ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಮಂಚಿಲ ಬ್ರಾಂಚ್ ಇದರ ಮಹಾಸಭೆ ಮಂಚಿಲ ಮದ್ರಸ ಹಾಲಿನಲ್ಲಿ ಬ್ರಾಂಚ್ ಅಧ್ಯಕ್ಷರಾದ ಸಯೀದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಂಚಿಲ ಜುಮಾ ಮಸೀದಿ ಖತೀಬರಾದ ಅಶ್ರಫ್ ಸಅದಿ ನೆಲ್ಯಾಡಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಎಸ್.ಎಂ ಶರೀಫ್ 2020-21 ನೇ ಸಾಲಿನ ವರದಿ ಮಂಡಿಸಿದರು. ಕೋಶಾಧಿಕಾರಿ ಯು.ಎಂ ಅಶ್ರಫ್ ಲೆಕ್ಕ ಪತ್ರ ಮಂಡಿಸಿದರು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಹಾಗು ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ ರವರ ನೇತ್ರತ್ವದಲ್ಲಿ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ನೂತನ ಅಧ್ಯಕ್ಷರಾಗಿ ಸಯೀದ್ ಮಂಚಿಲ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎಂ ಶರೀಫ್ ಮಂಚಿಲ, ಕೋಶಾಧಿಕಾರಿಯಾಗಿ ಅಶ್ರಫ್ ಅಕ್ಕರೆಕೆರೆ ಪುನರಾಯ್ಕೆಯಾದರು.
ಉಪಾಧ್ಯಕ್ಷರಾಗಿ ಕೆ.ಎಂ ಅಶ್ರಫ್, ದಅವಾ ಕಾರ್ಯದರ್ಶಿಯಾಗಿ ಗಫ್ಫಾರ್ ಸಾಹಿಬ್, ಇಸಾಬಃ ಕಾರ್ಯದರ್ಶಿಯಾಗಿ ಇರ್ಫಾನ್ ಹಳೆಕೋಟೆ, ಸಂಘಟನಾ ಕಾರ್ಯದರ್ಶಿಯಾಗಿ ದಾವೂದ್ ಮಂಚಿಲ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ರಝ್ಝಾಕ್, ಅಬ್ದುಲ್ ಸಲಾಂ, ಹಸೈನಾರ್, ಜಲೀಲ್, ಹಮೀದ್, ರಹೀಂ, ನಝೀರ್ ಆಯ್ಕೆಯಾದರು.
ಸಂಟರ್ ಕೌನ್ಸಿಲರುಗಳಾಗಿ ಅಬ್ದುಲ್ ಹಮೀದ್, ಪಿ.ಎಂ ಬಶೀರ್, ರಹೀಂ, ನಝೀರ್, ಅಶ್ರಫ್, ದಾವೂದ್ ಆಯ್ಕೆಯಾದರು.
ಪ್ರಸ್ತುತ ಸಭೆಯಲ್ಲಿ ಮಂಚಿಲ ಬ್ರಾಂಚ್ ಸದಸ್ಯರುಗಳು ಉಪಸ್ಥಿತಿಯಿದ್ದರು. ಕೊನೆಯಲ್ಲಿ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಎಸ್.ಎಂ ಶರೀಫ್ ಧನ್ಯವಾದಗೈದರು.



Comments