ಉಳ್ಳಾಲ, ಅ.01: ಸಮಸ್ತ ಸೆಂಟಿನರಿ 100ನೇ ವರ್ಷಾಚರಣೆಯ ಅಂಗವಾಗಿ ಕರ್ನಾಟಕದ ಜಿಲ್ಲೆ, ಝೋನ್, ಸರ್ಕಲ್, ಯುನಿಟ್ ಕೇಂದ್ರೀಕರಿಸಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು, ಇದರ ಯಶಸ್ವೀ ಕಾರ್ಯಾಚರಣೆಗಾಗಿ ಸಮಸ್ತ ಸೆಂಟಿನರಿ ಎಕ್ಸಿಕ್ಯೂಟಿವ್ ಕೌನ್ಸಿಲ್ ರಚಿಸಲಾಗುತ್ತಿದೆ. ಇದರ ಭಾಗವಾಗಿ ಉಳ್ಳಾಲ ಝೋನ್ ಇಸಿ ಅಧೀನದ ತೊಕ್ಕೋಟು ಸರ್ಕಲ್ ಸಮಸ್ತ ಸೆಂಟಿನರಿ ಎಕ್ಸಿಕ್ಯೂಟಿವ್ ಕೌನ್ಸಿಲ್ ಅನ್ನು ತೊಕ್ಕೋಟು ತಾಜುಲ್ ಉಲಮಾ ಜುಮುಅಃ ಮಸ್ಜಿದ್ ನಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು. ಸರ್ಕಲ್ ವ್ಯಾಪ್ತಿಯ ಕರ್ನಾಟಕ ಮುಸ್ಲಿಮ್ ಜಮಾಅತ್, ಸುನ್ನೀ ಯುವಜನ ಸಂಘ, ಸುನ್ನೀ ಸ್ಫೂಡೆಂಟ್ಸ್ ಫೆಡರೇಶನ್ ಸಹಿತ ಸುನ್ನೀ ಸಂಘಟನೆಗಳ ಸರ್ಕಲ್ ನಾಯಕರನ್ನು ಒಳಗೊಂಡ ಕೌನ್ಸಿಲ್ ಅನ್ನು ರಚಿಸಲಾಯಿತು. ಉಳ್ಳಾಲ ಝೋನ್ ಇಸಿ ಸಮಿತಿಯ ಅಧ್ಯಕ್ಷ ವಿ ಎ ಮುಹಮ್ಮದ್ ಸಖಾಫಿ ಉಳ್ಳಾಲ ವಿಷಯ ಮಂಡಿಸಿದರು. ತೊಕ್ಕೋಟು ಸರ್ಕಲ್ ಎಕ್ಸಿಕ್ಯೂಟಿವ್ ಕೌನ್ಸಿಲ್ನ ಅಧ್ಯಕ್ಷರಾಗಿ ಸಯ್ಯಿದ್ ಜಲಾಲುದ್ದೀನ್ ತಂಙಳ್ ಉಳ್ಳಾಲ, ಜನರಲ್ ಕನ್ವಿನರ್ ಆಗಿ ನವಾಝ್ ಸಖಾಫಿ ಉಳ್ಳಾಲ, ಕೋಶಾಧಿಕಾರಿಯಾಗಿ ಸಮೀರ್ ಕಿಲೋ ಚೋಯ್ಸ್, ಉಪಾಧ್ಯಕ್ಷರಾಗಿ ಅಬ್ದುಲ್ ರಝ್ಝಾಖ್ ಲತೀಫಿ, ಹನೀಫ್ ಮದನಿ ಉಳ್ಳಾಲ, ಕನ್ದೀನರ್ಗಳಾಗಿ ಶಮೀರ್ ಸೇವಂತಿಗುಡ್ಡೆ, ಅಬ್ದುಲ್ ಲತೀಫ್ ಚೆಂಬುಗುಡ್ಡೆ, ಮಾಧ್ಯಮ ವಕ್ತಾರರಾಗಿ ಜಾಬಿರ್ ಕಲ್ಲಾಪು ಆಯ್ಕೆಯಾದರು. ಸರ್ಕಲ್ ವ್ಯಾಪ್ತಿಯ ಶಾಖಾ ಉಸ್ತುವಾರಿಗಳಾಗಿ ಅ...
Comments