ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಬಡ ಕುಟುಂಬಗಳಿಗೆ ವರ್ಷಂಪ್ರತಿ ವಿತರಿಸಿಕೊಂಡು ಬರುತ್ತಿದ್ದ ರಂಝಾನ್ ಕಿಟ್ ಈ ವರ್ಷವೂ ರಂಝಾನ್ ತಿಂಗಳಲ್ಲಿ ವಿತರಿಸಲಾಯಿತು.
ಉಳ್ಳಾಲ ಅಕ್ಕರೆಕೆರೆಯ ಝುಹ್ರಿ ಪ್ಯಾಲೇಸಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ 23 ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು.
ಬ್ರಾಂಚ್ ಅಧ್ಯಕ್ಷರಾದ ಅಬೂಬಕರ್ ಸಿದ್ದೀಕ್ ಅಕ್ಕರೆಕೆರೆ, ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಬ್ರಾಂಚ್ ನಾಯಕರಾದ ಕುತ್ತಾರ್ ಮುಹಮ್ಮದ್ ಹಳೆಕೋಟೆ, ಸೆಂಟರ್ ಸಾಂತ್ವನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಅಕ್ಕರೆಕೆರೆ, ಬ್ರಾಂಚ್ ದಅವಾ ಕಾರ್ಯದರ್ಶಿ ಅಶ್ರಫ್ ಝುಹ್ರಿ ಅಕ್ಕರೆಕೆರೆ, ಆರ್ ಕೆ ಮದನಿ ಅಮ್ಮೆಂಬಳ, ಹಸನ್ ಹಾಜಿ ಅಕ್ಕರೆಕೆರೆ, ಖಲೀಲ್ ಹಳೆಕೋಟೆ ಹಾಗು ಟೈಲರ್ ಬದ್ರುದ್ದೀನ್ ಉಪಸ್ಥಿತರಿದ್ದರು.
ಕಿಟ್ ವಿತರಣೆಯ ವೀಡಿಯೋ. ಕೆಳಗಿನ ಲಿಂಕ್ ಒತ್ತಿರಿ.
Comments