ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ರಿಫಾಯಿ ಡೇ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಸೆಂಟರ್ ಅಧ್ಯಕ್ಷರಾದ ಬಹು ಶಿಹಾಬುದ್ದೀನ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು. ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ ಅಂತ್ಯ ವಿಶ್ರಮಹೊಂದುತ್ತಿರುವ ಉಳ್ಳಾಲ ದರ್ಗಾ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಯ್ಯಿದ್ ಮದನಿ ಖ.ಸಿ ಮಖಾಂ ಝಿಯಾರತಿನೊಂದಿಗೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉಳ್ಳಾಲ ದರ್ಗಾ ಮುಖ್ಯ ದ್ವಾರದಿಂದ ಉಳ್ಳಾಲ ಪೇಟೆ ತನಕ ಮತ್ತು ಉಳ್ಳಾಲ ಮುಕ್ಕಚ್ಚೇರಿವರೆಗೆ, ಹಾಗು ಮಂಚಿಲ ಮಸೀದಿ ಪರಿಸರ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸೆಂಟರ್ ನಾಯಕರಾದ ಸಯ್ಯಿದ್ ಜಲಾಲ್ ತಂಗಲ್, ಮುಹಮ್ಮದ್ ಇಸ್ಹಾಖ್, ಬಶೀರ್ ಸಖಾಫಿ ಉಳ್ಳಾಲ, ಎಸ್ ವೈ ಎಸ್ ರಾಜ್ಯ ಸಮಿತಿ ಸದಸ್ಯರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಇಸಾಬಃ ಕಾರ್ಯದರ್ಶಿ ಶರೀಫ್ ಮಂಚಿಲ ಸಹಿತ ಸೆಂಟರ್ ನಾಯಕರು, ಸೆಂಟರ್ ಅಧೀನದ ವಿವಿಧ ಬ್ರಾಂಚುಗಳ ನಾಯಕರು, ಇಸಾಬಃ ಸದಸ್ಯರು ಭಾಗವಹಿಸಿ ಸಾಥ್ ನೀಡಿದರು.
Comments