SYS ಉಳ್ಳಾಲ ಸೆಂಟರ್ ಇದರ ಮಾದರೀ ಸೇವೆ.
ಜಾತಿ, ಧರ್ಮದ ಗೋಡೆಯ ದಾಟಿ ಒಟ್ಟು 250 ಕುಟುಂಬಗಳಿಗೆ ರೇಷನ್ ಕಿಟ್ಟುಗಳ ವಿತರಣೆ.
ಉಳ್ಳಾಲ ಆಸುಪಾಸಿನ 35 ಕ್ಕೂ ಮಿಕ್ಕ ಸಯ್ಯಿದ್ ಕುಟುಂಬಗಳಿಗೂ ರೇಷನ್ ಕಿಟ್ ತಲುಪಿಸಿದ SYS ಉಳ್ಳಾಲ.
"ಕೋವಿಡ್ 19" ಎಂಬ ಜಾಗತಿಕ ಕಿಲ್ಲರ್ ವೈರಾಣು ಹರಡುವುದನ್ನು ತಡೆಗಟ್ಟಲು ಘೋಷಿಸಲಾದ ರಾಷ್ಟ್ರೀಯ ಲಾಕ್ ಡೌನ್ ನಿಂದ ಸಂಪೂರ್ಣವಾಗಿ ಸಂಕಷ್ಟಕ್ಕೊಳಗಾಗಿರುವ ಜನರಿಗೆ ಜಾತಿ, ಧರ್ಮ ವ್ಯತ್ಯಾಸವಿಲ್ಲದೆ ತುರ್ತು ಸಹಾಯ ಹಾಗು 250 ಕ್ಕೂ ಮಿಕ್ಕ ಕುಟುಂಬಗಳಿಗೆ ರೇಷನ್ ಕಿಟ್ ತಲುಪಿಸುವ ಮೂಲಕ ಮಾದರೀ ಸೇವೆ ನಡೆಸಿದೆ. ಮುಕ್ಕಚ್ಚೇರಿ ಸುಭಾಷ್ ನಗರದ ದಿನೇಶ್,ಆಝಾದ್ ನಗರ ನಿವಾಸಿ ತಮಿಳು ನಾಡು ಮೂಲದ ಸತೀಶ್ ರಾಮಚಂದ್ರನ್ ಹಾಗು ಸೆಲ್ವೀ ಎಂಬ ಮಹಿಳೆ ಸಹಿತ ಉಳ್ಳಾಲ ಆಸುಪಾಸಿನ 250 ಕ್ಕೂ ಮಿಕ್ಕ ಕುಟುಂಬಗಳು ಜಾತಿ ಧರ್ಮಗಳ ಅಂತರವಿಲ್ಲದೆ ಇದರ ಪ್ರಯೋಜನವನ್ನು ಪಡೆದರು. ಉಳ್ಳಾಲದ 35 ಕ್ಕೂ ಮಿಕ್ಕ ಸಾದಾತುಗಳ ಕುಟುಂಬಗಳಿಗೂ ರೇಷನ್ ಕಿಟ್ಟುಗಳನ್ನು ತಲುಪಿಸಿ ಅಭಿನಂದನಾರ್ಹ ಸೇವೆ ನಡೆಸಿದ SYS ಉಳ್ಳಾಲ ಸೆಂಟರ್ ಎಲ್ಲರಿಗೂ ಮಾದರಿಯಾಗಿದೆ.
ಎಸ್ ವೈ ಎಸ್ ರಾಜ್ಯ ಸದಸ್ಯರೂ, SYS ಉಳ್ಳಾಲ ಸೆಂಟರ್ ನಾಯಕರೂ ಆದ ಬಿಜಿ ಹನೀಫ್ ಹಾಜಿ ಉಳ್ಳಾಲ, ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರಾದ ತ್ವಾಹಿರ್ ಹಾಜಿ, ಆಝಾದ್ ನಗರ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಆರ್ ಆರ್ ರಫೀಕ್, ಸೆಂಟರ್ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ, ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಸೆಂಟರ್ ಸಾಂತ್ವನ ಹಾಗು ಇಸಾಬಾ ಕಾರ್ಯದರ್ಶಿ ಮುಹಮ್ಮದ್ ಕೈಕೋ, ಕಾರ್ಯಕ್ರಮ ನಿರ್ವಹಣಾ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಸತ್ತಾರ್ ಮೇಲಂಗಡಿ, ನವಾಝ್ ಮೇಲಂಗಡಿ ಹಾಜರಿದ್ದರು.
ಹಸಿದವನ ಹಸಿವು ನೀಗಿಸುವ ಸೇವೆ ನಿಜಕ್ಕೂ ಶ್ಲಾಘನೀಯ. ಅಲ್ಲಾಹು ಸ್ವೀಕರಿಸಲಿ. ರೇಷನ್ ಕಿಟ್ಟುಗಳ ವಿತರಣೆಗೆ ತನು, ಮನ, ಧನಗಳಿಂದ ಸಹಕರಿಸಿದ ಸರ್ವರಿಗೂ ಅಲ್ಲಾಹನು ದ್ವಿಲೋಕದಲ್ಲಿ ಯಶಸ್ಸನ್ನು ನೀಡಲಿ. ಆಮೀನ್
✍ ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ














Comments