ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಡಿಸೆಂಬರ್ 19, ಆದಿತ್ಯವಾರ ಸೆಂಟರ್ ಇಸಾಬಃ ಕಾರ್ಯಕರ್ತರಿಂದ ನಡೆಯುವ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಆಝಾದ್ ನಗರದ ಇಸ್ಲಾಮಿಕ್ ನೋಲೇಜ್ ಸೆಂಟರಿನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸೆಂಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ವಹಿಸಿದರು. ಸೆಂಟರ್ ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿದರು. ಎಸ್ ವೈ ಎಸ್ ರಾಜ್ಯ ಸಮಿತಿ ನಾಯಕರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಸೆಂಟರ್ ಅಧೀನದ ಬ್ರಾಂಚುಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸಹಿತ ಪ್ರತೀ ಬ್ರಾಂಚುಗಳ ಇಸಾಬಃ ಸದಸ್ಯರುಗಳು ಉಪಸ್ಥಿತರಿದ್ದರು.
ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಕ್ ಸ್ವಾಗತಿಸಿದರು. ಸೆಂಟರ್ ಇಸಾಬಃ ಕಾರ್ಯದರ್ಶಿ ಶರೀಫ್ ಮಂಚಿಲ ಧನ್ಯವಾದಗೈದರು.
Comments