ಎಸ್ ವೈ ಎಸ್ ಪಟ್ಲ ಬ್ರಾಂಚ್ ಮಹಾಸಭೆ ಪಟ್ಲ ಉಪ್ಪಿನಗೂಡು ಎಸ್ಸೆಸ್ಸೆಫ್ ಕಛೇರಿಯಲ್ಲಿ ಮೊಯ್ದಿನ್ ಪಟ್ಲರವರ ಅಧ್ಯಕ್ಷತೆಯಲ್ಲಿ ಜರುಗಿತು.
ಪಟ್ಲ ತಖ್ವಾ ಜುಮಾ ಮಸೀದಿ ಖತೀಬರಾದ ಎಂ.ಸಿ ಮುಹಮ್ಮದ್ ಫೈಝಿ ಮೋಙಂ ದುಆ ನೆರವೇರಿಸಿ ಸಭೆಗೆ ಚಾಲನೆ ನೀಡಿ ಹಿತೋಪದೇಶ ನೀಡಿದರು.
ಸಭೆಯಲ್ಲಿ ವರದಿ ಹಾಗು ಲೆಕ್ಕಪತ್ರ ಮಂಡಿಸಿ ಅಂಗೀಕಾರ ಪಡೆಯಲಾಯಿತು.ಚುನಾವಣಾ ವೀಕ್ಷಕರಾಗಿ ಆಗಮಿಸಿದ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಹಾಗು ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ರವರ ನೇತ್ರತ್ವದಲ್ಲಿ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.ನೂತನ ಅಧ್ಯಕ್ಷರಾಗಿ ಮೊಯ್ದಿನ್ ಬಿ ಪಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಪಟ್ಲ, ಕೋಶಾಧಿಕಾರಿಯಾಗಿ ಮುಸ್ತಫ ಫ್ರೂಟ್ಸ್ ಪುನರಾಯ್ಕೆಯಾದರು.ಉಪಾಧ್ಯಕ್ಷರಾಗಿ ಇಸಾಕ್ ಹಾಜಿ, ದಅವಾ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್, ಇಸಾಬಃ ಕಾರ್ಯದರ್ಶಿಯಾಗಿ ಶೌಕತ್ ಅಲಿ ಆಯ್ಕೆಯಾದರು.ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹಸನ್, ಅಬೂಬಕರ್ ಆಟೋ, ಮುಸ್ತಫ ಮುಡಿಪೊಡಿ, ಹೈದರ್, ಹಮೀದ್ ಆಯ್ಕೆಯಾದರು.ಸಂಟರ್ ಕೌನ್ಸಿಲರುಗಳಾಗಿ ಹೈದರ್, ಅಬೂಬಕರ್ ಆಟೋ ಆಯ್ಕೆಯಾದರು. ಪ್ರಸ್ತುತ ಸಭೆಯಲ್ಲಿ ಪಟ್ಲ ಬ್ರಾಂಚ್ ಸದಸ್ಯರುಗಳು ಉಪಸ್ಥಿತರಿದ್ದರು.





Comments