಾಟಕ ರಾಜ್ಯ ಎಸ್ ವೈ ಎಸ್ ನೂತನ ಪದಾಧಿಕಾರಿಗಳಿಗೆ ಸನ್ಮಾನ.

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಮಿತಿಯಿಂದ ಕರ್ನಾಟಕ ರಾಜ್ಯ ಎಸ್ ವೈ ಎಸ್ ನೂತನ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭ ಉಳ್ಳಾಲ ಆಝಾದ್ ನಗರದ ಇಸ್ಲಾಮಿಕ್ ನೋಲೇಜ್ ಸೆಂಟರಿನಲ್ಲಿ ಇತ್ತೀಚೆಗೆ ಜರುಗಿತು.

ರಾಜ್ಯದ ಎಸ್ ವೈ ಎಸ್ ನೂತನ ಪದಾಧಿಕಾರಿಗಳ ಆಯ್ಕೆಯ ನಂತರದ ಪ್ರಥಮ ಕ್ಯಾಬಿನೆಟ್ ಮೀಟ್ ಉಳ್ಳಾಲದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ನಿಮಿತ್ತ ಉಳ್ಳಾಲಕ್ಕೆ ಆಗಮಿಸಿದ ರಾಜ್ಯ ನಾಯಕರು ಉಳ್ಳಾಲ ದರ್ಗಾ ಝಿಯಾರತ್ ನಡೆಸಿ, ಉಳ್ಳಾಲ ಆಝಾದ್ ನಗರದ ಇಸ್ಲಾಮಿಕ್ ನೋಲೇಜ್ ಸೆಂಟರಿನಲ್ಲಿ ಪ್ರಥಮ ಕ್ಯಾಬಿನೆಟ್ ಮೀಟ್ ನಡೆಸಿದರು.

ಪ್ರಸ್ತುತ ಸಭೆಯ ಆರಂಭದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಮಿತಿ ವತಿಯಿಂದ ರಾಜ್ಯ ಎಸ್ ವೈ ಎಸ್ ನೂತನ ಪದಾಧಿಕಾರಿಗಳಾದ  ರಾಜ್ಯಾಧ್ಯಕ್ಷ ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಲ್ ಸಅದಿ ಕೊಳಕೇರಿ, ಉಪಾಧ್ಯಕ್ಷ ಸಯ್ಯಿದ್ ಜಾಫರ್ ಸಖಾಫ್ ತಂಗಲ್ ಕೋಟೇಶ್ವರ, ಕೋಶಾಧಿಕಾರಿ ಅಬ್ದುಲ್ ಹಕೀಂ ಕೊಡ್ಲಿಪೇಟೆ, ಸಂಘಟನಾ ಕಾರ್ಯದರ್ಶಿ ಜಿ.ಎಂ ಕಾಮಿಲ್ ಸಖಾಫಿ, ದಅವಾ ಕಾರ್ಯದರ್ಶಿ ಕೆ.ಕೆ.ಎಂ ಕಾಮಿಲ್ ಸಖಾಫಿ, ರಾಜ್ಯ ನಿಕಟ ಪೂರ್ವ ಅಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಇಸಾಬಃ ಕಾರ್ಯದರ್ಶಿ ಬಶೀರ್ ಸಅದಿ ಬೆಂಗಳೂರು, ಪಬ್ಲಿಕ್ ರಿಲೇಶನ್ಸ್ ಕಾರ್ಯದರ್ಶಿ ಬಿ.ಜಿ ಹನೀಫ್ ಹಾಜಿ ಉಳ್ಳಾಲ, ನೋರ್ತ್ ಕೌನ್ಸಿಲ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ ಹಾಗು ಸೋಶಿಯಲ್ ಕಾರ್ಯದರ್ಶಿ ಹಂಝ ನೆಲ್ಲಿಹುದಿಕೇರಿ ಇವರುಗಳನ್ನು ಸನ್ಮಾನಿಸಿ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಸೆಂಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಅಭಿನಂದನಾ ಮಾತುಗಳನ್ನಾಡಿದರು. ಡಾ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮತ್ತು  ಹಫೀಲ್ ಸಅದಿ ಕೊಳಕೇರಿ ಸನ್ಮಾನ ಸ್ವೀಕರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಕ್ಷಿಣ ಭಾರತದ ಅಜ್ಮೀರ್ ಎಂದೇ ಹೆಸರುವಾಸಿಯಾಗಿರುವ ಉಳ್ಳಾಲದ ಸಯ್ಯಿದ್ ಮದನಿ  ದರ್ಗಾ ಝಿಯಾರತ್ ನಡೆಸಿ, ರಾಜ್ಯ ಎಸ್ ವೈ ಎಸ್ ನ ನೂತನ ಪದಾಧಿಕಾರಿಗಳ ಪ್ರಥಮ ಸಭೆ ಉಳ್ಳಾಲದಲ್ಲಿ ನಡೆಯುತ್ತಿರುವುದು ತುಂಬಾ ಸಂತಸವಿದೆ ಎಂದು ಸೆಂಟರ್ ಗೌರವಾಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಲ್ ತಿಳಿಸಿದರು. ಸಯ್ಯಿದ್ ಮದನಿ ತಂಗಲ್ ರವರ ಮಹಿಮೆಯಿಂದ ತಮ್ಮೆಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಒಳಿತಾಗಲಿ ಎಂದು ಅವರು ಪ್ರಾರ್ಥಿಸಿದರು.
ಪ್ರಸ್ತುತ ಅಭಿನಂದನಾ ಸಮಾರಂಭದಲ್ಲಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್, ಸೆಂಟರ್ ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ, ಸಂಘಟನಾ ಕಾರ್ಯದರ್ಶಿ ಫಾರೂಖ್ ಅಬ್ಬಾಸ್ ಹಾಜಿ ಕೋಟೆಪುರ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಯುವ ನಾಯಕರಾದ ಸಯ್ಯಿದ್ ಖುಬೈಬ್ ತಂಗಲ್, ಸಾಂತ್ವನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ದಅವಾ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ, ಇಸಾಬಃ ಕಾರ್ಯದರ್ಶಿ ಶರೀಫ್ ಮಂಚಿಲ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಸ್ಸಮದ್ ಮದನಿ ನಗರ ಉಪಸ್ಥಿತರಿದ್ದರು.


Comments

Popular posts from this blog

ಎಸ್ ವೈ ಎಸ್ ಉಳ್ಳಾಲ ಮಂಚಿಲ ಸರ್ಕಲ್ ರಚನೆ

ಎಸ್ ವೈ ಎಸ್ ಉಳ್ಳಾಲ ಝೋನ್ ನೇತ್ರತ್ವದಲ್ಲಿ ಎಸ್ ವೈ ಎಸ್ ಮಂಚಿಲ ಸರ್ಕಲ್ ರಚನಾ ಸಭೆ ಉಳ್ಳಾಲ ಮಂಚಿಲದ ಮಂಬವುಲ್ ಉಲೂಂ ಮದ್ರಸ ಸಭಾ ಭವನದಲ್ಲಿ ನಡೆಯಿತು. ಮಂಚಿಲದ ಅಲ್ ಮಸ್ಜಿದುಲ್ ಮುನವ್ವರ್ ಖತೀಬರಾದ ಮುಹಮ್ಮದ್ ಮುದ್ರಿಕ ಮದನಿ ದುಆ ನೆರವೇರಿಸಿದರು. ಸರ್ಕಲ್ ರಚನೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಝೋನ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿ ಸಮಾಜದ, ಸಮುದಾಯದ ಸಬಲೀಕರಣ, ಸಾಂಘಿಕ ಶಕ್ತಿ ಮತ್ತು ನಾಯಕರುಗಳ ಸೃಷ್ಟಿಗೆ ಉಳ್ಳಾಲ ಝೋನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಶಾಖೆಗಳನ್ನು ಸೇರಿಸಿ ಸರ್ಕಲ್ ಗಳನ್ನು ರಚಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.  ಪ್ರಸ್ತುತ ಸಭೆಯಲ್ಲಿ ಅಕ್ಕರೆಕೆರೆ, ಹಳೆಕೋಟೆ, ಮಂಚಿಲ ಮತ್ತು ಮಾರ್ಗತಲೆ ಶಾಖೆಗಳನ್ನು ಸೇರಿಸಿ ಮಂಚಿಲ ಸರ್ಕಲನ್ನು ರಚಿಸಿ ನೂತನ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಶಮೀರ್ ಸಖಾಫಿ ಅಕ್ಕರೆಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಮಾರ್ಗತಲೆ, ಕೋಶಾಧಿಕಾರಿಯಾಗಿ ಇರ್ಫಾನ್ ಮಂಚಿಲ, ಉಪಾಧ್ಯಕ್ಷರಾಗಿ ಮುಹಮ್ಮದ್ ಮದನಿ ಹಳೆಕೋಟೆ, ದಅವಾ ಕಾರ್ಯದರ್ಶಿಯಾಗಿ ಆರ್ ಕೆ ಮದನಿ ಅಕ್ಕರೆಕೆರೆ, ಇಸಾಬಃ ಕಾರ್ಯದರ್ಶಿಯಾಗಿ ಸಯೀದ್ ಮಂಚಿಲ, ಸಂಘಟನಾ ಕಾರ್ಯದರ್ಶಿಯಾಗಿ ಹಮೀದ್ ಹಳೆಕೋಟೆ  ಮತ್ತು ಮಾಧ್ಯಮ ವಕ್ತಾರರಾಗಿ ನವಾಝ್ ಸಖಾಫಿ ಉಳ್ಳಾಲ ಇವರನ್ನು ಆಯ್ಕೆ ಮಾಡಲಾಯಿತು. ...

ಕರ್ನಾಟಕ ಮುಸ್ಲಿಂ ಜಮಾಅತ್ ಕೆ ಎಂ ಜೆ ಮತ್ತು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ಆಶ್ರಯದಲ್ಲಿ ಗ್ರ್ಯಾಂಡ್ ಮೌಲಿದ್ ಮಜ್ಲಿಸ್

ಕರ್ನಾಟಕ ಮುಸ್ಲಿಂ ಜಮಾಅತ್ ಕೆ ಎಂ ಜೆ ಮತ್ತು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ಆಶ್ರಯದಲ್ಲಿ ಗ್ರ್ಯಾಂಡ್ ಮೌಲಿದ್ ಮಜ್ಲಿಸ್ ಉಳ್ಳಾಲದ ಅಕ್ಕರೆಕೆರೆಯ ಸಂಘಟನಾ ಕಛೇರಿ ಖುರ್ರತುಸ್ಸಾದಾತ್ ಸುನ್ನೀ ಸೆಂಟರಿನಲ್ಲಿ ನಡೆಯಿತು. ಈ ಸಭೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಮೌಲಿದ್ ಮಜ್ಲಿಸಿನ ನೇತ್ರತ್ವವನ್ನು ಅಬೂ ಮಫಾಝ್ ಮದನಿ ವಹಿಸಿದರು. ಎಸ್ ವೈ ಎಸ್ ಶಾಖಾಧ್ಯಕ್ಷರಾದ ಅಶ್ರಫ್ ಝುಹ್ರಿ ಮಾತನಾಡಿ ವಾರಕ್ಕೊಮ್ಮೆ ಶುಕ್ರವಾರ ಸುಬಹ್ ನಮಾಝ್ ಬಳಿಕದ ಮಜ್ಲಿಸ್, ಮಾಸಿಕ ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸ್ ಹಾಗು ಶಾಖೆಯ ಆಶ್ರಯದಲ್ಲಿ ನಡೆಯುವ ಇತರ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ರಬೇಕೆಂದು ತಿಳಿಸಿದರು. ನವಾಝ್ ಸಖಾಫಿ ಉಳ್ಳಾಲ ದುಆ ನೆರವೇರಿಸಿದರು. ಎಸ್ ವೈ ಎಸ್ ಶಾಖಾ ಕೋಶಾಧಿಕಾರಿ ಆರ್ ಕೆ ಮದನಿ  ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಕೆ ಎಂ ಜೆ ಶಾಖಾಧ್ಯಕ್ಷರಾದ ಹಸನ್ ಹಾಜಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಪಟೇಲ್ ಕಂಪೌಂಡ್ ಮತ್ತು ಶಾಖಾ ನಾಯಕರು, ಸದಸ್ಯರು, ಹಿತೈಷಿಗಳು ಭಾಗವಹಿಸಿದರು.

ಕೂರತ್ ತಂಙಳ್ ಪ್ರಥಮ ಉರೂಸ್ ಪ್ರಚಾರ ಸಭೆ ಹಾಗು ಅನುಸ್ಮರಣಾ ಕಾರ್ಯಕ್ರಮ

ಉಳ್ಳಾಲ : ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ವತಿಯಿಂದ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್ ರವರ ಪ್ರಥಮ ಉರೂಸ್ ಪ್ರಚಾರ ಸಭೆ ಹಾಗು ಅನುಸ್ಮರಣಾ ಕಾರ್ಯಕ್ರಮ ಉಳ್ಳಾಲ ಅಕ್ಕರೆಕೆರೆಯ ಖುರ್ರತುಸ್ಸಾದಾತ್ ಸುನ್ನೀ ಸೆಂಟರಿನಲ್ಲಿ ನಡೆಯಿತು.  ಕಾರ್ಯಕ್ರಮದ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಕೆ ಎಂ ಜೆ ಅಧ್ಯಕ್ಷರಾದ ಹಸನ್ ಹಾಜಿ ಉಳ್ಳಾಲ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕೋಟೆಕಾರ್ ಜುಮಾ ಮಸ್ಜಿದ್ ಮುದರ್ರಿಸ್ ಅಬ್ದುರ್ರಝ್ಝಾಖ್ ಸಅದಿ ಮದಕ ಅನುಸ್ಮರಣಾ ಭಾಷಣ ಮಾಡಿದರು. ಎಸ್ ವೈ ಎಸ್ ಉಳ್ಳಾಲ ಝೋನ್ ನಾಯಕ ಸಯ್ಯಿದ್ ಖುಬೈಬ್ ತಂಙಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಸೂರಃ ಯಾಸೀನ್ ಪಾರಾಯಣ, ತಹ್ಲೀಲ್ ಸಮರ್ಪಣೆ ನಡೆಸಲಾಯಿತು. ಎಸ್ಸೆಸ್ಸೆಫ್ ನಾಯಕ ಆಶಿಖ್ ಹಿಮಮಿ ಸಖಾಫಿ ನಶೀದಃ ಹಾಡಿದರು. ಝೋನ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಹಳೆಕೋಟೆ, ಕೋಶಾಧಿಕಾರಿ ಶರೀಫ್ ಮಂಚಿಲ, ಝೋನ್ ನಾಯಕರಾದ ಇಸಾಖ್ ಪೇಟೆ, ಎಸ್ ವೈ ಎಸ್ ಶಾಖಾಧ್ಯಕ್ಷರಾದ ಅಶ್ರಫ್ ಝುಹ್ರಿ ಅಕ್ಕರೆಕೆರೆ, ಕೋಶಾಧಿಕಾರಿ ಆರ್ ಕೆ ಮದನಿ, ಕೆ ಎಂ ಜೆ  ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ಅಕ್ಕರೆಕರೆ, ಮುಹಮ್ಮದ್ ಮದನಿ ಹಳೆಕೋಟೆ ಸಹಿತ ಸಂಘಟನಾ ನಾಯಕರು, ಸದಸ್ಯರು, ಹಿತೈಷಿಗಳು ಭಾಗವಹಿಸಿದರು. ...