ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸಸಿ ವಿತರಣಾ ಕಾರ್ಯಕ್ರಮ
ಸುನ್ನೀ ಯುವಜನ ಸಂಘ ಅಳೇಕಲ ಬ್ರಾಂಚ್ ಉಳ್ಳಾಲ ಇದರ ಪ್ರಯುಕ್ತ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸಸಿ ವಿತರಣಾ ಕಾರ್ಯಕ್ರಮವು ಅಳೇಕಲ ಜುಮಾ ಮಸೀದಿಯ ವಠಾರದಲ್ಲಿ ಯು ಎಸ್ ಹಂಝ ಹಾಜಿ ಯವರ ಅಧ್ಯಕ್ಷತೆಯಲ್ಲಿ ಜರುಗಿತು. ಇಬ್ರಾಹೀಮ್ ಸಖಾಫಿ ಸೇರ್ಕಳ ಉಸ್ತಾದರು ದುಆ ಮೂಲಕ ಚಾಲನೆ ನೀಡಿದರು.
ಸ್ಥಳೀಯ ಕೌನ್ಸಿಲರುಗಳಾದ ಯು ಎ ಇಸ್ಮಾಯಿಲ್, ಅಸ್ಗರ್ ಅಲಿ, ಬ್ರಾಂಚ್ ಅಧ್ಯಕ್ಷರಾದ ಮುಹಮ್ಮದ್ ರಿಯಾಝ್, ಕೋಶಾಧಿಕಾರಿ ಅಬ್ದುಲ್ ಲತೀಫ್, SYS ಅಳೇಕಲ ಬ್ರಾಂಚ್ ಉಸ್ತುವಾರಿಯಾದ ಮನ್ಸೂರ್ ಹಳೇಕೋಟೆ, ಖ್ಯಾತ ಪತ್ರಕರ್ತರಾದ B S ಇಸ್ಮಾಯೀಲ್ ಹಾಗೂ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಂಬೂಟನ್, ಪುನರ್ ಪುಲಿ, ನೇರಳೆ, ಸಪೋಟ, ಮಾವಿನಗಿಡ ಮುಂತಾದ ವಿವಿಧ ತಳಿಯ ಸಸಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಅನ್ಸಾರ್ ಅಳೇಕಲ ಸ್ವಾಗತಿಸಿ, ಧನ್ಯವಾದ ಗೈದರು. 3 ಸ್ವಲಾತ್ ನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.
Comments