ಓರ್ವ ಉಸ್ತಾದರ ಮಗಳ ವಿವಾಹಕ್ಕೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ವ್ಯಾಪ್ತಿಯಲ್ಲಿ ಸಂಗ್ರಹಿಸಿದ 46,000 ರೂಪಾಯಿಗಳು ಹಸ್ತಾಂತರಿಸಲಾಯಿತು.
ಎಸ್ ವೈ ಎಸ್ ಅಳೇಕಲ ಬ್ರಾಂಚ್ 12,500 ರೂಪಾಯಿಗಳು ಮತ್ತು ಎಸ್ ವೈ ಎಸ್ ಮದನಿ ನಗರ ಬ್ರಾಂಚ್ 10,000 ರೂಪಾಯಿಗಳು ಈ ಎರಡು ಬ್ರಾಂಚುಗಳ ನಾಯಕರು ಹಸ್ತಾಂತರಿಸಿದರು.
ಆಝಾದ್ ನಗರ, ಪಟ್ಲ, ಕೋಡಿ ಕೋಟೆಪುರ ಸಹಿತ ಇತರ ಬ್ರಾಂಚುಗಳು ಸಂಗ್ರಹಿಸಿದ 23,500 ರೂಪಾಯಿಗಳು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ರವರ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್, ಸೆಂಟರ್ ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ, ಸೆಂಟರ್ ಸಾಂತ್ವನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ ಹಾಗು ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಉಪಸ್ಥಿತರಿದ್ದರು.
ಒಟ್ಟು ಸೆಂಟರ್ ವ್ಯಾಪ್ತಿಯಲ್ಲಿ 46,000 ರೂಪಾಯಿಗಳು ಸಂಗ್ರಹವಾಗಿತ್ತು.
Comments