ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಆಶ್ರಯದಲ್ಲಿ ಅಜ್ಮೀರ್ ಮೌಲಿದ್ ಆತ್ಮೀಯ ಸಂಗಮ ಬ್ರಾಂಚ್ ಅಧ್ಯಕ್ಷರಾದ ಅಬೂ ಮಫಾಝ್ ಮದನಿಯವರ ನೇತ್ರತ್ವದಲ್ಲಿ ಬ್ರಾಂಚ್ ಆಫೀಸ್ ಸಭಾಂಗಣದಲ್ಲಿ ನಡೆಯಿತು.
ಸುಂದರಭಾಗ್ ಬದ್ರಿಯಾ ಜುಮಾ ಮಸೀದಿ ಖತೀಬರಾದ ಶರೀಫ್ ಸಅದಿ ಮಂಜೇಶ್ವರ ಅಜ್ಮೀರ್ ಶೈಖ್ ಅನುಸ್ಮರಣಾ ಭಾಷಣ ಮಾಡಿದರು. ಅತಿಥಿಗಳಾಗಿ ಭಾಗವಹಿಸಿದ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ಹಾಗು ಸೆಂಟರ್ ಕೋಶಾಧಿಕಾರಿ ಅಬ್ದುಸ್ಸಮದ್ ಹಳೆಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು.
ಪ್ರಸ್ತುತ ಸಭೆಯಲ್ಲಿ ಬ್ರಾಂಚ್ ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಅಕ್ಕರೆಕೆರೆ, ಎಸ್ಸೆಸ್ಸೆಫ್ ಅಕ್ಕರೆಕೆರೆ ನಾಯಕರಾದ ಸಿರಾಜ್ ಅಕ್ಕರೆಕೆರೆ, ಎಸ್ಸೆಸ್ಸೆಫ್ ಹಳೆಕೋಟೆ ಶಾಖಾಧ್ಯಕ್ಷ ಹಮೀದ್ ಹಳೆಕೋಟೆ, ಪ್ರಧಾನ ಕಾರ್ಯದರ್ಶಿ ಸದ್ದಾಂ, ಕೋಶಾಧಿಕಾರಿ ಹನೀಫ್ ಹಾಗು ಅಕ್ಕರೆಕೆರೆ ಹಳೆಕೋಟೆ ಎಸ್ಸೆಸ್ಸೆಫ್ ಶಾಖೆಯ ಮತ್ತು ಎಸ್ ವೈ ಎಸ್ ಬ್ರಾಂಚಿನ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಿದರು.












Comments