ಎಸ್ ವೈ ಎಸ್ ಉಳ್ಳಾಲ ಸೆಂಟರ್ ವಾರ್ಷಿಕ ಪ್ರತಿನಿಧಿ ಸಮಾವೇಶ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಅಹ್ಸನಿ ತೋಡಾರ್ ರವರ ಅಧ್ಯಕ್ಷತೆಯಲ್ಲಿ ಉಳ್ಳಾಲ ಮಾಸ್ತಿಕಟ್ಟೆಯ ಹಾಶಿಂ ಟವರ್ ನಲ್ಲಿ ಜರುಗಿತು.
ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಮಾಜಿ ಅಧ್ಯಕ್ಷರಾದ ಉಸ್ಮಾನ್ ಸಖಾಫಿ ಪೊಳಲಿ ದುವಾ ನೆರವೇರಿಸಿದರು. ಸಯ್ಯಿದ್ ಜಲಾಲ್ ತಂಗಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ವೈ ಎಸ್ ಮಂಜೇಶ್ವರ ಮಂಡಲ ಅಧ್ಯಕ್ಷರಾದ ಶರೀಫ್ ಸಅದಿ ಸಂಘಟನಾ ತರಗತಿ ನಡೆಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ತ್ವಾಹಿರ್ ಹಾಜಿ ವಾರ್ಷಿಕ ವರದಿ ಮಂಡಿಸಿದರು. ಬಳಿಕ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಸಯ್ಯಿದ್ ಜಲಾಲ್ ತಂಗಳ್ ಅಳೇಕಲ, ಉಪಾಧ್ಯಕ್ಷರುಗಳಾಗಿ ಬಶೀರ್ ಅಹ್ಸನಿ ತೋಡಾರ್,ತ್ವಾಹಿರ್ ಹಾಜಿ ಮುಕ್ಕಚ್ಚೇರಿ ಹಾಗು ಹೈದರ್ ಅಲಿ ಮುಕ್ಕಚ್ಚೇರಿ, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಹಾಜಿ ಮಾಸ್ತಿಕಟ್ಟೆ, ಜೊತೆ ಕಾರ್ಯದರ್ಶಿಗಳಾಗಿ ಅಲ್ತಾಫ್ ಕುಂಪಲ, ಇಲ್ಯಾಸ್ ಕೈಕೋ ಹಾಗು ಮನ್ಸೂರ್ ಹಳೆಕೋಟೆ, ಕೋಶಾಧಿಕಾರಿಯಾಗಿ ಇಸಾಕ್ ಪೇಟೆ, ಸಂಚಾಲಕರಾಗಿ ಅಶ್ರಫ್ ಹಾಜಿ ಬಳ್ಳಾರಿ, ಮಾಧ್ಯಮ ಕಾರ್ಯದರ್ಶಿಯಾಗಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಹಾಗು ಇಪ್ಪತ್ತೆರಡು ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಬ್ರಾಂಚುಗಳ ಸಮಿತಿ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.ನೂತನ ಜೊತೆ ಕಾರ್ಯದರ್ಶಿ ಅಲ್ತಾಫ್ ಕುಂಪಲ ಧನ್ಯವಾದಗೈದರು.
ಕರ್ನಾಟಕ ಮುಸ್ಲಿಂ ಜಮಾಅತ್ ಕೆ ಎಂ ಜೆ ಮತ್ತು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ಆಶ್ರಯದಲ್ಲಿ ಗ್ರ್ಯಾಂಡ್ ಮೌಲಿದ್ ಮಜ್ಲಿಸ್
ಕರ್ನಾಟಕ ಮುಸ್ಲಿಂ ಜಮಾಅತ್ ಕೆ ಎಂ ಜೆ ಮತ್ತು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಶಾಖೆಯ ಆಶ್ರಯದಲ್ಲಿ ಗ್ರ್ಯಾಂಡ್ ಮೌಲಿದ್ ಮಜ್ಲಿಸ್ ಉಳ್ಳಾಲದ ಅಕ್ಕರೆಕೆರೆಯ ಸಂಘಟನಾ ಕಛೇರಿ ಖುರ್ರತುಸ್ಸಾದಾತ್ ಸುನ್ನೀ ಸೆಂಟರಿನಲ್ಲಿ ನಡೆಯಿತು. ಈ ಸಭೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಮೌಲಿದ್ ಮಜ್ಲಿಸಿನ ನೇತ್ರತ್ವವನ್ನು ಅಬೂ ಮಫಾಝ್ ಮದನಿ ವಹಿಸಿದರು. ಎಸ್ ವೈ ಎಸ್ ಶಾಖಾಧ್ಯಕ್ಷರಾದ ಅಶ್ರಫ್ ಝುಹ್ರಿ ಮಾತನಾಡಿ ವಾರಕ್ಕೊಮ್ಮೆ ಶುಕ್ರವಾರ ಸುಬಹ್ ನಮಾಝ್ ಬಳಿಕದ ಮಜ್ಲಿಸ್, ಮಾಸಿಕ ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸ್ ಹಾಗು ಶಾಖೆಯ ಆಶ್ರಯದಲ್ಲಿ ನಡೆಯುವ ಇತರ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ರಬೇಕೆಂದು ತಿಳಿಸಿದರು. ನವಾಝ್ ಸಖಾಫಿ ಉಳ್ಳಾಲ ದುಆ ನೆರವೇರಿಸಿದರು. ಎಸ್ ವೈ ಎಸ್ ಶಾಖಾ ಕೋಶಾಧಿಕಾರಿ ಆರ್ ಕೆ ಮದನಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಕೆ ಎಂ ಜೆ ಶಾಖಾಧ್ಯಕ್ಷರಾದ ಹಸನ್ ಹಾಜಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಪಟೇಲ್ ಕಂಪೌಂಡ್ ಮತ್ತು ಶಾಖಾ ನಾಯಕರು, ಸದಸ್ಯರು, ಹಿತೈಷಿಗಳು ಭಾಗವಹಿಸಿದರು.
Comments